
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ.) ಸುಳ್ಯ ತಾಲೂಕು ಬೆಳ್ಳಾರೆ ವಲಯದ ಚೊಕ್ಕಾಡಿ ಒಕ್ಕೂಟದ ಕುಳ್ಳಾಜೆ ನಿವಾಸಿ ಮಾಣಿಕ ಇವರಿಗೆ ನಡೆದಾಡಲು ಅಸಾಧ್ಯವಾಗಿದ್ದು, ಇದಕ್ಕಾಗಿ ಶ್ರೀ ಕ್ಷೇತ್ರ ಧರ್ಮಸ್ಥಳದ ಜನಮಂಗಳ ಕಾರ್ಯಕ್ರಮದಡಿಯಲ್ಲಿ ವೀಲ್ ಚೇರನ್ನು ವಿತರಣೆ ಮಾಡಲಾಯಿತು. ಈ ಸಂದರ್ಭ ವಲಯ ಮೇಲ್ವಿಚಾರಕ ಮುರಳೀಧರ, ಸೇವಾ ಪ್ರತಿನಿಧಿ ಶ್ರೀಮತಿ ಹರ್ಷಿತಾ, ಒಕ್ಕೂಟದ ಅಧ್ಯಕ್ಷರಾದ ಪ್ರಸಾದ್ ಕೋಟೆಬನ, ಶ್ರೀಮತಿ ರತ್ನಾವತಿ ಉಪಸ್ಥಿತರಿದ್ದರು.