Ad Widget

ಬಾಳಿಲ : ತುಳು ಲಿಪಿಯ ನಾಮಫಲಕ ಅನಾವರಣ

ಬಾಳಿಲದಲ್ಲಿ ತುಳು ಲಿಪಿಯ ನಾಮಫಲಕ ಹಾಕುವ ಕಾರ್ಯಕ್ರಮ ಫೆ 06 ರಂದು ನಡೆಯಿತು. ನಾಮ ಫಲಕವನ್ನು ಶ್ರೀ ಇಷ್ಟದೇವತಾ ಉಳ್ಳಾಕುಲು ಸೇವಾ ಸಮಿತಿ (ರಿ.) ಅಯ್ಯನಕಟ್ಟೆ ಇದರ ಅಧ್ಯಕ್ಷ ಲಕ್ಷ್ಮಣ ಗೌಡ ಬೇರಿಕೆ ಅನಾವರಣಗೊಳಿಸಿದರು. ಕಾರ್ಯಕ್ರಮದ ಮುಖ್ಯ ಅತಿಥಿಯಾದ ತುಳು ಲಿಪಿ ಶಿಕ್ಷಕರು ಹಾಗೂ ಜೈ ತುಲುನಾಡ್ ಸಂಘಟನೆಯ ಉಪ ಸಂಘಟನಾ ಕಾರ್ಯದರ್ಶಿ ಜಗದೀಶ ಗೌಡ ಕಲ್ಕಳ ಮಾತನಾಡಿ ತುಳು ಲಿಪಿ ಬೆಳವಣಿಗೆಗೆ ತುಳುನಾಡಿನ ಅಲ್ಲಲ್ಲಿ ಕೆಲಸ ಕಾರ್ಯ ನಡೆಯುತ್ತಿದೆ, ಹಾಗೆಯೇ ಬಾಳಿಲದಲ್ಲಿ 2 ನೇ ತುಳು ಲಿಪಿಯ ನಾಮಫಲಕ ಹಾಕುವ ಕಾರ್ಯ ನಡೆಯುತ್ತಿದೆ. ಪ್ರತಿ ಗ್ರಾಮದಲ್ಲೂ ತುಳು ಲಿಪಿಯ ಹೆಸರು ಹಾಕಬೇಕು. ತುಳು ಲಿಪಿ ಮತ್ತು ತುಳು ಬಾಷೆಯನ್ನು ತುಳುವರಾದ ನಾವೇ ಉಳಿಸಬೇಕು ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಹಿರಿಯ ದೈವ ನರ್ತಕರಾದ ಬಾಬು ಅಜಲ, ಪತ್ರಕರ್ತ ಈಶ್ವರ ವಾರಣಾಶಿ ಉಪಸ್ಥಿತಿ ಇದ್ದರು. ದೈವಶಕ್ತಿ ಯುವ ಸಂಘದ ಅಧ್ಯಕ್ಷ ಜಯರಾಮ ಅಜಲ ಅತಿಥಿಗಳನ್ನು ಸ್ವಾಗತಿಸಿ ಉದ್ಘಾಟನಾ ಕಾರ್ಯಕ್ರಮವನ್ನು ನಡೆಸಿಕೊಟ್ಟರು.
ಈ ಸಂದರ್ಭದಲ್ಲಿ ಗ್ರಾಮಸ್ಥರಾದ ಪುರುಷೊತ್ತಮ ಮುಪ್ಪೇರ್ಯ, ಬಾಬು ಮರುವಂಜ, ಜಲಜಾಕ್ಷಿ ಬಾಳಿಲ, ನಾಗೇಶ್ ಬಾಳಿಲ, ನವೀನ್ ಬಾಳಿಲ, ದಯಾನಂದ ಗೌಡ ಉಪಸ್ಥಿತಿ ಇದ್ದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading