ಪರಿವಾರ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಜಾತ್ರೋತ್ಸವ ಕಾರ್ಯಕ್ರಮ ವಿಜ್ರಂಭಣೆಯಿಂದ ನಡೆಯುತ್ತಿದೆ. ಇಂದು (ಫೆ.5) ರಂದು ಪೂರ್ವಾಹ್ನ ಶ್ರೀ ದೇವರ ಬಲಿಹೊರಟು ದರ್ಶನ ಬಲಿ, ಬಟ್ಟಲು ಕಾಣಿಕೆ ಅನ್ನಸಂತರ್ಪಣೆ ನಡೆಯಿತು. ಈ ಸಂದರ್ಭದಲ್ಲಿ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ಪದ್ಮನಾಭ ರೈ ಅಗೋಳಿ ಬೈಲುಗುತ್ತು, ದೇವಳದ ಮಾಜಿ ಆಡಳಿತಾಧಿಕಾರಿ ಡಾ. ದೇವಿಪ್ರಸಾದ್ ಕಾನತ್ತೂರ್, ವ್ಯವಸ್ಥಾಪನಾ ಸಮಿತಿ ಸದಸ್ಯರು, ಅಪಾರ ಸಂಖ್ಯೆಯ ಭಕ್ತಾಧಿಗಳು ಉಪಸ್ಥಿತರಿದ್ದರು.
ಫೆ. 5 ರಂದು ರಾತ್ರಿ ದೀಪೋತ್ಸವ, ಮಹಾಪೂಜೆ, ಶ್ರೀ ದೇವರ ಬಲಿ ಹೊರಟು ವಸಂತ ಕಟ್ಟೆಪೂಜೆ,ದೈವಗಳ ನರ್ತನ ಸೇವೆ, ಶ್ರೀದೇವರ ಉತ್ಸವ , ಅನ್ನಸಂತರ್ಪಣೆ ಜರುಗಲಿದೆ. ಫೆ.6 ರಂದು ಬೆಳಿಗ್ಗೆ ಶ್ರೀ ದೇವರ ಬಲಿ ಹೊರಟು ಉತ್ಸವ, ಮಹಾಪೂಜೆ, ರಾತ್ರಿ ಗಂ.9 ರಿಂದ ಬ್ರಹ್ಮರಥೋತ್ಸವ, ಕಾಚು ಕುಜುಂಬ ದೈವದ ನರ್ತನ ಸೇವೆ,ಮಹಾಪೂಜೆ, ಶ್ರೀ ಭೂತಬಲಿ, ಶಯನೋತ್ಸವ, ಕವಾಟ ಬಂಧನ ಕಾರ್ಯಕ್ರಮ ನಡೆಯಲಿದೆ.