Ad Widget

ಜೆಸಿಐ ಸುಳ್ಯ ಸಿಟಿ ವತಿಯಿಂದ ರಾಷ್ಟ್ರೀಯ ಭಾವೈಕ್ಯತಾ ದಿನಾಚರಣೆ

ಜೆಸಿಐ ಸುಳ್ಯ ಸಿಟಿ ವತಿಯಿಂದ ರಾಷ್ಟ್ರೀಯ ಭಾವೈಕ್ಯತಾ ದಿನಾಚರಣೆಯನ್ನು ಫೆ. 02 ರಂದು ಕರ್ನಾಟಕ ಪಬ್ಲಿಕ್ ಸ್ಕೂಲ್ ಗಾಂಧಿನಗರ ಸುಳ್ಯ, ಮ್ಯಾಟ್ರಿಕ್ಸ್ ಎಜುಕೇಷನ್ ಇನ್ಸ್ಟಿಟ್ಯೂಷನ್ ಸುಳ್ಯ ಮತ್ತು ಸರಕಾರಿ ಪ್ರಥಮ ದರ್ಜೆ ಕಾಲೇಜು ಬೆಟ್ಟಂಪಾಡಿಯಲ್ಲಿ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಭಾವೈಕ್ಯತಾ ದಿನದ ಪ್ರತಿಜ್ಞಾ ವಿಧಿ ಬೋಧನೆಯನ್ನು ಕರ್ನಾಟಕ ಪಬ್ಲಿಕ್ ಸ್ಕೂಲ್ ಗಾಂಧಿನಗರ ಸುಳ್ಯದಲ್ಲಿ ಜೆಸಿಐ ಸುಳ್ಯ ಸಿಟಿಯ ಕೋಶಾಧಿಕಾರಿ ಚಂದ್ರಶೇಖರ್ ಡಿ ಎಸ್, ಮ್ಯಾಟ್ರಿಕ್ಸ್ ಎಜುಕೇಷನ್ ಇನ್ಸ್ಟಿಟ್ಯೂಷನ್ ಸುಳ್ಯದಲ್ಲಿ ಜೆಸಿಐ ಸುಳ್ಯ ಸಿಟಿಯ ಉಪಾಧ್ಯಕ್ಷರಾದ ಬಶೀರ್ ಯು ಪಿ ಬೆಳ್ಳಾರೆ ಮತ್ತು ಸರಕಾರಿ ಪ್ರಥಮ ದರ್ಜೆ ಕಾಲೇಜು ಬೆಟ್ಟಂಪಾಡಿಯಲ್ಲಿ ಸುಳ್ಯ ಸಿಟಿ ಸ್ತಾಪಕರಾದ ಮನಮೋಹನ್ ಬಳ್ಳಡ್ಕರವರು ಬೋಧಿಸಿದರು.

. . . . . . . . .

ಅಧ್ಯಕ್ಷರಾದ ಜೆಸಿ ಚಂದ್ರಶೇಖರ ಕನಕಮಜಲು ಅಧ್ಯಕ್ಷೀಯ ಮಾತುಗಳನ್ನಾಡಿದರು. ಕಾರ್ಯಕ್ರಮದಲ್ಲಿ ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀಮತಿ ಪದ್ಮಿನಿ, ಕಾರ್ಯದರ್ಶಿ ಅಶ್ವಥ್ ಅಡ್ಕಾರ್, ಸದಸ್ಯರಾದ ಜೆಸಿ ರಂಜಿತ್ ಪಿ ಜೆ, ಜೇಸೀ ಸಂಪ್ರೀತ ಜೇಸೀ ನಯನ ಮುಡೂರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಶಾಲಾ ಶಿಕ್ಷಕರಾದ ಅರುಣ್ ಕುಮಾರ್ ಸ್ವಾಗತಿಸಿ, ಚಂದ್ರಶೇಖರ ಡಿ ಎಸ್ ವಂದಿಸಿದರು.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading