ವಳಲಂಬೆ : ವಿಜ್ರಂಭಣೆಯಿಂದ ನಡೆದ ದೇವರ ಉತ್ಸವ ಬಲಿ – ನಾಳೆ ರಕ್ತೇಶ್ವರಿ, ಧೂಮಾವತಿ ದೈವಗಳ ನೇಮೋತ್ಸವ
ಗುತ್ತಿಗಾರು ಗ್ರಾಮದ ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಇಂದು ಗಣಪತಿ ಹೋಮ, ಏಕದಶ ರುದ್ರಾಭಿಷೇಕ, ನವಕ ಕಲಶಾಭಿಷೇಕ, ಮಹಾಪೂಜೆ ಮತ್ತು ಅನ್ನಸಂತರ್ಪಣೆ, ಚೆಂಡೆವಾದನ, ದೈವಗಳ ಭಂಡಾರ ತೆಗೆಯುವ ಕಾರ್ಯಕ್ರಮ, ಚೆಂಡೆವಾದನ, ರಾತ್ರಿ ಮಹಾಪೂಜೆ ಮತ್ತು ಅನ್ನಸಂತರ್ಪಣೆ ನಡೆಯಿತು. ರಾತ್ರಿ ದೇವರ ಉತ್ಸವಬಲಿ ,ವಸಂತ ಕಟ್ಟೆ ಪೂಜೆ, ಬಟ್ಟಲು ಕಾಣಿಕೆ, ಪ್ರಸಾದ ವಿತರಣೆ ನಡೆಯಿತು. ಫೆ. 02 ರಂದು ಬೆಳಿಗ್ಗೆ 5:00 ಗಂಟೆಗೆ ಉಳ್ಳಾಕ್ಲು-ಉಳ್ಳಾಲ್ತಿ ನೇಮ, ಬೆಳಿಗ್ಗೆ 7:00 ಗಂಟೆಗೆ ಕುಮಾರ ದೈವದ ನೇಮ, ಬೆಳಿಗ್ಗೆ 8:00 ಗಂಟೆಗೆ ಶ್ರೀ ದೇವರಿಗೆ ಪೂಜೆ, ಬೆಳಿಗ್ಗೆ 8:30 ಕ್ಕೆ ರಕ್ತೇಶ್ವರಿ ದೈವದ ನೇಮ, ಬೆಳಿಗ್ಗೆ 9:30 ಕ್ಕೆ ಧೂಮಾವತಿ ದೈವದ ನೇಮ, ಮದ್ಯಾಹ್ನ 12:00 ಗಂಟೆಗೆ ಮಹಾಪೂಜೆ, ಮದ್ಯಾಹ್ನ 12:30 ಕ್ಕೆ ದೈವಗಳ ಪ್ರಸಾದ ವಿತರಣೆ ಮತ್ತು ಅನ್ನಸಂತರ್ಪಣೆ ನಡೆಯಿತು. ಸಂಜೆ 5:00 ಗಂಟೆಗೆ ಗುಳಿಗ ಕೋಲ, ಪ್ರಸಾದ ವಿತರಣೆ ನಡೆಯಲಿದೆ.