
ನೆಹರು ಮೆಮೋರಿಯಲ್ ಕಾಲೇಜು, ಸುಳ್ಯ ಇಲ್ಲಿನ ಸಂಶೋಧನಾ ಘಟಕ ವತಿಯಿಂದ “ಸಂಶೋಧನಾ ನೈತಿಕತೆ ಮತ್ತು ಕೃತಿಚೌರ್ಯ” ಎಂಬ ವಿಷಯದ ಕುರಿತು ಒಂದು ದಿನದ ಮಾಹಿತಿ ಕಾರ್ಯಾಗಾರ ಇತ್ತೀಚೆಗೆ ನಡೆಯಿತು. ನಿಟ್ಟೆಯ ಪಾರ್ಮಸಟಿಕಲ್ ಕಾಲೇಜಿನ ಸಹ ಪ್ರಾಧ್ಯಾಪಕ ಡಾ. ವಿಜಯಕುಮಾರ್ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಉಪನ್ಯಾಸ ನೀಡಿದರು. ಕಾಲೇಜಿನ ಪ್ರಾಂಶುಪಾಲ ಡಾ. ಪೂವಪ್ಪ ಕಣಿಯೂರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಐಕ್ಯೂಎಸಿ ಮತ್ತು ನ್ಯಾಕ್ ಸಂಯೋಜಕಿ ರತ್ನಾವತಿ ಡಿ, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ರುದ್ರಕುಮಾರ್ ಉಪಸ್ಥಿತರಿದ್ದರು. ಸಂಶೋಧನಾ ಘಟಕದ ಸಂಚಾಲಕಿ ಡಾ. ವಿಜಯಲಕ್ಷ್ಮಿ ಎನ್. ಎಸ್ ಕಾರ್ಯಕ್ರಮವನ್ನು ಸಂಯೋಜಿಸಿ, ಅತಿಥಿಗಳನ್ನು ಪರಿಚಯಿಸಿ, ವಂದನಾರ್ಪಣೆಗೈದರು, ಉಪನ್ಯಾಸಕರಾದ ಕು. ಪ್ರಣೀತಾ ಪ್ರಾರ್ಥಿಸಿ, ಶ್ರೀಮತಿ ಮಮತಾ ಕೆ ಕಾರ್ಯಕ್ರಮ ನಿರೂಪಿಸಿದರು.