ಮರ್ಕಂಜದಲ್ಲಿ ಆರಂಭವಾಗಿರುವ ಗಣಿಗಾರಿಕೆ ಭಾರಿ ಸ್ಪೋಟಕಗಳನ್ನು ಬಳಸಿ ನಡೆಯುತ್ತಿದ್ದು ಜನರಲ್ಲಿ ಆತಂಕ ಮನೆ ಮಾಡಿದೆ. ಗಣಿಗಾರಿಕೆ ಮುಂದುವರೆದರೇ ಸಮೀಪದ ಮನೆ,ಪರಿಸರ ಹಾಗೂ ಕಲ್ಲು ಸಾಗಾಟದಿಂದ ರಸ್ತೆ ಕೂಡ ಹಾನಿಯಾಗಲಿದೆ ಹಾಗೂ ಭಾರಿ ಸ್ಪೋಟಕ ಬಳಸುವುದರಿಂದ ಕೆರೆ,ಬಾವಿ ಹಾಗೂ ಅಂತರ್ಜಲ ಕೂಡ ಬರಿದಾಗುವ ಭೀತಿ ಜನರಲ್ಲಿ ಮೂಡಿದೆ. ಈ ಹಿನ್ನೆಲೆಯಲ್ಲಿ ಸಮಿತಿ ರಚಿಸಿ ಹೋರಾಟಕ್ಕಿಳಿದಿದ್ದಾರೆ. ಗಣಿಗಾರಿಕೆಯನ್ನು ನಿಲ್ಲಿಸಬೇಕೆಂದು ಹೋರಾಟ ಸಮಿತಿ ವತಿಯಿಂದ ತಹಶೀಲ್ದಾರ್ ಮತ್ತು ಸಂಬಂಧಪಟ್ಟ ಗಣಿ ಇಲಾಖಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ. ಈ ಸಂದರ್ಭದಲ್ಲಿ ಹೋರಾಟ ಸಮಿತಿಯ ಅಧ್ಯಕ್ಷ, ಜಿ.ಪಂ.ಸದಸ್ಯ ಹರೀಶ್ ಕಂಜಿಪಿಲಿ, ಕಾರ್ಯದರ್ಶಿ ಮುರಳಿಧರ್ ರೈ, ಮರ್ಕಂಜ ಗ್ರಾ.ಪಂ.ಸದಸ್ಯ ರಾಜೇಂದ್ರ ಕೊಚ್ಚಿ ಮತ್ತಿತರರು ಉಪಸ್ಥಿತರಿದ್ದರು.
- Friday
- November 22nd, 2024