ಐವರ್ನಾಡು ಗ್ರಾಮ ಪಂಚಾಯತ್‌ನ 1 ನೇ ವಾರ್ಡ್‌ನಿಂದ ಸಾಮಾನ್ಯ ಸ್ಥಾನಕ್ಕೆ ಬಿಜೆಪಿ ಬೂತ್ ಸಮಿತಿಯಿಂದ ಸ್ಪರ್ಧಿಸಿದ್ದ ದೇವಿಪ್ರಸಾದ್ ಕೊಪ್ಪತ್ತಡ್ಕ 461 ಮತಗಳನ್ನು ಪಡೆದು ಭರ್ಜರಿ ಗೆಲುವು ಸಾಧಿಸಿದ್ದಾರೆ.
ಪ್ರತಿಸ್ಪರ್ಧಿ ಬಿಜೆಪಿ ಮಂಡಲ ಸಮಿತಿಯ ಅಭ್ಯರ್ಥಿ ರಕ್ಷಿತ್ ಸಾರಕೂಟೇಲು 160 ಮತಗಳು, ಕಾಂಗ್ರೆಸ್ ಬೆಂಬಲಿತ ಸುಪ್ರಿತ್ ಕೊಯಿಲ 125 ಮತಗಳನ್ನು ಪಡೆದು ಪರಾಭವಗೊಂಡಿದ್ದಾರೆ. ಸಾಮಾನ್ಯ ಮಹಿಳಾ ಸ್ಥಾನಕ್ಕೆ ಬಿಜೆಪಿ ಬೂತ್ ಸಮಿತಿಯಿಂದ ಸ್ಪರ್ಧಿಸಿದ್ದ ಸುಜಾತ ಪವಿತ್ರಮಜಲು 468 ಮತಗಳನ್ನು ಪಡೆದು ವಿಜಯಿಯಾದರೆ, ಪ್ರತಿಸ್ಪರ್ಧಿ ಮಂಡಲ ಸಮಿತಿ ಅಭ್ಯರ್ಥಿ ರೇವತಿ ಬೋಳುಗುಡ್ಡೆ 181 ಮತಗಳನ್ನು, ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ನಳಿನಿ ನೆಕ್ರೆಪ್ಪಾಡಿ 144 ಮತ ಪಡೆದು ಪರಾಭವಗೊಂಡಿದ್ದಾರೆ. ಅನುಸೂಚಿತ ಜಾತಿ ಮಹಿಳಾ ಸ್ಥಾನಕ್ಕೆ ಬಿಜೆಪಿ ಬೂತ್ ಸಮಿತಿಯಿಂದ ಸ್ಪರ್ಧಿಸಿದ್ದ ನಳಿನಿ ಕೋಡ್ತಿಲು 392 ಮತಗಳನ್ನು ಪಡೆದು ಗೆಲುವು ಸಾಧಿಸಿದರೆ, ಕಾಂಗ್ರೆಸ್ ಬೆಂಬಲಿತ ವಸಂತಿ ಕೊಯಿಲ 89 ಮತಗಳನ್ನು ಪಡೆದು ಪರಾಭವಗೊಂಡಿದ್ದಾರೆ.