Ad Widget

ಎಣ್ಮೂರು ಬೂತ್ ನಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಿಂದ ಮತಯಾಚನೆ

ಎಣ್ಮೂರು ಬೂತ್ ನಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಾದ ಮಾಯಿಲಪ್ಪ ಗೌಡ, ರಾಜೀವಿ ರೈ, ಸುಮಿತ್ರಾ ಹಾಗೂ ಜ್ಯೋತಿ ಎನ್ ಕಾರ್ಯಕರ್ತರೊಂದಿಗೆ ಮತಯಾಚನೆಯಲ್ಲಿ ನಿರತರಾಗಿದ್ದಾರೆ.

ಎಣ್ಮೂರು ಬೂತ್ ನಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಿಂದ ಮತಯಾಚನೆ

ಎಣ್ಮೂರು ಬೂತ್ ನಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಾದ ಪ್ರವೀಣ್ ಹೇಮಳ, ದಿವ್ಯಾ ಯೋಗಾನಂದ, ರೇವತಿ ರಘು ಹಾಗೂ ಸವಿತಾ ಕಾರ್ಯಕರ್ತರೊಂದಿಗೆ ಮತಯಾಚನೆಯಲ್ಲಿ ನಿರತರಾಗಿದ್ದಾರೆ.
Ad Widget

ಕಲ್ಮಡ್ಕ : ಎಸ್ ಡಿ ಪಿ ಐ ಬೆಂಬಲಿತ ಹಮೀದ್ ಮರಕ್ಕಡ ಮತಯಾಚನೆ

ಕಲ್ಮಡ್ಕ ಗ್ರಾ.ಪಂ.ನ ಒಂದನೇ ವಾರ್ಡ್ ನ ಎಸ್ ಡಿ ಪಿ ಐ ಬೆಂಬಲಿತ ಅಭ್ಯರ್ಥಿ ಹಮೀದ್ ಮರಕ್ಕಡ ಪಡ್ಪಿನಂಗಡಿ ಶಾಲಾ ಬೂತ್ ಬಳಿ ಕೊನೆ ಹಂತದ ಮತಯಾಚನೆ ನಡೆಸಿದರು. ಈ ಸಂದರ್ಭದಲ್ಲಿ ಬೆಂಬಲಿಗರಾದ ಅಶ್ರಫ್ ಮರಕ್ಕಡ, ಜಕಾರಿಯ ಮುಚ್ಚಿಲ ಮತ್ತಿತರರಿದ್ದರು.

ನೆಟ್ವರ್ಕ್ ಸಮಸ್ಯೆಯಿಂದ ಕಂಗಲಾದ ಕೆಲ ಗ್ರಾಮ ಪಂಚಾಯತ್ ಸಿಬ್ಬಂದಿ

ಗ್ರಾಮ ಪಂಚಾಯತ್ ಚುನಾವಣೆಯ ಮತದಾನ ಬಗೆಗಿನ ಕ್ಷಣಕ್ಷಣದ ಮಾಹಿತಿಯನ್ನು ಸಿಬ್ಬಂದಿಗಳು ವೆಬ್ಸೈಟ್ ಅಪ್ ಲೋಡ್ ಮಾಡಬೇಕಾಗಿರುವುದರಿಂದ ನೆಟ್ವರ್ಕ್ ಸಮಸ್ಯೆ ಹಲವಾರು ಪಂಚಾಯತ್ ಸಿಬ್ಬಂದಿಗಳನ್ನು ಕಾಡಲಾರಂಭಿಸಿದೆ. ಪ್ರತಿ ಬೂತ್ ಮಟ್ಟದಲ್ಲಿ ಮತದಾನ ಪ್ರಕ್ರಿಯೆಯ ಪರ್ಸಂಟೇಜ್ ನ್ನು ಪ್ರತಿ 2 ಗಂಟೆಗೊಮ್ಮೆ ರಾಜ್ಯ ಚುನಾವಣಾ ಆಯೋಗದ ವೆಬ್ ಸೈಟ್ ಗೆ ಅಪ್ ಡೇಟ್ ಮಾಡಬೇಕಾಗುತ್ತದೆ. ಇದೀಗ ನೆಟ್ವರ್ಕ್ ಸಮಸ್ಯೆಯಿಂದ...

ನಡುಗಲ್ಲು : ಬಿಜೆಪಿ ಭದ್ರ ಕೋಟೆಗೆ ಶಾಸಕ ಎಸ್. ಅಂಗಾರ ಭೇಟಿ

ನಾಲ್ಕೂರು ಗ್ರಾಮದ ನಡುಗಲ್ಲು ಬಿಜೆಪಿ ಭದ್ರ ಕೋಟೆಗೆ ಶಾಸಕ ಎಸ್. ಅಂಗಾರ ಭೇಟಿ ಕಾರ್ಯಕರ್ತರ ಜತೆ ಮಾತನಾಡಿದರು. ಈ ಸಂದರ್ಭದಲ್ಲಿ ಅಭ್ಯರ್ಥಿಗಳಾದ ವಿಜಯಕುಮಾರ್ ಚಾರ್ಮತ, ಹರೀಶ್ ಕೊಯಿಲ,ಪ್ರಮೀಳಾ ಎರ್ದಡ್ಕ ಕೋಡಿಬೈಲ್, ಲೀಲಾವತಿ ಅಂಜೇರಿ, ಗುತ್ತಿಗಾರು ಪ್ರಾ.ಕೃ.ಪ.ಸ.ಸಂಘದ ನಿರ್ದೇಶಕ ನವೀನ್ ಬಾಳುಗೋಡು ಹಾಗೂ ಅಪಾರ ಸಂಖ್ಯೆಯ ಕಾರ್ಯಕರ್ತರು ಉಪಸ್ಥಿತರಿದ್ದರು.

ಎಣ್ಮೂರಿನಲ್ಲಿ ಹಕ್ಕು ಚಲಾಯಿಸುತ್ತಿರುವ ಮತದಾರರು

ಎಡಮಂಗಲ ಗ್ರಾ.ಪಂ.ನ ಮತದಾನವು ಎಣ್ಮೂರು ಹಿ.ಪ್ರಾ. ಶಾಲೆಯ ಮತಕೇಂದ್ರದಲ್ಲಿ ನಡೆಯುತ್ತಿದ್ದು, ಮತದಾರರು ತಮ್ಮ ಹಕ್ಕು ಚಲಾಯಿಸುತ್ತಿದ್ದಾರೆ.

ಪುತ್ತೂರು ಸಹಾಯಕ ಆಯುಕ್ತರಾದ ಯತೀಶ್ ಉಳ್ಳಾಲ್ ಮತದಾನ ಕೇಂದ್ರಗಳಿಗೆ ಭೇಟಿ – ಪರಿಶೀಲನೆ

ಪುತ್ತೂರು ಸಹಾಯಕ ಆಯುಕ್ತರಾದ ಯತೀಶ್ ಉಳ್ಳಾಲ್ ರವರು ಜಾಲ್ಸೂರು ಗ್ರಾಮ ಪಂಚಾಯತ್ ಚುನಾವಣೆಯ ನಾಲ್ಕನೇ ವಾರ್ಡಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮತದಾನ ಕೇಂದ್ರದಲ್ಲಿ ಏಜೆಂಟರ ಬಳಿ ಹೆಚ್ಚು ಜನ ಕುಳಿತುಕೊಳ್ಳಲು ಅವಕಾಶ ಮಾಡಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಯಾವುದೇ ಮತದಾರರು ಚುನಾವಣಾ ಕೇಂದ್ರದ ಒಳಗಡೆ ಏಜೆಂಟರ ಬಳಿ ಹೋಗದಂತೆ ನೋಡಿಕೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಿದರು....

ಬಾಳಿಲ : ಮತದಾನದಲ್ಲಿ ನಿರತರಾಗಿರುವ ಮತದಾರರು

ಬಾಳಿಲ ಗ್ರಾ.ಪಂ.ನ ಮತದಾನ ಪ್ರಕ್ರಿಯೆ ನಡೆಯುತ್ತಿದ್ದು, ಒಟ್ಟು 5 ಮತಕೇಂದ್ರಗಳಲ್ಲಿ ಮತದಾರರು ಮತದಾನದಲ್ಲಿ ನಿರತರಾಗಿರುವ ದೃಶ್ಯ ಕಂಡುಬಂದಿತು. ಮಾಸ್ಕ್, ಸ್ಯಾನಿಟೈಸರ್, ಸಾಮಾಜಿಕ ಅಂತರ ಪಾಲಿಸಲಾಗಿತ್ತು.

ಜಾಲ್ಸೂರು : ಮೂರನೇ ವಾರ್ಡ್ ನಲ್ಲಿ ಬಿರುಸಿನ ಮತದಾನ

ಜಾಲ್ಸೂರು ಗ್ರಾಮದ 3ನೇ ವಾರ್ಡ್ ನಲ್ಲಿ ಬಿರುಸಿನ ಮತದಾನ ನಡೆಯಿತು.

ಜಾಲ್ಸೂರು : ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಿಂದ ಮತಯಾಚನೆ

ಜಾಲ್ಸೂರು ಗ್ರಾಮ ಪಂಚಾಯತ್ ಚುನಾವಣೆಯ ಎರಡನೇ ವಾರ್ಡ್ ಮತಕ್ಷೇತ್ರದ ಬಿಜೆಪಿ ಬೆಂಬಲಿತ ಅಭ್ಯರ್ಥಿ ವೆಂಕಟೇಶ ನಡುಬೆಟ್ಟು, ತಿಲಕ ಎನ್ ಪಿ ಗೀತಾ ಚಂದ್ರಹಾಸ ಮತ್ತು ಬೆಂಬಲಿಗರೊಂದಿಗೆ ಮತಯಾಚಿಸಿದರು.
Loading posts...

All posts loaded

No more posts

error: Content is protected !!