- Saturday
- November 23rd, 2024
ಕೊಲ್ಲಮೊಗ್ರ ಬೂತ್ ನಲ್ಲಿ ಬಿಜೆಪಿ ಕಾರ್ಯಕರ್ತರನ್ನು ಶಾಸಕ ಎಸ್.ಅಂಗಾರ ಭೇಟಿ ಮಾಡಿ ಮಾತುಕತೆ ನಡೆಸಿದರು. ಈ ಸಂದರ್ಭದಲ್ಲಿ ಅಭ್ಯರ್ಥಿಗಳಾದ ಮಾಧವ ಚಾಂತಾಳ, ಉದಯ ಕೊಪ್ಪಡ್ಕ, ಜಯಶ್ರೀ ಎಸ್. , ರೈತ ಮೋರ್ಚಾ ರಾಜ್ಯ ಉಪಾಧ್ಯಕ್ಷ ಎ.ವಿ.ತೀರ್ಥರಾಮ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
ಅಜ್ಜಾವರ ಗ್ರಾಮದ ಮುಳ್ಯ ಅಟ್ಲೂರು (5ನೇ ವಾರ್ಡ್)ಪಕ್ಷೇತರ ಅಭ್ಯರ್ಥಿ ಅಶೋಕ್ ಕುಮಾರ್ ರವರೊಂದಿಗೆ ಬೆಂಬಲಿಗರು ಮತಯಾಚಿಸಿದರು.
ಮತದಾನ ಮಾಡಲು ಹಲವರು ಹೋಗದೇ ಇರುವ ಸಂದರ್ಭದಲ್ಲಿ ತೀರ ಬಡತನದಲ್ಲಿರುವ ಕಟ್ಟಿಗೆ ಆಯ್ದು ಹೋಟೆಲ್ ಗೆ ಮಾರಿ ಜೀವನ ಸಾಗಿಸುತ್ತಿರುವ ಈ ದಂಪತಿಗಳು ಎಲ್ಲರಿಗೆ ಮಾದರಿಯೆನಿಸಿದ್ದಾರೆ. ಕಣ್ಣು ಕಾಣದೇ ಇರುವ ಪತಿ ಗುರುವರನ್ನು ಕರೆದುಕೊಂಡು ಪ್ರತಿದಿನ ಕಟ್ಟಿಗೆ ಸಂಗ್ರಹಕ್ಕೆ ಹೋಗುವ ಪತ್ನಿ ಐತೆ ಕೂಡ ಮತದಾನಕ್ಕೆ ಜತೆಯಾಗಿ ಬಂದು ಮಾದರಿ ಮತದಾರರೆನಿಸಿಕೊಂಡರು.
ಅಮರಪಡ್ನೂರು ಗ್ರಾಮದ ವಾರ್ಡ್ 1ರ ಅಜ್ಜನಗದ್ದೆ ಬೂತ್ ನಲ್ಲಿ ಬಿಜೆಪಿ ಬಂಡಾಯ ಅಭ್ಯರ್ಥಿ ರಾಧಾಕೃಷ್ಣ ಗೌಡ ಕೊರತ್ಯಡ್ಕ ಮತ್ತು ಬೆಂಬಲಿಗರನ್ನು ಎಸ್.ಎನ್. ಮನ್ಮಥ ಭೇಟಿ ಮಾಡಿ ಮಾತನಾಡಿದರು.
ಗ್ರಾಮ ಪಂಚಾಯತ್ ಚುನಾವಣೆ ಹಿನ್ನೆಲೆಯಲ್ಲಿ ಮಾಜಿ ಕೆಪಿಸಿಸಿ ಮಾಜಿ ಸದಸ್ಯ ಎಂ. ವೆಂಕಪ್ಪ ಗೌಡ ರವರು ಅರಂಬೂರು, ಅರಂತೋಡು, ಗೂನಡ್ಕ, ಸಂಪಾಜೆ, ಜಾಲ್ಸೂರು ಕನಕಮಜಲು ಬೂತ್ ಗಳಿಗೆ ಭೇಟಿ ನೀಡಿ ಕಾರ್ಯಕರ್ತರ ಜತೆ ಮಾತನಾಡಿದರು.
ಇತಿಹಾಸ ಪ್ರಸಿದ್ಧ ಸುಳ್ಯ ಶ್ರೀ ಚೆನ್ನಕೇಶವ ದೇವಸ್ಥಾನದಲ್ಲಿ ಜ.02 ರಿಂದ ಜ.12 ರವರೆಗೆ ವರ್ಷಾವಧಿ ಜಾತ್ರೋತ್ಸವವು ನಡೆಯಲಿದ್ದು ಗೊನೆ ಮುಹೂರ್ತ ಡಿ. 27 ರಂದು ನಡೆಯಿತು.ಈ ಸಂದರ್ಭದಲ್ಲಿ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರರಾದ ಡಾ.ಹರಪ್ರಸಾದ್ ತುದಿಯಡ್ಕ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಡಾ.ಕೆ.ವಿ.ಚಿದಾನಂದ, ಸದಸ್ಯರಾದ ಲಿಂಗಪ್ಪ ಗೌಡ ಕೇರ್ಪಳ, ಶ್ರೀಮತಿ ಎಂ.ಮೀನಾಕ್ಷಿ ಗೌಡ,ಎ.ರಮೇಶ ಬೈಪಡಿತ್ತಾಯ, ಎನ್.ಎ.ರಾಮಚಂದ್ರ, ಎನ್.ಜಯಪ್ರಕಾಶ್...
ಆಲೆಟ್ಟಿ ಗ್ರಾಮ ಪಂಚಾಯತ್ ನ ಅರಂಬೂರು 6 ಮತ್ತು 7ನೇ ವಾರ್ಡಿನ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಾದ ಸುದೇಶ್ ಪುಷ್ಪಾವತಿ ಅನಿತಾ, ರತೀಶ್ ವೇದಾವತಿ ರವರಿಂದ ಮತಯಾಚನೆ ನಡೆಸಿದರು.
ಕಡಬ ತಾಲೂಕಿನ ಕೈಕಂಬಕ್ಕೆ ಶಾಸಕರಾದ ಎಸ್. ಅಂಗಾರರವರು ಚುನಾವಣಾ ವೀಕ್ಷಣೆಗಾಗಿ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಪ್ರಮುಖರಾದ ಮುರಳೀಧರ ಎರ್ಮಾಯಿಲ್, ಜಯಪ್ರಕಾಶ್ ಎರ್ಮಾಯಿಲ್, ಪುರುಷೋತ್ತಮ ಎರ್ಮಾಯಿಲ್, ವಾಡ್ಯಪ್ಪ ಗೌಡ ಎರ್ಮಾಯಿಲ್, ಹರೀಶ್ ಚೆರು, ಯಶೋಧರ ಬಳ್ಳಡ್ಕ, ದಾಮೋದರ ಪಲ್ಲಿಗದ್ದೆ, ಮೋಹನ್ ಪಲ್ಲಿಗದ್ದೆ, ಭವ್ಯಶ್ರೀ ಕುಕ್ಕಾಜೆ, ಶಾರದ ಲಕ್ಷ್ಮಣ ಆಚಾರ್ಯ, ಪುರುಷೋತ್ತಮ ಪಲ್ಲಿಗದ್ದೆ, ಶಾರದ ಕುಕ್ಕಾಜೆ ಹಾಗೂ...
ಮಡಪ್ಪಾಡಿ ಗ್ರಾಮ ಪಂಚಾಯತ್ ನ 2 ವಾರ್ಡ್ ಗಳ 5 ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದ್ದು ಅಭ್ಯರ್ಥಿಗಳು ಮತ ಬೇಟೆಗೆ ಕೊನೆಯ ಕಸರತ್ತು ನಡೆಸುವುದು ಕಂಡುಬರುತ್ತಿದೆ. ಚುನಾವಣೆ ಕೇಂದ್ರದಲ್ಲಿ ಕೊರೊನ ಮುಂಜಾಗೃತಾ ಕ್ರಮಗಳೊಂದಿಗೆ ಚುನಾವಣೆ ನಡೆಯುತ್ತಿದೆ. ಇದುವರೆಗೆ ವಾರ್ಡ್-1 ರಲ್ಲಿ 53.55% ವಾರ್ಡ್-2 ರಲ್ಲಿ 49.16% ಮತದಾನ ನಡೆದಿದೆ.
ಕಲ್ಮಡ್ಕ ಗ್ರಾಮ ಪಂಚಾಯತ್ ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಯೊಬ್ಬರು ತನ್ನ ಸೋದರ ಸಂಬಂಧಿಯಾಗಿರುವ ಅಪ್ರಾಪ್ತ ಬಾಲಕಿಯೊಬ್ಬಳನ್ನು ಅತ್ಯಾಚಾರಗೈದ ಪ್ರಕರಣದಲ್ಲಿ ಪೋಲೀಸರು ಬಂಧಿಸಿದ ಘಟನೆ ಡಿ.25 ರಂದು ವರದಿಯಾಗಿದೆ. ಕಲ್ಮಡ್ಕ ಗ್ರಾಮದ ವಾರ್ಡ್ 1 ರಿಂದ ಸ್ಪರ್ಧಿಸುತ್ತಿರುವ ಬಿಜೆಪಿ ಬೆಂಬಲಿತ ಅಭ್ಯರ್ಥಿ ಹುಕ್ರಪ್ಪ ಯಾನೆ ನಾರಾಯಣ ಪುಚ್ಚಮ ಎಂಬವರು ಪೊಲೀಸರ ವಶವಾಗಿದ್ದಾರೆ. ಚಿಕ್ಕಪ್ಪನ ಮಗಳಿಗೇ ಅವರು ಈ ರೀತಿ...
Loading posts...
All posts loaded
No more posts