- Thursday
- November 21st, 2024
ಸುಳ್ಯ ಮಾಣಿ-ಮೈಸೂರು ಮುಖ್ಯರಸ್ತೆಯ ಪೈಚಾರ್ ಬಳಿ ಶಾಂತಿನಗರಕ್ಕೆ ತಿರುಗುವ ರಸ್ತೆಯ ಸಮೀಪ ಬೃಹತ್ ಮಣ್ಣಿನ ಗುಡ್ಡೆಯೊಂದು ವಾಹನ ಸಂಚಾರರಿಗೆ ಸಂಚಕಾರವಾಗಿ ಮಾರ್ಪಟ್ಟಿದೆ. ಈ ಪ್ರದೇಶದಲ್ಲಿ ಸುಳ್ಯದಿಂದ ಪೈಚಾರು ಬಳಿ ಬರುವ ಪೈಚಾರ್ ನಿಂದ ಸುಳ್ಯ ನಗರದ ಕಡೆ ಬರುವ ಅದೇ ರೀತಿ ಶಾಂತಿನಗರದಿಂದ ಮುಖ್ಯರಸ್ತೆಗೆ ಇಳಿಯುವ ರಸ್ತೆಯಾಗಿದ್ದು ,ರಸ್ತೆಯು ಬಹಳ ಅವೈಜ್ಞಾನಿಕವಾಗಿದೆ. ಮುಖ್ಯರಸ್ತೆಗಳಲ್ಲಿ ಬರುವ ವಾಹನಗಳು...
ಗ್ರಾಮ ಪಂಚಾಯತ್ ಚುನಾವಣೆಯ ಸುಳ್ಯ ವಿಧಾನಸಭಾ ಕ್ಷೇತ್ರದ ಉಸ್ತುವಾರಿಗಳು ಮಾಜಿ ವಿಧಾನಪರಿಷತ್ ಮುಖ್ಯ ಸಚೇತಕ ಎಐಸಿಸಿ ಕಾರ್ಯದರ್ಶಿ ಐವನ್ ಡಿಸೋಜಾ ಎಂದು ಸುಳ್ಯ ಬ್ಲಾಕ್ ಕಾಂಗ್ರೆಸ್ ಸಮಿತಿ ಸಭೆಗೆ ಆಗಮಿಸಿ ಮುಂಬರುವ ಗ್ರಾಮ ಗ್ರಾಮ ಪಂಚಾಯತ್ ಚುನಾವಣೆಯ ಪೂರ್ವ ತಯಾರಿ ಕುರಿತು ಚರ್ಚಿಸಿದರು. ಈ ಸಂದರ್ಭದಲ್ಲಿ ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್ ಜಯಪ್ರಕಾಶ್ ರೈ...
ಕೋಟೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಷಷ್ಠಿ ಪ್ರಯುಕ್ತ ಇಂದು (ಡಿ.20) ವಿಶೇಷ ಪೂಜೆ ನಡೆಯಿತು.ಪೂರ್ವಾಹ್ನ ಗಣಪತಿ ಹೋಮ, ಚಂಡಿಕಾ ಹೋಮ, ನವಕಲಶ, ಶತರುದ್ರಾಭಿಷೇಕ, ಪಲ್ಲಪೂಜೆ, ಕಲಶಾಭಿಷೇಕ ನಡೆದು ಮಧ್ಯಾಹ್ನ ಮಹಾಪೂಜೆ ಜರುಗಿತು. ನಂತರ ಅನ್ನಸಂತರ್ಪಣೆ ನಡೆಯಿತು. ಈ ಸಂದರ್ಭದಲ್ಲಿ ದೇವಸ್ಥಾನದ ಧರ್ಮದರ್ಶಿಗಳು, ಅಭಿವೃದ್ಧಿ ಸಮಿತಿಯ ಸದಸ್ಯರು ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.
ದೊಡ್ಡತೋಟ ಮುಖ್ಯರಸ್ತೆಯ ಬ್ಯಾಂಕ್ ಆಫ್ ಬರೋಡ ಶಾಖೆಯ ಬಳಿ ಡಾ.ಜೀವನ್ ಎಸ್ ರವರ ಸಂಜೀವಿನಿ ಕ್ಲಿನಿಕ್ ಡಿ.18 ರಂದು ಶುಭಾರಂಭಗೊಂಡಿತು.ಸುಳ್ಯ ಕೃಷ್ಣ ಕ್ಲಿನಿಕ್ ನ ಡಾ.ಕೇಶವ ಪಿ.ಕೆ.ಕ್ಲಿನಿಕ್ ನ್ನು ದೀಪ ಬೆಳಗಿಸಿ ಉದ್ಘಾಟಿಸಿ ಶುಭಹಾರೈಸಿದರು.ಈ ಸಂದರ್ಭದಲ್ಲಿ ಜ್ಯೋತಿ ಆಸ್ಪತ್ರೆಯ ಡಾ.ಜಯಪ್ರಸಾದ್ ಪಾರೆ,ಶ್ರೀಮತಿ ಸರಸ್ವತಿ ಎಸ್.ಭಟ್.ಸಂಕಹಿತ್ತಿಲು, ಉಮೇಶ್ ಎಸ್, ಶ್ರೀಮತಿ ಆಶಾ ಕುಮಾರಿ ಕೆ.ಎಂ ಹಾಗೂ ಗಣ್ಯರು...
ಪುತ್ತೂರು - ಕಡಬ ತಾಲೂಕಿನ ಏಕೈಕ ಮಹಿಳಾ ಸಿಂಗಾರಿ ಮೇಳವಾಗಿ ಶ್ರೀ ಕಪಿಲೇಶ್ವರ ಮಹಿಳಾ ಸಿಂಗಾರಿ ಮೇಳವು ಡಿ.21 (ನಾಳೆ)ರಂದು ಸಂಜೆ ಗಂಟೆ 7.30 ಕ್ಕೆ ಚಾರ್ವಕ ಶ್ರೀ ಕಪಿಲೇಶ್ವರ ದೇವಸ್ಥಾನದಲ್ಲಿ ರಂಗಪ್ರವೇಶಿಸಲಿದೆ.ಅತಿಥಿ ಗಣ್ಯರ ಪಾಲ್ಗೊಳ್ಳುವಿಕೆಯಲ್ಲಿ ಸಭಾ ಕಾರ್ಯಕ್ರಮದೊಂದಿಗೆ ರಂಗಪ್ರವೇಶ ಜರುಗಲಿದೆ ಎಂದು ಸಿಂಗಾರಿ ಮೇಳದ ವ್ಯವಸ್ಥಾಪಕರು ತಿಳಿಸಿದ್ದಾರೆ.
ಮುರುಳ್ಯ ಹಾಲು ಉತ್ಪಾದಕರ ಸಹಕಾರಿ ಸಂಘ ನಿ. ಅಲೆಕ್ಕಾಡಿ ಇದರ ನೂತನ ಉಪಾಧ್ಯಕ್ಷರ ಚುನಾವಣೆಯು ಡಿ.20 ರಂದು ಸಂಘದ ಕಛೇರಿಯಲ್ಲಿ ನಡೆಯಿತು. ಸಂಘದ ನೂತನ ಉಪಾಧ್ಯಕ್ಷರಾಗಿ ಎಂ.ಬಿ. ಸೀತಾರಾಮ ಗೌಡರವರನ್ನು ಅವಿರೋಧವಾಗಿ ಆಯ್ಕೆಮಾಡಿ ಘೋಷಣೆ ಮಾಡಲಾಯಿತು. ಚುನಾವಣಾಧಿಕಾರಿಯಾಗಿ ಬಿ.ನಾಗೇಂದ್ರ ಕಾರ್ಯನಿರ್ವಹಿಸಿದರು. ಈ ಸಂದರ್ಭದಲ್ಲಿ ಮುರುಳ್ಯ ಎಣ್ಮೂರು ವಿ.ಎಸ್.ಎಸ್.ಎನ್ ನ ನಿರ್ದೇಶಕರಾದ ವಸಂತ ನಡುಬೈಲು, ಮುರುಳ್ಯ ಹಾಲು...
ಸುಳ್ಯ ನೂತನ ತಹಶೀಲ್ದಾರರಾಗಿ ವೇದವ್ಯಾಸ ಮುತಾಲಿಕ್ ಇಂದು ಅಧಿಕಾರ ಸ್ವೀಕಾರ ಮಾಡಿದರು. ಈ ಸಂದರ್ಭದಲ್ಲಿ ಸುಳ್ಯ ಕಂದಾಯ ನಿರೀಕ್ಷಕ ಕೊರಗಪ್ಪ ಹೆಗ್ಡೆ, ಪಂಜ ವಲಯ ಕಂದಾಯ ನಿರೀಕ್ಷಕ ಶಂಕರ್ ಹಾಗೂ ತಾಲೂಕು ಕಚೇರಿ ಅಧಿಕಾರಿ ವರ್ಗದವರು ಉಪಸ್ಥಿತರಿದ್ದರು. ವಾರದ ಹಿಂದೆ ತಹಶೀಲ್ದಾರ್ ಆಗಿ ಅಧಿಕಾರ ಸ್ವೀಕರಿಸಿದ ಅನಿತಾಲಕ್ಷ್ಮಿ ರವರು ಪುನಃ ಬಂಟ್ವಾಳಕ್ಕೆ ವರ್ಗಾವಣೆಗೊಂಡು ತೆರವುಗೊಂಡ ಸ್ಥಾನಕ್ಕೆ...