- Tuesday
- April 1st, 2025

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ 2020 ನೇ ಸಾಲಿನ ವಾರ್ಷಿಕ ಜಾತ್ರಾ ಮಹೋತ್ಸವ ಸಂಬಂಧ ಮೂಲಮೃತ್ತಿಕಾ ಪ್ರಸಾದ ತೆಗೆಯುವ ಕಾರ್ಯಕ್ರಮ ಡಿ.11 ರಂದು ನಡೆಯಲಿದೆ. ಈ ಪ್ರಯುಕ್ತ ಭಕ್ತಾದಿಗಳ ಸೇವೆಗಳು ಮತ್ತು ದರ್ಶನ ಅಪರಾಹ್ನ ಗಂಟೆ 02 ರ ನಂತರ ನಡೆಯಲಿದೆ ಎಂದು ದೇವಸ್ಥಾನದ ಪ್ರಕಟಣೆ ತಿಳಿಸಿದೆ.

ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಈ ಬಾರಿ ಜೆಡಿಎಸ್ ಅಭ್ಯರ್ಥಿಗಳು ಕಣಕ್ಕಿಳಿಯಲಿದ್ದು ಆ ಪ್ರಯುಕ್ತ ಚರ್ಚಿಸಲು ಕಾರ್ಯಕರ್ತರ ಸಭೆ ಇಂದು ಸುಳ್ಯದ ಕಾನತ್ತಿಲ ದೇವಮ್ಮ ಕಾಂಪ್ಲೆಕ್ಸ್ ನಲ್ಲಿ ನಡೆಯಿತು. ಸಭೆಯ ಅಧ್ಯಕ್ಷ ತೆಯನ್ನು ಜೆಡಿಎಸ್ ಅಧ್ಯಕ್ಷ ದಯಾಕರ ಆಳ್ವ ವಹಿಸಿದ್ದರು. ಸಭೆಯಲ್ಲಿ ಮಾತನಾಡಿದ ಅವರು, ತಾಲೂಕಿನ ಆಯ್ದ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗಳು ಸ್ಪರ್ಧೆ...

ಆರ್ ಪಿ ಎಸ್ ( ರಬ್ಬರ್ ಪ್ರೊಸೆಸಿಂಗ್ ಸೆಂಟರ್) ವತಿಯಿಂದ ರಬ್ಬರ್ ಟ್ಯಾಪಿಂಗ್ ತರಬೇತಿ ಕಾರ್ಯಕ್ರಮ ಡಿ.7 ರಿಂದ ಡಿ.15 ರವರೆಗೆ 8 ದಿನಗಳ ಟ್ಯಾಪರ್ಸ್ ತರಬೇತಿ ಕಾರ್ಯಕ್ರಮ ಎಲಿಮಲೆಯ ಪಾಪಚ್ಚ ರವರ ರಬ್ಬರ್ ತೋಟದಲ್ಲಿ ಆರಂಭಗೊಂಡಿದೆ. ಕಾರ್ಯಕ್ರಮವನ್ನು ರಬ್ಬರ್ ಬೋರ್ಡ್ ನ ಪುತ್ತೂರು ಡಿವಿಶನ್ ನ ಉಪ ರಬ್ಬರ್ ಉತ್ಪಾದಕರ ಕಮಿಷನರ್ ಚಂದ್ರನ್ ಕರಾಥ...

ಸುಳ್ಯ ತಾಲೂಕು ನವೋದಯ ಸ್ವ ಸಹಾಯ ಸಂಘಗಳ ಪ್ರೇರಕರ ಪ್ರಗತಿ ಪರಿಶೀಲನಾ ಸಭೆಯು ಸುಳ್ಯದ ಸಿ ಎ ಬ್ಯಾಂಕ್ ಸಭಾಂಗಣದಲ್ಲಿ ಡಿ.8 ರಂದು ನಡೆಯಿತು.ಸಭೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕರಾದ ಶಶಿಕುಮಾರ್ ಬಾಲ್ಯೊಟ್ಟು ಉಪಸ್ಥಿತರಿದ್ದು ಪ್ರಗತಿ ಪರಿಶೀಲನೆ ನಡೆಸಿ ಸ್ವ ಸಹಾಯ ಸಂಘಗಳಿಗೆ ಸಿಗುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು. ವೇದಿಕೆಯಲ್ಲಿ...

ಪ್ರಸ್ತುತ ದೇಶದಾದ್ಯಂತ ರೈತರ ಕೃಷಿ ಮಸೂದೆ ಜಾರಿಗೊಳಿಸಿದ ವಿರುದ್ಧ ಪ್ರತಿಭಟನೆಗಳು ನಡೆಯುತ್ತಿದ್ದು, ಇದರ ಅಂಗವಾಗಿ ಭಾರತೀಯ ಜನತಾ ಪಾರ್ಟಿಯ ರೈತ ಮೋರ್ಚಾ ಸಂಘದ ವತಿಯಿಂದ ಇಂದು ಸುಳ್ಯ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ರೈತ ಮೋರ್ಚಾ ರಾಜ್ಯ ಉಪಾಧ್ಯಕ್ಷ ಎ.ವಿ ತೀರ್ಥರಾಮ ಈ ಬಗ್ಗೆ ಮಾತನಾಡಿದರು. ಭಾರತೀಯ ಜನತಾ ಪಾರ್ಟಿಯ ರೈತಪರ ನಿಲುವಿನ ವಿರುದ್ಧ...

ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಬೆಂಗಳೂರು, ಯೂನಿಸೆಫ್ ಹೈದ್ರಾಬಾದ್, ತಾಲೂಕು ಪಂಚಾಯತ್ ಸಾರ್ವಜನಿಕ ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸುಳ್ಯ ತಾಲೂಕು ಇದರ ಸಹಭಾಗಿತ್ವದಲ್ಲಿ ಮಕ್ಕಳ ಹಕ್ಕುಗಳ ರಕ್ಷಣೆಯ ಕುರಿತು ಸಂವಾದ ಕಾರ್ಯಕ್ರಮ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಸಮಿತಿ ಸದಸ್ಯ ಶಂಕರಪ್ಪ ರವರ ನೇತೃತ್ವದಲ್ಲಿ...

ರೈತ ಕಾರ್ಮಿಕ ದಲಿತ ಒಕ್ಕೂಟವು ರಾಷ್ಟ್ರೀಯ ಮಟ್ಟದಲ್ಲಿ ದೇಶದಾದ್ಯಂತ ಕೇಂದ್ರ ಸರಕಾರದ ಕೃಷಿ ಕಾಯ್ದೆ 2020 ಹಿಂಪಡೆಯಲು ಆಗ್ರಹಿಸಿ ಡಿ.8 ರಂದು ಭಾರತ ಬಂದ್ ಘೋಷಣೆಗೆ ಬೆಂಬಲ ವ್ಯಕ್ತಪಡಿಸಿ, ಸುಳ್ಯ ಜ್ಯೋತಿ ವೃತ್ತದಿಂದ ಗಾಂಧಿನಗರ ತನಕ ಮೌನ ಪ್ರತಿಭಟನಾ ಮೆರವಣಿಗೆ ನಡೆಸಿ ಸುಳ್ಯ ಖಾಸಗಿ ಬಸ್ ನಿಲ್ದಾಣ ಬಳಿ ಸಭೆ ನಡೆಸಲಾಯಿತು.ಕೃಷಿ ಕಾಯ್ದೆ 2020 ಹಿಂಪಡೆಯುವಂತೆ...

ರೈತ ಕಾರ್ಮಿಕ ದಲಿತ ಒಕ್ಕೂಟವು ರಾಷ್ಟ್ರೀಯ ಮಟ್ಟದಲ್ಲಿ ದೇಶದಾದ್ಯಂತ ಕೇಂದ್ರ ಸರಕಾರದ ಕೃಷಿ ಕಾಯ್ದೆ 2020 ಹಿಂಪಡೆಯಲು ಆಗ್ರಹಿಸಿ ಡಿ.08 ರಂದು ಕರೆನೀಡಿದ ಭಾರತ ಬಂದ್ ಗೆ ಸುಳ್ಯ ತಾಲೂಕಿನಾದ್ಯಂತ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅಂಗಡಿ ಮುಂಗಟ್ಟುಗಳು , ಬಸ್ ಸಂಚಾರ ಗಳು ಯಥಾವತ್ತಾಗಿ ಎಂದಿನಂತೆ ಕಾರ್ಯಚರಿಸಿದೆ. ಬಂದ್ ನ ಬಿಸಿ ಎಲ್ಲಿಯೂ ಕಂಡುಬರಲಿಲ್ಲ.

ನೂತನ ಕೃಷಿ ಕಾನೂನು ಖಂಡಿಸಿ ರೈತಪರ ಸಂಘಟನೆಗಳು ಕರೆ ನೀಡಿದ್ದ ಭಾರತ್ ಬಂದ್ ಗೆ ಬೆಳ್ಳಾರೆಯಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅಂಗಡಿ ಮುಂಗಟ್ಟುಗಳು ತೆರೆದಿದ್ದು, ಬ್ಯಾಂಕ್, ಸರ್ಕಾರಿ ಬಸ್ಸು, ಆಟೋರಿಕ್ಷಾ, ಖಾಸಗಿ ವಾಹನಗಳು, ಪೆಟ್ರೋಲ್ ಬಂಕ್ ಎಂದಿನಂತೆ ಸೇವೆ ನೀಡುತ್ತಿದ್ದು ಜನಸಂಚಾರ ಎಂದಿನಂತಿದೆ.

ಅಲ್ ಅಮೀನ್ ಯೂತ್ ಸೆಂಟರ್ (ರಿ) ಪೈಚಾರ್ಇದರ ವತಿಯಿಂದ ಹಿಜಾಮ ಶಿಬಿರವು ಕುವ್ವತ್ತುಲ್ ಇಸ್ಲಾಂ ಮದರಸ ಸಭಾಂಗಣದಲ್ಲಿ ಡಿ. 6 ರಂದು ನಡೆಯಿತು.ಕಾರ್ಯಕ್ರಮದಲ್ಲಿ ಅಲ್ ಅಮೀನ್ ಯೂತ್ ಸೆಂಟರ್ ಇದರ ಗೌರವಾಧ್ಯಕ್ಷರಾದ.ಇಬ್ರಾಹಿಮ್ ಪೈಝಿಯಾವರು ದುವಾಃ ನೆರವೇರಿಸಿದರು. ಉದ್ಘಾಟನೆಯನ್ನು ಕುವ್ವತ್ತುಲ್ ಇಸ್ಲಾಂ ಮದರಸ ಸದರ್ ಮುಹಲ್ಲಿಮ್ ಮುಯ್ಯದ್ದೀನ್ ಲತೀಫಿಯವರು ನೆರವೇರಿಸಿದರು. ಅಧ್ಯಕ್ಷತೆಯನ್ನು ಎವೈಸಿ ಇದರ ಅಧ್ಯಕ್ಷರಾದ ಕರೀಮ್...

All posts loaded
No more posts