- Tuesday
- April 1st, 2025

ಗ್ರಾಮ ಪಂಚಾಯಿತಿ ಚುನಾವಣೆ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ಸುಳ್ಯಕ್ಕೆ ಹೊಸ ತಹಶೀಲ್ದಾರ್ ಆಗಿ ಕು.ಅನಿತಾಲಕ್ಷ್ಮೀ ಅವರನ್ನು ನೇಮಿಸಿ ಜಿಲ್ಲಾಧಿಕಾರಿಯವರು ಆದೇಶ ಹೊರಡಿಸಿದ್ದಾರೆ. ಸುಳ್ಯ ತಹಶೀಲ್ದಾರ್ ಅನಂತಶಂಕರ್ ರವರು ಕಡಬ ತಹಶೀಲ್ದಾರ್ ಆಗಿಯೂ ಕಾರ್ಯ ನಿರ್ವಹಿಸುತ್ತಿರುವುದರಿಂದ ಚುನಾವಣೆಯನ್ನು ಯಶಸ್ವಿಯಾಗಿ ನಡೆಸಲು ಅನುಕೂಲವಾಗುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಚುನಾವಣಾ ಶಾಖೆಯ ತಹಶೀಲ್ದಾರ್ ಆಗಿರುವ ಕು. ಅನಿತಾಲಕ್ಷ್ಮೀ ಅವರನ್ನು ಸುಳ್ಯ ತಹಶೀಲ್ದಾರ್...

ಎಸ್ಡಿಪಿಐ ಸಂಪಾಜೆ ವಲಯ ಸಮಿತಿ ಮತ್ತು ಪಕ್ಷದ ಸಂಪಾಜೆ ವಲಯ ಚುನಾವಣಾ ಸಮಿತಿಯ ಜಂಟಿ ಸಭೆಯು ಸಂಪಾಜೆಯಲ್ಲಿ ವಲಯಾದ್ಯಕ್ಷ ಮಹಮ್ಮದ್ ಕುಂಞಯವರ ಅಧ್ಯಕ್ಷತೆಯಲ್ಲಿ ನಡೆಯಿತು.ಸಂಪಾಜೆ ವಲಯ ಉಸ್ತುವಾರಿ ಗಳಾದ ಅಶ್ರಫ್ ಟರ್ಲಿ ಮತ್ತು ಫಾರೂಕ್ ಕಾನಕ್ಕೋಡ್ ರವರು ಸಭೆಯ ವಿಷಯಗಳನ್ನು ಮಂಡಿಸಿದರು ಮತ್ತು ಮುಂಬರುವ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಸ್ಪರ್ಧಿಸುವ ಸಂಭಾವ್ಯ ಅಭ್ಯರ್ಥಿಗಳ ಪರಿಚಯವನ್ನು ಮಾಡಿ...

ದೇವಚಳ್ಳ ಗ್ರಾಮದ ಮಾವಿನಕಟ್ಟೆಯಲ್ಲಿ ನೂತನವಾಗಿ ರಬ್ಬರ್ ಉತ್ಪಾದಕರ ಸಂಘ ರಚನೆಗೊಂಡಿದ್ದು ಇದರ ಉದ್ಘಾಟನೆ ಮತ್ತು ಸೆಮಿನಾರ್ ಕಾರ್ಯಕ್ರಮ ಇಂದು ನಡೆಯಿತು. ರಬ್ಬರ್ ಬೋರ್ಡ್ ನ ಪುತ್ತೂರು ಡಿವಿಶನ್ ನ ಉಪ ರಬ್ಬರ್ ಉತ್ಪಾದಕರ ಕಮಿಷನರ್ ಚಂದ್ರನ್ ಕರಾಥ ದೀಪ ಬೆಳಗಿಸಿ, ಉದ್ಘಾಟಿಸಿದರು. ಮಾವಿನಕಟ್ಟೆ ಹಾಲು ಉತ್ಪಾದಕ ಸಂಘದ ಅಧ್ಯಕ್ಷ ಬಾಬು ಗೌಡ ಅಚಪ್ಪಾಡಿ ಅಧ್ಯಕ್ಷತೆ ವಹಿಸಿದ್ದರು....

ರೈತ ಕಾರ್ಮಿಕ ದಲಿತ ಒಕ್ಕೂಟವು ಕೇಂದ್ರ ಸರಕಾರದ ರೈತ ವಿರೋಧಿ ಕೃಷಿ ಕಾಯ್ದೆ ಹಿಂಪಡೆಯಲು ಒತ್ತಾಯಿಸಿ ಕರೆ ನೀಡಿರುವ ಡಿ.8 ರಂದು ಕರೆ ನೀಡಿರುವ ಭಾರತ ಬಂದ್ ಗೆ ಆಮ್ ಆದ್ಮಿ ಪಾರ್ಟಿ ಸುಳ್ಯ ವಿಧಾನಸಭಾ ಕ್ಷೇತ್ರ ಘಟಕ ಸಂಪೂರ್ಣ ಬೆಂಬಲ ನೀಡಲಿದೆ ಎಂದು ಸುಳ್ಯ ವಿಧಾನಸಭಾ ಕ್ಷೇತ್ರದ ಆಮ್ ಆದ್ಮಿ ಪಾರ್ಟಿ ಸಂಚಾಲಕ ಅಶೋಕ್...

ಚೊಕ್ಕಾಡಿ ಪ್ರಾ. ಕೖ.ಪ.ಸ.ಸಂಘ ನಿ. ಕುಕ್ಕುಜಡ್ಕ ಇದರ ವತಿಯಿಂದ ಕುಂಟಾರು ಶ್ರೀ ರವೀಶ ತಂತ್ರಿಯವರಿಗೆ ಗೌರವಾರ್ಪಣೆ ನಡೆಯಿತು.ಸಂಘದ ಉಪಾಧ್ಯಕ್ಷ ಕೇಶವ ಕರ್ಮಾಜೆ, ನಿರ್ದೇಶಕ ಗಣೇಶ್ ಪಿಲಿಕಜೆ, ಸದಸ್ಯರಾದ ಪದ್ಮನಾಭ ಬೊಳ್ಳೂರು, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮೋಹನ ಕುಮಾರ್ ಸಿಬ್ಬಂದಿಗಳಾದ ದುಗ್ಗಪ್ಪ ಗೌಡ ಕುಡುಂಬಿಲ, ಅಚ್ಚುತ ಗೌಡ ದೊಡ್ಡಡ್ಕ, ಪ್ರಸಾದ್ ಕೆರೆಮೂಲೆ, ಹರೀಶ್ ದೊಡ್ಡಡ್ಕ, ನಳಿನಾಕ್ಷಿ ಹಾಗೂ ಇತರರು...

ಕುಕ್ಕುಜಡ್ಕದಲ್ಲಿ ಗಣೇಶ್ ಪಿಲಿಕಜೆ ಮಾಲಕತ್ವ ಶ್ರೀ ಭಗವತಿ ಸೇವಾ ಕೇಂದ್ರ, ಸ್ವೀಟ್ ಸ್ಟಾಲ್ ಮತ್ತು ಜ್ಯೂಸ್ ಸೆಂಟರ್ ಉದ್ಘಾಟನಾ ಕಾರ್ಯಕ್ರಮದ ಇಂದು ನಡೆಯಿತು. ಕುಂಟಾರು ಶ್ರೀ ರವೀಶ ತಂತ್ರಿಯವರಿಂದ ವೈದಿಕ ಕಾರ್ಯಕ್ರಮ ನಡೆಯಿತು. ನಮ್ಮಲ್ಲಿ ಶುಚಿ ರುಚಿಯಾದ ತಿಂಡಿ ತಿನಿಸುಗಳು ಹಾಗೂ ಫ್ರೆಶ್ ಜ್ಯೂಸ್ ಮತ್ತು ಕಬ್ಬಿನ ಹಾಲು ದೊರೆಯುತ್ತದೆ. ಹಾಗೂಎಲ್ಲಾ ರೀತಿಯ ಆನ್ ಲೈನ್...

ಸುನ್ನೀ ಸ್ಟೂಡೆಂಟ್ ಫೆಡರೇಷನ್ ಎಸ್ ಎಸ್ ಎಫ್ ಮೊಗರ್ಪಣೆ ಶಾಖೆ ಇದರ ಮಹಾಸಭೆ ಡಿಸೆಂಬರ್ 6 ರಂದು ಮೊಗರ್ಪಣೆ ಮದರಸಾ ಸಭಾಂಗಣದಲ್ಲಿ ನಡೆಯಿತು. ಜಯನಗರ ಮದರಸ ಸದರ್ ಮೊಹಲ್ಲಿಂ ಅಬ್ದುಲ್ ಕರೀಮ್ ಸಖಾಫಿ ಕಟ್ಟತ್ತಾರ್ ದುಆ ನೆರೆವೇರಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಸಮಿತಿಯ ಅಧ್ಯಕ್ಷರಾದ ಅಸಿಫ್ ಜಯನಗರ ಅಧ್ಯಕ್ಷತೆಯನ್ನು ವಹಿಸಿದ್ದರು. ಸೆಕ್ಟರ್ ಸಮಿತಿಯಿಂದ ಆಗಮಿಸಿದ ಸಿದ್ದೀಕ್ ಹಿಮಮಿ...