ಆರ್ತಾಜೆ ಫ್ರೆಂಡ್ಸ್ ಕ್ಲಬ್ ಇದರ ಮಹಾಸಭೆಯು ಡಿ.೧ರಂದು ಶಾಫೀ ಪ್ರಗತಿ ಇವರ ನಿವಾಸದಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಎಎಫ್‌ಸಿ ಅಧ್ಯಕ್ಷ ರಶೀದ್ ವಹಿಸಿದರು. ನಂತರ ೨೦೨೦ -೨೧ ನೇ ಸಾಲಿನ ಅಭಿವೃದ್ಧಿ ಚಟುವಟಿಕೆಗಳ ಬಗ್ಗೆ ಚರ್ಚಿಸಲಾಯಿತು.
೨೦೨೦- ೨೧ ನೇ ಸಾಲಿನ ನೂತನ ಅಧ್ಯಕ್ಷರಾಗಿ ಮುಜೀಬ್ ಪೈಚಾರ್, ಉಪಾಧ್ಯಕ್ಷರಾಗಿ ರಶೀದ್ ಪೈಚಾರ್, ಪ್ರಧಾನ ಕಾರ್ಯದರ್ಶಿಯಾಗಿ
ಹರ್ಷದ್ ಪ್ರಗತಿ, ಜೊತೆ ಕಾರ್ಯದರ್ಶಿಯಾಗಿ ಸಲಾಮ್ ಪೈಚಾರ್, ಕೋಶಾಧಿಕಾರಿಯಾಗಿ ಇಮ್ರಾನ್ ಮಿಲನ್, ಸದಸ್ಯರುಗಳಾಗಿ ಮಜೀದ್ ಬಿಎಸ್, ಶಾಫೀ ಪ್ರಗತಿ, ಮುತ್ತಲಿ ಕುಂರ್ಬಚೋಡ್, ಅಬ್ಬಾಸ್ ಟಿಎ, ಸಿದ್ದೀಕ್ ಎಸ್ ಯು, ಬಶೀರ್ ಕೆಪಿ ಮೊದಲಾದವರನ್ನು ಆಯ್ಕೆ ಮಾಡಲಾಯಿತು.