Ad Widget

ಬಳ್ಳಕ್ಕ- ವೃದ್ಧ ಮಹಿಳೆಯರಿದ್ದ ಸೂರನ್ನು ಸೋರದಂತೆ ಮಾಡಿದ ತುರ್ತು ಕಾರ್ಯಪಡೆ

ಗುತ್ತಿಗಾರು ಗ್ರಾಮದ ಬಳ್ಳಕ ಎಂಬಲ್ಲ ಕುಕ್ಕೆತ್ತಿ & ಕಂಚಾರತಿ ಎಂಬ ಬಡ ವೃದ್ಧ ಅಶಕ್ತ ಮಹಿಳೆಯರು ವಾಸವಿರುವ ಮನೆಯ ಮಾಡಿನ ದುರಸ್ತಿ ಕಾರ್ಯವನ್ನು ಕೊರೊನಾ ತುರ್ತು ಕಾರ್ಯಪಡೆಯ ಸದಸ್ಯರು ಕೈಗೊಂಡರು. ಗ್ರಾಮ ಪಂಚಾಯತ್ ಅಧ್ಯಕ್ಷರಾದ ಅಚ್ಯುತ ಗುತ್ತಿಗಾರು ಗ್ರಾ .ಪ .ಸದಸ್ಯರಾದ ಜಯಪ್ರಕಾಶ್ ಮೊಗ್ರ & ರಾಕೇಶ್ ಮೆಟ್ಟಿನಡ್ಕ, ಲೋಕೇಶ್ವರ ಡಿ ಆರ್ ಧರ್ಮಸ್ಥಳ ಗ್ರಾಮಾಭಿವೃಧ್ದಿ...

ಕಾಸರಗೋಡು ಎಸ್ಪಿಯಾಗಿ ಕನ್ನಡತಿ ಡಿ ಶಿಲ್ಪಾ ನೇಮಕ

ಕಾಸರಗೋಡು ಜಿಲ್ಲಾ ವರಿಷ್ಠ ಪೊಲೀಸ್ ಅಧಿಕಾರಿ ಪಿ ಎಸ್ ಸಾಬು ರವರನ್ನು ವರ್ಗಾವಣೆಗೊಳಿಸಿ ಆಸ್ತಾನಕ್ಕೆ ಕರ್ನಾಟಕ ಮೂಲದ ಡಿ ಶಿಲ್ಪಾ ರವರನ್ನು ನೇಮಿಸಲಾಗಿದೆ ಶಿಲ್ಪಾ ರವರು ಜಿಲ್ಲೆಯ ಪ್ರಥಮ ಮಹಿಳಾ ಎಸ್ಪಿಯಾಗಿ ನೇಮಕಗೊಂಡಿದ್ದಾರೆ.
Ad Widget

ಕೆದಿಲ ಕಾಡಾನೆ ದಾಳಿ – ಅಪಾರ ಕೃಷಿ ಹಾನಿ

ಕಡಬ ತಾಲೂಕಿನ ಐನೆಕಿದು ಗ್ರಾಮದ ಕೆದಿಲ ಗಿರಿಯಪ್ಪ ಗೌಡ ರವಿ ಕೆದಿಲ ಹಾಗೂ ದೇವರಾಜ್ ಕೆದಿಲ ಎಂಬವರ ತೋಟಕ್ಕೆ ಕಾಡಾನೆ ದಾಳಿ ನಡೆಸಿದ್ದು ಕೃಷಿಗೆ ಅಪಾರ ಹಾನಿ ಮಾಡಿದೆ.ಬಾಳೆ ,ಅಡಿಕೆ, ತೆಂಗು ಹಾಗು ನೀರಿನ ಪೈಪ್ ಗೆ ಹಾನಿಯಾಗಿದ್ದು ಸುಮಾರು ರೂ 50 ಸಾವಿರದಷ್ಟು ಸಂಭವಿಸಿದೆ ಎಂದು ತಿಳಿದುಬಂದಿದೆ.

ಲಾಕ್‌ಡೌನ್ 5.0 ಜೂನ್ 30 ರವರೆಗೆ ವಿಸ್ತರಿಸಿ ಕೇಂದ್ರ ಗೃಹ ಸಚಿವಾಲಯ ಆದೇಶ

ದೇಶಾದ್ಯಂತ ಜೂನ್ 30 ರವರೆಗೆ ಲಾಕ್‌ಡೌನ್ ವಿಸ್ತರಿಸಿ ಕೇಂದ್ರ ಗೃಹ ಸಚಿವಾಲಯ ಆದೇಶ ನೀಡಿದೆ . ಆದರೆ ಕಂಟೈನ್ ಮೆಂಟ್ ಝೂನ್ ಗಳಿಗೆ ಮಾತ್ರ ಲಾಕ್‌ಡೌನ್ ಅನ್ವಯಿಸಲಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ . ಜೂನ್ 8 ರಿಂದ ಧಾರ್ಮಿಕ ಸ್ಥಳಗಳು , ಮಾಲ್ , ರೆಸ್ಟೋರೆಂಟ್ ಗಳನ್ನು ತೆರೆಯಲು ಅವಕಾಶ ನೀಡಲಾಗಿದೆ . ರಾತ್ರಿ 9...

ದ.ಕ. ಬೆಂಬಿಡದೆ ಕಾಡುತ್ತಿದೆ ಕೊರೊನ- ಇಂದು ೧೪ ಸೋಂಕಿತರು

ದ ಕ ಜಿಲ್ಲೆಯನ್ನು ಬೆಂಬಿಡದೆ ಕಾಡುತ್ತಿರುವ ಕೊರೋನ ವೈರಸ್ ಇಂದು 14 ಮಂದಿಗೆ ಕೊರೋನಾ ಪಾಸಿಟಿವ್ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು 14 ಮಂದಿಗೆ ಪಾಸಿಟಿವ್ ಪ್ರಕರಣಗಳು ವರದಿಯಾಗಿದೆ .ಉಡುಪಿ ಜಿಲ್ಲೆಯಲ್ಲಿ 13 ಪ್ರಕರಣಗಳು ವರದಿಯಾಗಿದ್ದು ರಾಜ್ಯದಲ್ಲಿ ಒಟ್ಟು 141ಮಂದಿ ಕರೋನಾವೈರಸ್ ಇಂದು ಪ್ರಕರಣಗಳು ವರದಿಯಾಗಿದೆ. ಈ ಮೂಲಕ ರಾಜ್ಯದಲ್ಲಿ ಒಟ್ಟು 2922 ಪ್ರಕರಣಗಳು ದಾಖಲಾಗಿದ್ದು, ಸಾವಿನ...

ಕೈಗಾರಿಕಾ ಗ್ರಾಹಕರಿಗೆ ವಿದ್ಯುತ್ ಬಿಲ್ಲಿನಲ್ಲಿ ರಿಯಾಯಿತಿ ಘೋಷಣೆ

ಕೋವಿಡ್ -19 ಲಾಕ್ ಇನ್ ಪ್ರಭಾವ ತಗ್ಗಿಸುವ ಹಿನ್ನೆಲೆಯಲ್ಲಿ ಕೈಗಾರಿಕಾ ಗ್ರಾಹಕರಿಗೆ ವಿದ್ಯುತ್ ಬಿಲ್ಲಿನಲ್ಲಿ ರಿಯಾಯಿತಿ ನೀಡುವ ಸಲುವಾಗಿ MSME ಸರ್ಟಿಫಿಕೇಟ್ ಒದಗಿಸುವಂತೆ ಕೋರಿದೆ. ಸರಕಾರದ ಆದೇಶದಂತೆ MSME ಕೈಗಾರಿಕಾ ಗ್ರಾಹಕರಿಗೆ ವಿದ್ಯುತ್ ಬಿಲ್ಲಿನಲ್ಲಿ ನಿಗಧಿತ ಶುಲ್ಕ ( Fixed Charge ) ರಿಯಾಯಿತಿ ಇರುವುದರಿಂದ ಗ್ರಾಹಕರು ಸಕ್ಷಮ ಪ್ರಾಧಿಕಾರವು ನೀಡಿದ MSME ಪ್ರಮಾಣ ಪತ್ರದ...

ಬಂಟ್ವಾಳ ಕರೆಂಟ್ ಶಾಕ್ ಯುವಕ ಮೃತ್ಯು

ಬಂಟ್ವಾಳ : ವಿದ್ಯುತ್ ಶಾಕ್ ನಿಂದ ಯುವಕನೋರ್ವ ಸಾವನ್ನಪ್ಪಿದ್ದು ಇನ್ನೋರ್ವ ಗಾಯಗೊಂಡ ಘಟನೆ ಫರಂಗಿಪೇಟೆ ಸಮೀಪ ಪೇರಿಮಾರ್ ನಲ್ಲಿ ಶನಿವಾರ ಸಂಭವಿಸಿದೆ . ಘಟನೆಯಲ್ಲಿ ಮುಬಾರಕ್ ಅಮ್ಮೆಮಾರ್ ( 23 ) ಮೃತಪಟ್ಟ ಯುವಕ . ಫಾರೂಕ್ ಅಮ್ಮೆಮಾರ್ ಗಂಭೀರ ಗಾಯಗೊಂಡಿದ್ದು , ಮಂಗಳೂರು ಆಸ್ಪತ್ರೆಗೆ ಸಾಗಿಸಲಾಗಿದೆ .

ಸುಳ್ಯ ಬ್ಲಾಕ್ ಕಾಂಗ್ರೆಸ್ ಸಮಿತಿ ಸಭೆ- ಡಿಕೆಶಿ ಪದಗ್ರಹಣ ಕಾರ್ಯಕ್ರಮಕ್ಕೆ ಸಿದ್ಧತೆ

ಸುಳ್ಯ ಬ್ಲಾಕ್ ಕಾಂಗ್ರೆಸ್ ಸಮಿತಿ ಸಭೆ ಮೇ 30ರಂದು ಸುಳ್ಯ ಯುವಜನ ಸಂಯುಕ್ತ ಮಂಡಳಿಯ ಸಭಾಂಗಣದಲ್ಲಿ ನಡೆಯಿತು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಯಪ್ರಕಾಶ್ ರೈ ಅಧ್ಯಕ್ಷತೆ ವಹಿಸಿದ್ದರು.ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷ ರಾಗಿ ಜೂನ್ 7 ರಂದು ಡಿ ಕೆ ಶಿವಕುಮಾರ್ ಪದಗ್ರಹಣ ಕಾರ್ಯಕ್ರಮದ ಪೂರ್ವ ತಯಾರಿ ಕುರಿತು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಮಾಹಿತಿ...

ತಾಲೂಕು ಆಡಳಿತದ ನಿರ್ಲಕ್ಷ್ಯದಿಂದ ಬೆಳ್ಳಾರೆಯಲ್ಲಿ ಕೊರೋನಾ ಭೀತಿ ಹಬ್ಬಲು ಕಾರಣ,ಕ್ವಾರಂಟೈನ್ ಕೇಂದ್ರದಲ್ಲಿ ಪಾರ್ಟಿ ನಡೆಸಿದ್ದಾರೆ-ಎಸ್.ಡಿ.ಪಿ.ಐ ಆರೋಪ

ಮಹಾರಾಷ್ಟ್ರದಿಂದ ಬೆಳ್ಳಾರೆ ಆಗಮಿಸಿದ ಸ್ಥಳೀಯ ಯುವಕನಿಗೆ ಕೊರೋನಾ ವರದಿ ಪಾಸಿಟಿವ್ ಬಂದಿದ್ದು, ಇದೀಗ ಇಡೀ ವ್ಯಾಪ್ತಿಯೇ ಸೀಲ್ ಡೌನ್ ಆಗುವ ಭೀತಿ ಕೂಡ ಉಂಟಾಗಿದ್ದು ಇದಕ್ಕೆಲ್ಲಾ ಸುಳ್ಯ ತಾಲೂಕು ಆಡಳಿತದ ನಿರ್ಲಕ್ಷ್ಯ ಧೋರಣೆಯೇ ನೇರ ಕಾರಣವೆಂದು ಎಸ್.ಡಿ.ಪಿ.ಐ ಆರೋಪಿಸಿದೆ.ಮಹಾರಾಷ್ಟ್ರದಿಂದ ಬಂದ ವ್ಯಕ್ತಿಯು ಬೆಳ್ಳಾರೆ ಆಗಮಿಸಿದ ಮೂರು ದಿನಗಳ ನಂತರವಾಗಿರುತ್ತದೆ ಆತನನ್ನು ಕ್ವಾರಂಟೈನ್ ಗೆ ಒಳಪಡಿಸಿದ್ದು,ಅಷ್ಟು ದಿನ...

ತಾಲೂಕು ಬಿಜೆಪಿ ಪ.ಜಾತಿ ಮೋರ್ಚಾದ ಅಧ್ಯಕ್ಷ ರಾಗಿ ಅಚ್ಚುತ ಗುತ್ತಿಗಾರು

ಗುತ್ತಿಗಾರು ಗ್ರಾ.ಪಂ. ಅಧ್ಯಕ್ಷರಾಗಿರುವ ಅಚ್ಚುತ ಗುತ್ತಿಗಾರು ಸುಳ್ಯ ತಾಲೂಕು ಬಿಜೆಪಿ ಪರಿಶಿಷ್ಟ ಜಾತಿ ಮೋರ್ಚಾ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.ಕಳೆದ ಹಲವು ವರ್ಷಗಳಿಂದ ಪಕ್ಷ ಸಂಘಟನೆ ಹಾಗೂ ಕೊರೊನಾ ಕಾರ್ಯಪಡೆಯ ಸಕ್ರಿಯ ಕಾರ್ಯಗಳು ಮತ್ತು ಪಂಚಾಯತ್ ನ ಅಭಿವೃದ್ಧಿ ಕಾರ್ಯಗಳಲ್ಲಿ ಗಣನೀಯ ಸಾಧನೆಗಾಗಿ ಈ ಅವಕಾಶ ಕಲ್ಪಿಸಲಾಗಿದೆ.
Loading posts...

All posts loaded

No more posts

error: Content is protected !!