Ad Widget

ಅರಂತೋಡಿಗೆ ಭೇಟಿ ನೀಡಿದ ಕಾರಂಟೈನ್ ನಲ್ಲಿದ್ದ ವೈಧ್ಯರಿಗೆ ಪಾಸಿಟಿವ್- ಆತಂಕದಲ್ಲಿ ಅರಂತೋಡು

ಮಲೇಷ್ಯಾ ದಿಂದ ಬಂದು ಮಂಗಳೂರಿನ ಕಾರಂಟೈನ್ ನಲ್ಲಿದ್ದ ವೈಧ್ಯರೊರ್ವರು ಅರಂತೋಡಿಗೆ ಮದುವೆ ಮಾಡಿಕೊಟ್ಟಿದ್ದ ತಮ್ಮ ಮಗಳ ಮನೆಗೆ ಬಂದಿದ್ದಾರೆನ್ನಲಾಗಿದ್ದು, ಇವರು ಅರಂತೋಡಿನ ಮಗಳ ಮನೆಗೆ ಬಂದು ೨ ಗಂಟೆ ಆಗುವ ವೇಳೆಗೆ ಮಂಗಳೂರಿನ ಆಸ್ಪತ್ರೆಯಿಂದ ಕರೆ ಬಂದು ನಿಮಗೆ ಪಾಸಿಟಿವ್ ವರದಿ ಬಂದಿದೆ ಎಂದು ತಿಳಿಸಿದ್ದಾರೆನ್ನಲಾಗಿದೆ. ನೀವು ಎಲ್ಲಿ ಇದ್ದೀರಿ. ಕೂಡಲೇ ಆಸ್ಪತ್ರೆಗೆ ಬನ್ನಿ ಎಂದ...

ಬಿಜೆಪಿ ವಿವಿಧ ಮೋರ್ಚಾಗಳಿಗೆ ಪದಾಧಿಕಾರಿಗಳ ಆಯ್ಕೆ

ಭಾರತೀಯ ಜನತಾ ಪಾರ್ಟಿ- ಸುಳ್ಯ ಮಂಡಲದಲ್ಲಿ ಮುಂದಿನ ಮೂರು ವರುಷಗಳ ಅವಧಿಗೆ, ವಿವಿಧ ಮೋರ್ಚಾಗಳ ಅಧ್ಯಕ್ಷ ಹಾಗೂ ಪ್ರಧಾನ ಕಾರ್ಯದರ್ಶಿಗಳನ್ನು ಸುಳ್ಯ ಮಂಡಲ ಅಧ್ಯಕ್ಷರಾದ ಶ್ರೀ ಹರೀಶ್ ಕಂಜಿಪಿಲಿಯವರು ಘೋಷಿಸಿದ್ದಾರೆ.ಮಹಿಳಾ ಮೋರ್ಚಾದ ಅಧ್ಯಕ್ಷರಾಗಿ ಶ್ರೀಮತಿ ಶುಭದಾ ಎಸ್. ರೈ ಹಾಗೂ ಪ್ರಧಾನ ಕಾರ್ಯದರ್ಶಿಗಳಾಗಿ ಶ್ರೀಮತಿ ತೇಜಸ್ವಿನಿ ಕಟ್ಟಪುಣಿ, ಎಸ್. ಸಿ. ಮೋರ್ಚಾದ ಅಧ್ಯಕ್ಷರಾಗಿ ಶ್ರೀ ಅಚ್ಚುತ...
Ad Widget

ಸುಬ್ರಹ್ಮಣ್ಯ ಎಎಸ್‌ಐ ಚಂದಪ್ಪಗೆ ಬೀಳ್ಕೊಡುಗೆ ಸಮಾರಂಭ

ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಎಎಸ್‌ಐ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಚಂದಪ್ಪ ಅವರು ಮೇ 31 ರಂದು ನಿವೃತ್ತರಾದರು.ಪೋಲೀಸ್ ಇಲಾಖೆಯಲ್ಲಿ ನಿರಂತರ 33 ವರ್ಷ 7 ತಿಂಗಳು ಸೇವೆ ಸಲ್ಲಿಸಿ ನಿವೃತ್ತರಾದ ಚಂದಪ್ಪ ಅವರನ್ನು ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಬೀಳ್ಕೊಡಲಾಯಿತು . ಸುಬ್ರಹ್ಮಣ್ಯ ಠಾಣಾಧಿಕಾರಿ ಓಮನಾ ಎನ್.ಕೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು ....

ಎಸ್.ಟಿ. ಮೋರ್ಚಾದ ಅಧ್ಯಕ್ಷರಾಗಿ ಐತ್ತಪ್ಪ ನಾಯ್ಕ ಚೊಕ್ಕಾಡಿ, ಪ್ರಧಾನ ಕಾರ್ಯದರ್ಶಿ ಪೂವಪ್ಪ ನಾಯ್ಕ ಶಾಂತಿಗುರಿ

ಭಾರತೀಯ ಜನತಾ ಪಾರ್ಟಿ ಸುಳ್ಯ ಮಂಡಲದ ಬಿಜೆಪಿ ಎಸ್‌ಟಿ ಮೋರ್ಚಾ ಪದಾಧಿಕಾರಿಗಳ ಪಟ್ಟಿಯನ್ನು ಮಂಡಲ ಬಿಜೆಪಿ ಅಧ್ಯಕ್ಷ ಹರೀಶ್ ಕಂಜಿಪಿಲಿ ಬಿಡುಗಡೆಗೊಳಿಸಿದ್ದು, ಎಸ್.ಟಿ. ಮೋರ್ಚಾದ ಅಧ್ಯಕ್ಷರಾಗಿ ಐತ್ತಪ್ಪ ನಾಯ್ಕ ಚೊಕ್ಕಾಡಿ ಹಾಗೂ ಪ್ರಧಾನ ಕಾರ್ಯದರ್ಶಿಗಳಾಗಿ ಪೂವಪ್ಪ ನಾಯ್ಕ ಶಾಂತಿಗುರಿ ನೇಮಕಗೊಂಡಿದ್ದಾರೆ ,

ಗೃಹರಕ್ಷಕದಳದ ಸಿಬ್ಬಂದಿಗಳ ಸೇವೆಯನ್ನು ಮುಂದುವರಿಸುವಂತೆ ಜೆಡಿಎಸ್ ಆಗ್ರಹ

ರಾಜ್ಯ ಸರ್ಕಾರವು ಆರ್ಥಿಕ ಕಾರಣವೊಡ್ಡಿ ರಾಜ್ಯದ ಎಲ್ಲಾ ತಾಲೂಕುಗಳಲ್ಲಿ ಸೇವೆಸಲ್ಲಿಸುತ್ತಿರುವ ಗೃಹರಕ್ಷಕದಳದ ಸಿಬ್ಬಂದಿಗಳನ್ನು ಜೂನ್ ಒಂದರಿಂದ ಬಿಡುವ ಆದೇಶ ಜಾರಿ ಮಾಡಿದ್ದು ಈ ದಿಢೀರ್ ಘೋಷಣೆ ಅನೇಕ ದುಷ್ಪರಿಣಾಮಗಳಿಗೆ ಕಾರಣವಾಗಲಿದೆ. ರಾಜ್ಯದಲ್ಲಿ ಸುಮಾರು 25 ಸಾವಿರ ಗೃಹರಕ್ಷಕ ಸಿಬ್ಬಂದಿ ಗಳು ಸೇವೆ ಸಲ್ಲಿಸುತ್ತಿದ್ದು ನೆರೆ ಪರಿಹಾರ, ಸಾರಿಗೆ ಸುವ್ಯವಸ್ಥೆ, ಬಂದೋಬಸ್ತು, ಗಣ್ಯರ ರಕ್ಷಣೆ, ಕಾನೂನು ಸುವ್ಯವಸ್ಥೆ,...

ಮುಳ್ಯ- ಕಾಂಗ್ರೆಸ್ ವತಿಯಿಂದ ಆಹಾರ ಸಾಮಗ್ರಿ ವಿತರಣೆ

ದ.ಕ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷರಾದ ಧನಂಜಯ ಅಡ್ಪಂಗಾಯ ರವರ ನೇತೃತ್ವದಲ್ಲಿ ಅಜ್ಜಾವರ ಗ್ರಾಮದ ಮುಳ್ಯ ಪ.ಜಾತಿ ಕಾಲನಿಯ 50 ಮನೆಗಳಿಗೆ ಆಹಾರ ಸಾಮಗ್ರಿಯ ಕಿಟ್ ಗಳನ್ನು ಮೇ 31 ರಂದು ವಿತರಿಸಲಾಯಿತು. ಕೃಷಿಕರಾದ ರಾಜೇಶ್ ಭಟ್ ಎಲಿಮಲೆ ಆಹಾರ ಕಿಟ್ ವಿತರಣೆಗೆ ಚಾಲನೆ ನೀಡಿದರು. ಈ ಸಂದರ್ಭ ದಲ್ಲಿ ಅಜ್ಜಾವರ ಗ್ರಾಮ ಪಂಚಾಯಿತಿಯ...

ಬೆಳ್ಳಾರೆ ಪ್ರಾ.ಆ.ಕೇಂದ್ರದ ಕಿರಿಯ ಮಹಿಳಾ ಅರೋಗ್ಯ ಸಹಾಯಕಿ ರೇವತಿ ಬೊಳ್ಳಾಜೆ ಸೇವಾ ನಿವೃತ್ತಿ

ಬೆಳ್ಳಾರೆ ಪ್ರಾಥಮಿಕ ಆರೋಗ್ಯ ಕೇಂದ್ರದ ಕಿರಿಯ ಮಹಿಳಾ ಅರೋಗ್ಯ ಸಹಾಯಕಿಯಾದ ಶ್ರೀಮತಿ ರೇವತಿ ಐ . ಬೊಳ್ಳಾಜೆಯವರು ವೃತ್ತಿ ಬದುಕಿನಿಂದ ನಿವೃತ್ತರಾಗಿದ್ದಾರೆ . ಐವತ್ತೊಕ್ಲು ಗ್ರಾಮದ ಬೊಳ್ಳಾಜೆಯವರಾಗಿದ್ದು , ಪ್ರಸ್ತುತ ದೇವಚಳ್ಳ ಗ್ರಾಮದ ಅಡ್ಡನಪಾರೆಯಲ್ಲಿ ನೆಲೆಸಿರುವ ಪ್ರಗತಿಪರ ಕೃಷಿಕ ವಸಂತಕುಮಾರ್ ಬೊಳ್ಳಾಜೆಯವರ ಪತ್ನಿಯಾಗಿರುವ ರೇವತಿ ಐ.ಯವರು 1982 ರಲ್ಲಿ ಕಾರ್ಕಳ ತಾಲೂಕಿನ ಬೆಳುವಾಯಿ ಪ್ರಾಥಮಿಕ ಆರೋಗ್ಯ...

ನೆಲ್ಲೂರುಕೆಮ್ರಾಜೆ ಸೊಸೈಟಿ ಮ್ಯಾನೇಜರ್ ನಿತ್ಯಾನಂದ ಮಾಪಲಕಜೆ ಯವರಿಗೆ ಬೀಳ್ಕೊಡುಗೆ

ನೆಲ್ಲೂರುಕೆಮ್ರಾಜೆ ಪ್ರಾ.ಕೃ.ಪ.ಸಹಕಾರ ಸಂಘದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ನಿತ್ಯಾನಂದ ಮಾಪಲಕಜೆಯವರು ಇಂದು ಸೇವೆಯಿಂದ ನಿವೃತ್ತ ರಾಗಿರುತ್ತಾರೆ.ಸಂಘದ ಮೊಳಹಳ್ಳಿ ಶಿವರಾವ್ ಸಭಾಂಗಣದಲ್ಲಿ ಇಂದು ನಡೆದ ಸರಳ ಸಮಾರಂಭದಲ್ಲಿ ಅವರನ್ನು ಆತ್ಮೀಯವಾಗಿ ಬೀಳ್ಕೊಡಲಾಯಿತು. ಸಂಘದ ಅಧ್ಯಕ್ಷ ವಿಷ್ಣು ಭಟ್ ರವರು ಕಾರ್ಯ ಕ್ರಮದ ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ನೆಲ್ಲೂರು ಕೆಮ್ರಾಜೆ ಗ್ರಾಮ ಪಂಚಾಯತ್ ಅಧ್ಯಕ್ಷ ದಿವಾಕರ ನಾಯಕ್...

ನವ ವಿವಾಹಿತ ಮೃತ್ಯು

ಚೆಂಬು ಗ್ರಾಮದ ಚಂದ್ರಶೇಖರ ಕಾಚೇಲು(50) ರವರು ಮೇ 29 ರಂದು ರಾತ್ರಿ ಮೃತಪಟ್ಟಿದ್ದು, ಅವರಿಗೆ ಜ್ವರ ಭಾದಿಸಿರುವ ಹಿನ್ನೆಲೆಯಲ್ಲಿ ಮೇ 30 ಅವರ ಮೃತದೇಹವನ್ನು ಮಡಿಕೇರಿ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ ಎಂದು ತಿಳಿದು ಬಂದಿದೆ . ಚಂದ್ರಶೇಖರ ಅವರಿಗೆ ಕೆಲವು ದಿನಗಳಿಂದ ಜ್ವರ ಬಾಧೆಯಿತ್ತೆನ್ನಲಾಗಿದೆ . ಇದಕ್ಕಾಗಿ ಸ್ಥಳೀಯ ಆಸ್ಪತ್ರೆಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು . ನಿನ್ನೆ ಸಂಜೆ...
error: Content is protected !!