ಪ್ರತಿ ಮೊಬೈಲ್ ನಂಬರಿನ ಆರಂಭದಲ್ಲಿ 9 ಸೇರಿಸಲು ಟ್ರಾಯ್ ಶಿಫಾರಸು ಮಾಡಿದೆ . ಅದೇ ರೀತಿ ಸ್ಥಿರ ದೂರವಾಣಿಯಿಂದ ಮೊಬೈಲ್ ಗೆ ಕರೆ ಮಾಡುವ ಸಂದರ್ಭದಲ್ಲಿ ಆರಂಭದಲ್ಲಿ ಸೊನ್ನೆ ಸೇರಿಸಲು ಭಾರತೀಯ ದೂರ ಸಂಪರ್ಕ ನಿಯಂತ್ರಣ ಪ್ರಾಧಿಕಾರ ( ಟ್ರಾಯ್ ) ಈ ಸಂಬಂಧ ಶಿಫಾರಸು ಮಾಡಿದೆ . ಇದು ಯಾವಾಗ ಜಾರಿಗೆ ಬರಲಿದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ . ಇಗಾಗಲೇ ಇರುವ ಹತ್ತು ಅಂಕಿಯ ನಂಬರಿನಿಂದ ನೂರು ಕೋಟಿ ಜನರಿಗೆ ಮೊಬೈಲ್ ಬಳಕೆ ಮಾಡಲು ಅವಕಾಶ ಆಗುತ್ತದೆ . ಹೆಚ್ಚುತ್ತಿರುವ ಮೊಬೈಲ್ ಬಳಕೆ ಮತ್ತು ದಿನೇ ದಿನೇ ಏರುವ ಜನಸಂಖ್ಯೆಗೆ ಅನುಗುಣವಾಗಿ ಮೊಬೈಲ್ ಬಳಕೆದಾರರ ಅಗತ್ಯ ಪೂರೈಸುವ ಸಲುವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ .
- Sunday
- November 24th, 2024