Ad Widget

ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಹಾಕದೆ ನಿಯಮ ಉಲ್ಲಂಘಿಸುವವರಿಗೆ 200 ರೂ ದಂಡ-ನಿರ್ಧಾರ

ರಾಜ್ಯದಲ್ಲಿ ಕೊರೋನಾ ಸೋಂಕು ನಿತ್ಯವೂ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಜನ ಸ್ವಯಂ ನಿಯಂತ್ರಣಕ್ಕೆ ಒಳಗಾಗದಿದ್ದರೆ ಇನ್ನು ಮುಂದೆ ಸರಕಾರವೇ ನಿಯಂತ್ರಣ ವಿಧಿಸಲು ಮುಂದಾಗಿದೆ . ಸರಕಾರದ ನಿರಂತರ ಎಚ್ಚರಿಕೆಯ ಮಧ್ಯಯೂ ಜನ ನಿರ್ಲಕ್ಷ್ಯ ವಹಿಸುತ್ತಿರುವುದು ಸರಕಾರದ ಚಿಂತೆಗೆ ಕಾರಣವಾಗಿದೆ . ಈ ನಿಟ್ಟಿನಲ್ಲಿ ರಾಜ್ಯ ಸರಕಾರ ಸಾರ್ವಜನಿಕ ಸ್ಥಳದಲ್ಲಿ ಮಾಸ್ಕ್ ರಹಿತವಾಗಿ ಸಂಚರಿಸುವುದು ಕಂಡು ಬಂದರೆ ದಂಡ ವಿಧಿಸಲು ಮುಂದಾಗಿದೆ . ಕೊರೋನಾ ಪೀಡಿತರು ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸುವುದು ಕಡ್ಡಾಯ. ಹಾಕದಿದ್ದರೆ ದಂಡ ಎಂಬ ನಿಯಮವನ್ನು ಈಗಾಗಲೇ ಕೆಲವು ರಾಜ್ಯಗಳಲ್ಲಿ ಜಾರಿಗೆ ತರಲಾಗಿದೆ . ಇದೀಗ ಕರ್ನಾಟಕ ಕೂಡ ಇದೇ ನಿರ್ಧಾರಕ್ಕೆ ಬಂದಿದೆ . ಜನತೆಯ ಸುರಕ್ಷತೆಗಾಗಿ ರಾಜ್ಯ ಸರಕಾರ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಹಾಕದೆ ನಿಯಮ ಉಲ್ಲಂಘಿಸುವವರಿಗೆ 200 ರೂಪಾಯಿ ದಂಡ ವಿಧಿಸಲಾಗುವುದು ಎಂದು ಆರೋಗ್ಯ ಸಚಿವ ಶ್ರೀರಾಮುಲು ಟ್ವೀಟ್ ಮಾಡಿದ್ದಾರೆ . ಕೊರೋನಾ ಸೋಂಕು ತಗುಲಿರಬಹುದು ಎನ್ನುವ ಸಂದೇಹದ ಮೇಲೆ ಏಳು ದಿನ ಕ್ವಾರಂಟೈನ್‌ಗೆ ಒಳಗಾದ ನಂತರ ಶಂಕಿತ ವ್ಯಕ್ತಿಯಲ್ಲಿ ಸೋಂಕಿನ ಲಕ್ಷಣಗಳು ಕಂಡು ಬರದೆ ಇದ್ದಲ್ಲಿ , ಅಂತಹವರನ್ನು ಹೋಂ ಕ್ವಾರಂಟೈನ್‌ಗೆ ಒಳಪಡಿಸಬಹುದೆಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸೂಚಿಸಿದೆ . ಈ ಕುರಿತು ಇಲಾಖೆ ಆದೇಶ ಹೊರಡಿಸಿದ್ದು , ಒಂದು ವಾರದ ಬಳಿಕ ಸೋಂಕಿನ ಲಕ್ಷಣಗಳಿಲ್ಲದ ವ್ಯಕ್ತಿಯನ್ನು ಆರ್.ಟಿ.ಪಿ.ಸಿ.ಆರ್‌ ಕೋವಿಡ್ ಪರೀಕ್ಷೆಗೆ ಒಳಪಡಿಸಬೇಕಾದ ಅಗತ್ಯವಿಲ್ಲ ಕೇವಲ ಥರ್ಮಲ್ ಸ್ಮಿನಿಂಗ್ ಮಾಡಿ ಹೋಂ ಕ್ಯಾರಟೈನ್‌ಗೆ ಕಳಿಸಬಹುದು ಎಂದು ತಿಳಿಸಲಾಗಿದೆ .

. . . . . . .

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!