
ಕಳೆದ ಮೂರು ತಿಂಗಳುಗಳಿಂದ ಲಾಕ್ ಡೌನ್ ಹಿನ್ನೆಲೆಯಲ್ಲಿ ಮುಚ್ಚಲ್ಪಟ್ಟ ಮಸೀದಿ ಮತ್ತು ದರ್ಗಾಗಳ ದ್ವಾರಗಳು ತೆರೆಯುವ ಸಂದರ್ಭದಲ್ಲಿ ಅನುಸರಿಸಬೇಕಾದ ಮಾರ್ಗಸೂಚಿಗಳನ್ನು ಅಲ್ಪಸಂಖ್ಯಾತರ ಆಯೋಗದಿಂದ ಪ್ರಕಟಿಸಲಾಗಿದೆ.
ಮಸೀದಿಗಳಲ್ಲಿ ಪ್ರಾರ್ಥನೆ ಸಲ್ಲಿಸುವರು ತಮ್ಮ ತಮ್ಮ ಮನೆಗಳಿಂದ ಅಂಗ ಸ್ನಾನ ಮಾಡಿಕೊಂಡು ಬರುವುದು,ಸಾಮಾಜಿಕ ಅಂತರಗಳನ್ನು ಕಾಯ್ದುಕೊಳ್ಳುವುದು ಮಸೀದಿಯಲ್ಲಿ ಜನರು ಅಧಿಕ ಸಂಖ್ಯೆಯಲ್ಲಿದ್ದರೆ ಎರಡು ಜಮಾಹತ್ ಗಳನ್ನು ಆಯೋಜಿಸುವುದು, ಸುನ್ನತ್ ನಫೀಲ್ ನಮಾಜ್ ಗಳಂತಹ ಪ್ರಾರ್ಥನೆಗಳನ್ನು ತಮ್ಮ ತಮ್ಮ ಮನೆಗಳಲ್ಲಿ ನಿರ್ವಹಿಸುವುದು ಪ್ರಾರ್ಥನೆಯ ನಂತರ ತಕ್ಷಣ ಎಲ್ಲರೂ ಮಸೀದಿಯಿಂದ ನಿರ್ಗಮಿಸಬೇಕು ಹಾಗೂ ಮಸೀದಿಯ ಆವರಣದಲ್ಲಿ ಯಾವುದೇ ರೀತಿಯ ಚರ್ಚೆಗಳನ್ನು ನಡೆಸಬಾರದು ಎಂದು ಮಾರ್ಗಸೂಚಿಯಲ್ಲಿ ತಿಳಿಸಿದ್ದಾರೆ.
ಶುಕ್ರವಾರದ ಪ್ರಾರ್ಥನೆಯ ಸಮಯದಲ್ಲಿ ಕುತುಬಾ ವನ್ನು ಸಂಕ್ಷಿಪ್ತವಾಗಿ ಮುಗಿಸಿ ಪ್ರಾರ್ಥನೆಯನ್ನು 15ರಿಂದ 20 ನಿಮಿಷಗಳಲ್ಲಿ ಪೂರ್ಣಗೊಳಿಸಬೇಕು .ಮಸೀದಿಗಳು ಹಾಗೂ ದರ್ಗಾಗಳ ಆವರಣಗಳಲ್ಲಿ ಭಿಕ್ಷಾಟನೆಯಿಂದ ತಡೆಗಟ್ಟುವುದು, ಸಿಹಿ ಪದಾರ್ಥಗಳನ್ನು ನೀಡುವುದು ಹಾಗೂ ಸ್ವೀಕರಿಸುವುದನ್ನು ನಿಷೇಧಿಸಬೇಕು , ಎಂದು ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಅಬ್ದುಲ್ ಅಜೀಂ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.