Ad Widget

ಕಂಟೈನರ್- ಬೈಕು ಡಿಕ್ಕಿ ಸವಾರ ಸಾವು

ಸುಂಟಿಕೊಪ್ಪ; ಸಮೀಪದ ಕೆದಕಲ್ ಭದ್ರಕಾಳಿ ದೇವಾಲಯದ ತಿರುವಿನಲ್ಲಿ ಕಂಟೈನರ್ ಲಾರಿಯ ಚಕ್ರಕ್ಕೆ ಡಿಕ್ಕಿ ಹೊಡೆದು ಹಿಂಬದಿ ಚಕ್ರ ಹರಿದ ಪರಿಣಾಮ ಸವಾರ ಸಾವನ್ನಪ್ಪಿದ್ದ ಘಟನೆ ಶನಿವಾರ ಬೆಳಿಗ್ಗೆ ನಡೆದಿದೆ.
ಕುಶಾಲನಗರ ಕಡೆಯಿಂದ ಮಡಿಕೇರಿ ಯತ್ತ ತೆರಳುತ್ತಿದ್ದ ಬೈಕು ಮಡಿಕೇರಿಯಿಂದ ಕುಶಾಲನಗರ ಕಡೆಗೆ ತೆರಳುತ್ರಿದ್ದ  ಕಂಟೈನರ್ ಲಾರಿಯ ಚಕ್ರಕ್ಕೆ ಡಿಕ್ಕಿ ಹೊಡೆದಿದೆ.ಡಿಕ್ಕಿ ಹೊಡೆದ ಪರಿಣಾಮ ಆಯಾ ತಪ್ಪಿ‌ ಬಿದ್ದ ಸವಾರ ಲಾರಿಯ ಹಿಂದಿನ‌ ಚಕ್ರದತ್ತ ಬಿದ್ದಿದ್ದಾನೆ.ಇದರಿಂದ ಆತನ ಮೇಲೆ ಲಾರಿ ಚಕ್ರ ಹರಿದಿದೆ.
ಕೂಡಲೇ ಸ್ಥಳೀಯರು ಆಂಬುಲೇನ್ಸ್ ಮೂಲಕ ಮಡಿಕೇರಿ ಜಿಲ್ಲಾ ಆಸ್ಪತ್ರೆಗೆ ರವಾನಿಸುವ ಸಂದರ್ಭದಲ್ಲಿ ದಾರಿ ಮದ್ಯೆ ಅಸುನೀಗಿದ್ದಾನೆ.
ಸುಂಟಿಕೊಪ್ಪ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. 

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!