ಗುತ್ತಿಗಾರು ಗ್ರಾಮದ ಬಳ್ಳಕ ಎಂಬಲ್ಲ ಕುಕ್ಕೆತ್ತಿ & ಕಂಚಾರತಿ ಎಂಬ ಬಡ ವೃದ್ಧ ಅಶಕ್ತ ಮಹಿಳೆಯರು ವಾಸವಿರುವ ಮನೆಯ ಮಾಡಿನ ದುರಸ್ತಿ ಕಾರ್ಯವನ್ನು ಕೊರೊನಾ ತುರ್ತು ಕಾರ್ಯಪಡೆಯ ಸದಸ್ಯರು ಕೈಗೊಂಡರು.
ಗ್ರಾಮ ಪಂಚಾಯತ್ ಅಧ್ಯಕ್ಷರಾದ ಅಚ್ಯುತ ಗುತ್ತಿಗಾರು ಗ್ರಾ .ಪ .ಸದಸ್ಯರಾದ ಜಯಪ್ರಕಾಶ್ ಮೊಗ್ರ & ರಾಕೇಶ್ ಮೆಟ್ಟಿನಡ್ಕ, ಲೋಕೇಶ್ವರ ಡಿ ಆರ್ ಧರ್ಮಸ್ಥಳ ಗ್ರಾಮಾಭಿವೃಧ್ದಿ ಯೋಜನೆಯ ನಾಲ್ಕೂರು ಒಕ್ಕೂಟದ ಅಧ್ಯಕ್ಷರಾದ ಸತೀಶ್ ಬೊಂಬುಳಿ , ಮಹೇಶ್ ಸಾಲ್ತಾಡಿ , ಕೇಶವ ಕಾಂತಿಲ, ಶೂರಪ್ಪ ಕಮಿಲ ,ಶಿವರಾಮ ನೆಕ್ಲಾಜೆ ಇವರುಗಳು ಮನೆ ದುರಸ್ತಿ ಕಾರ್ಯದಲ್ಲಿ ಕೈ ಜೋಡಿಸಿದರು
ಊಟೊಪಚಾರದ ವ್ಯವಸ್ಥೆಯಲ್ಲಿ ಉಷಾ ಜಯರಾಮ ಮುತ್ಲಾಜೆ ಬಳ್ಳಕ್ಕ ಮತ್ತು ಮನೆಯವರು ಪಾಲ್ಗೊಂಡರು.