Ad Widget

ಕೇರಳದ ಪ್ರಸಿದ್ಧ ಮಾತೃಭೂಮಿ ಪತ್ರಿಕೆಯ ಅಧ್ಯಕ್ಷ ಎಂ.ಪಿ.ವೀರೇಂದ್ರ ಕುಮಾರ್ ನಿಧನ

ಮಾಜಿ ಕೇಂದ್ರ ಸಚಿವ , ಸಮಾಜವಾದಿ ಮುಖಂಡ , ರಾಜ್ಯಸಭಾ ಸದಸ್ಯ ಹಾಗೂ ಲೇಖಕ ಎಂ.ಪಿ.ವೀರೇಂದ್ರ ಕುಮಾರ್ ಮೇ. 28 ರಾತ್ರಿ ನಿಧನರಾದರು . ಅವರಿಗೆ 84 ವರ್ಷ ವಯಸ್ಸಾಗಿತ್ತು . ಅವರು ಅಲ್ಪಕಾಲದಿಂದ ಸಕ್ರಿಯ ರಾಜಕಾರಣದಿಂದ ದೂರವಿದ್ದರು . ಲೋಕತಾಂತ್ರಿಕ ಜನತಾದಳದ ರಾಜ್ಯ ಘಟಕದ ಅಧ್ಯಕ್ಷರೂ ಆಗಿದ್ದ ಅವರು ಹೃದಯಾಘಾತದಿಂದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು . ತಮ್ಮ ರಾಜಕೀಯ ಹಾಗೂ ಸಾಹಿತ್ಯಕ ಶಕ್ತಿಯಿಂದ ಹಲವು ಸ್ಥಾನಗಳನ್ನು ಅಲಂಕರಿಸಿದ್ದ ಅವರು , ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾ ( ಪಿಟಿಐ ) , ಭಾರತೀಯ ವೃತ್ತಪತ್ರಿಕೆಗಳ ಸೊಸೈಟಿ ( ಐಎನ್‌ಎಸ್ ) ಅಧ್ಯಕ್ಷರಾಗಿ , ಮಾತೃಭೂಮಿ ಪತ್ರಿಕೆಯ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದರು . ವಯನಾಡ್‌ನ ಕಿತ್ತಾದ ಸಾಂಪ್ರದಾಯಿಕ ಜೈನ ಕುಟುಂಬದಲ್ಲಿ ಜನಿಸಿದ ಅವರು , ಸಂಯುಕ್ತ ಸೋಶಿಯಲಿಸ್ಟ್ ಪಾರ್ಟಿ ಮೂಲಕ ಸಕ್ರಿಯ ರಾಜಕಾರಣ ಆರಂಭಿಸಿದರು .
ಬಳಿಕ ಎಲ್‌ಜೆಡಿ ಹುಟ್ಟುಹಾಕುವ ಮುನ್ನ ಜನತಾದಳ , ಜೆಡಿಎಸ್ ಮತ್ತು ಸೋಶಿಯಲಿಸ್ಟ್ ಜನತಾದಳ ಪಕ್ಷಗಳ ರಾಷ್ಟ್ರೀಯ ನಾಯಕರಾಗಿ ಹೊರಹೊಮ್ಮಿದರು . ರಾಜ್ಯ ವಿಧಾನಸಭೆಗೆ ಕಿತ್ತಾ ಕ್ಷೇತ್ರದಿಂದ 1987 ರಲ್ಲಿ ಆಯ್ಕೆಯಾಗಿದ್ದ ಅವರು , 1997 ರವರೆಗೂ ಶಾಸಕರಾಗಿದ್ದರು . ಆಗ ರಾಜ್ಯದ ಅರಣ್ಯ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು . ಕೋಝಿಕ್ಕೋಡ್ ಕ್ಷೇತ್ರದಿಂದ 1996 ಮತ್ತು 1997 ರಲ್ಲಿ ಸಂಸದರಾಗಿ ಆಯ್ಕೆಯಾದರು . ಕೇಂದ್ರದಲ್ಲಿ ಹಣಕಾಸು ಖಾತೆ ರಾಜ್ಯ ಸಚಿವರಾಗಿದ್ದ ಅವರು , ಕಾರ್ಮಿಕ ಮತ್ತು ಸಂಸದೀಯ ವ್ಯವಹಾರ ಖಾತೆಯನ್ನೂ ನಿಭಾಯಿಸಿದ್ದರು . ಖ್ಯಾತ ವಾಗ್ನಿಯಾಗಿದ್ದ ಅವರು , ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ ಮತ್ತು ವಯಲಾರ್‌ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳಿಗೆ ಪಾತ್ರರಾಗಿದ್ದರು . ವೀರೇಂದ್ರ ಕುಮಾರ್‌ ಅವರು ಪತ್ನಿ ಉಷಾ , ಮಗ ಎಂ.ವಿ.ಶ್ರೇಯಾಂಸ್ ಕುಮಾರ್ , ಪುತ್ರಿಯರಾದ ಎಂ.ವಿ.ಆಶಾ , ಎಂ.ವಿ.ನಿಶಾ ಮತ್ತು ಎಂ.ವಿ.ಜಯಲಕ್ಷ್ಮಿ ಅವರನ್ನು ಅಗಲಿದ್ದಾರೆ .

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!