

ರಾಜ್ಯದಲ್ಲಿ ಕೊರೊನಾ ವೈರಸ್ ಸಂಪೂರ್ಣ ಹತೋಟಿಗೆ ಬಾರದಿರುವ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯಿತಿ ಚುನಾವಣೆಯನ್ನು ರಾಜ್ಯ ಚುನಾವಣಾ ಆಯೋಗ ತಾತ್ಕಲಿಕವಾಗಿ ಮುಂದೂಡಿದೆ. ಸದ್ಯ ರಾಜ್ಯದಲ್ಲಿರುವ ಪರಿಸ್ಥಿತಿಯನ್ನು ವಿಸ್ತ್ರತವಾಗಿ ಅವಲೋಕಿಸಿ ಚುನಾವಣಾ ಆಯೋಗ ಈ ನಿರ್ಧಾರ ಕೈಗೊಂಡಿದೆ.ಒಂದೇ ವೇಳೆ ಚುನಾವಣೆ ನಡೆದರೇ,ಕೊರೊನಾ ಸೋಂಕು ಮತ್ತಷ್ಟು ಜನರಿಗೆ ಹರಡಲಿದೆ ಎಂಬ ಭೀತಿಯಿಂದ ಚುನಾವಣೆ ಮುಂದೂಡಲಾಗಿದೆ. ಸಂವಿಧಾನದ ಪರಿಚೇದ್ಧ 243 ಕಲಾಂ ಅಡಿಯಲ್ಲಿ ತನಗಿರೋ ಅಧಿಕಾರ ಬಳಸಿ ಚುನಾವಣಾ ಆಯೋಗ ಗ್ರಾಮ ಪಂಚಾಯಿತಿ ಎಲೆಕ್ಷನ್ ಮುಂದೂಡಿದೆ. ರಾಜ್ಯದ 6025 ಗ್ರಾಮ ಪಂಚಾಯಿತಿಗಳ ಪೈಕಿ 5800 ಪಂಚಾಯಿತಿಗಳ ಚುನಾಯಿತ ಅವಧಿ ಅಂತ್ಯವಾಗಿದ್ದು,ಆಗಸ್ಟ್ ನಲ್ಲಿ ಚುನಾವಣೆ ನಡೆಯಬೇಕಿತ್ತು.