ಸುಳ್ಯ ಗಾಂಧಿನಗರದಿಂದ ಆಲೆಟ್ಟಿ ಸಂಪರ್ಕದ ರಸ್ತೆ ನಾಗಪಟ್ಟಣ ಸೇತುವೆ ತನಕದ ರಸ್ತೆ ಕಾಂಕ್ರೀಟಿಕರಣ ಕಾಮಗಾರಿ ಕೆಲಸಕ್ಕೆ ಮೇ.29 ರಂದು ಶಾಸಕ ಎಸ್. ಅಂಗಾರರವರು ಗುದ್ದಲಿ ಪೂಜೆ ನೆರವೇರಿಸಿ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಜಿ.ಪಂ.ಸದಸ್ಯ ಹರೀಶ್ ಕಂಜಿಪಿಲಿ, ಆಲೆಟ್ಟಿ ಗ್ರಾ. ಪಂಚಾಯತ್ ಅಧ್ಯಕ್ಷ ಹರೀಶ್ ರಂಗತ್ತಮಲೆ, ಕಲ್ಲುಮುಟ್ಲು ವಾರ್ಡಿನ ನ.ಪಂ.ಸದಸ್ಯೆ ಶ್ರೀಮತಿ ಸುಶೀಲ ಜಿನ್ನಪ್ಪ ಪೂಜಾರಿ, ಸುಳ್ಯ ಸಿ.ಎ.ಬ್ಯಾಂಕ್ಅಧ್ಯಕ್ಷ ಹರೀಶ್ ಬೂಡುಪನ್ನೆ, ನ.ಪಂ.ಸದಸ್ಯ ವಿನಯ ಕಂದಡ್ಕ, ಸುಧಾಕರ ಕೇರ್ಪಳ, ಪ್ರವಿತಾ ಪ್ರಶಾಂತ್ ಕಾಯರ್ತೋಡಿ, ಎ.ಪಿ.ಎಂ.ಸಿ.ನಿರ್ದೇಶಕ ಜಯಪ್ರಕಾಶ್ ಕುಂಚಡ್ಕ, ಆಲೆಟ್ಟಿ ಸೊಸೈಟಿಅಧ್ಯಕ್ಷ ಶ್ರೀಪತಿ ಭಟ್ ಮಜಿಗುಂಡಿ, ನಿರ್ದೇಶಕ ಸುಧಾಕರ ಆಲೆಟ್ಟಿ, ಆಲೆಟ್ಟಿ ಪಂ.ಸದಸ್ಯ ಸುದರ್ಶನ ಪಾತಿಕಲ್ಲು, ಮಾಜಿ ಅಧ್ಯಕ್ಷ ಧನಂಜಯ ಕುಂಚಡ್ಕ, ಆಲೆಟ್ಟಿ ಯುವಕ ಮಂಡಲದ ಅಧ್ಯಕ್ಷ ದಿನೇಶ್ ಆಲೆಟ್ಟಿ, ಸುಭೋದ್ ಶೆಟ್ಟಿ ಮೇನಾಲ, ಜಗದೀಶ್ ಸರಳಿಕುಂಜ, ಜಿನ್ನಪ್ಪ ಪೂಜಾರಿ ಕಲ್ಲುಮುಟ್ಲು, ಹಾಗೂ ಯುವಕ ಮಂಡಲದ ಸದಸ್ಯರು, ಅಟೋ ಚಾಲಕ ಮಾಲಕರು, ಆಲೆಟ್ಟಿ ಗ್ರಾಮಸ್ಥರು, ಗುತ್ತಿಗೆದಾರ ಧೀರಜ್ ಕುಂದಾಪುರ ಮತ್ತಿತರರು ಉಪಸ್ಥಿತರಿದ್ದರು. ಮಳೆಹಾನಿ ಯೋಜನೆಯಡಿ ಹಾಗೂ ಶಾಸಕರ ಅನುದಾನ ಸೇರಿ ಒಟ್ಟು ೩೦ ಲಕ್ಷದಲ್ಲಿ ೨೪೦ ಮೀ ರಸ್ತೆ ಕಾಮಗಾರಿ ನಡೆಯಲಿದ್ದು 5.5.ಮೀಟರ್ ಅಗಲದ ರಸ್ತೆ ನಿರ್ಮಾಣವಾಗಲಿದೆ.
- Thursday
- November 21st, 2024