
ಮುಕ್ಕೂರು : ಮಳೆ ಹಾನಿ ಪರಿಹಾರ ಯೋಜನೆಯಡಿ ಪೆರುವಾಜೆ ಗ್ರಾಮದ ಪೆರುವೋಡಿ ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಸಂಪರ್ಕ ರಸ್ತೆಯ ಕಾಪುಕಾಡು- ಜಾಲ್ಪಣೆ ತನಕ 17 ಲಕ್ಷ ರೂ.ವೆಚ್ಚದಲ್ಲಿ ಮರು ಡಾಮರೀಕರಣಕ್ಕೆ ಮೇ 28 ರಂದು ಚಾಲನೆ ನೀಡಲಾಯಿತು.ಜಿ.ಪಂ.ಸದಸ್ಯ ಎಸ್.ಎನ್. ಮನ್ಮಥ ಕಾಮಗಾರಿಗೆ ಚಾಲನೆ ನೀಡಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಗ್ರಾ.ಪಂ.ಸದಸ್ಯ ಉಮೇಶ್ ಕೆಎಂಬಿ,ನ್ಯಾಯವಾದಿ ಗಣಪತಿ ಭಟ್ ನೀರ್ಕಜೆ, ಸುಬ್ರಾಯ ಭಟ್ ನೀರ್ಕಜೆ, ರಾಮಚಂದ್ರ ಕೋಡಿಬೈಲು, ಕುಶಾಲಪ್ಪ ಗೌಡ ಪೆರುವಾಜೆ, ಸತ್ಯಪ್ರಸಾದ್ ಕಂಡಿಪ್ಪಾಡಿ, ನಾರಾಯಣ ಕೊಂಡೆಪ್ಪಾಡಿ ಮೊದಲಾದವರು ಉಪಸ್ಥಿತರಿದ್ದರು. ಸಂಸದ ನಳಿನ್ ಕುಮಾರ್ ಕಟೀಲು ಹಾಗೂ ಶಾಸಕ ಅಂಗಾರ ಅವರು ಅನುದಾನ ಒದಗಿಸುವಲ್ಲಿ ಸಹಕರಿಸಿದರು.