ಭಾರತ ತನ್ನ ಭೂಭಾಗದೊಳಗೆ ಕೈಗೆತ್ತಿಕೊಂಡಿರುವ ರಸ್ತೆ ಕಾಮಗಾರಿಯನ್ನೇ ನೆಪವಾಗಿಟ್ಟುಕೊಂಡು ಗಡಿಯಲ್ಲಿ ಸೇನಾ ಜಮಾವಣೆ ಮಾಡಿ ಬೆದರಿಕೆಯೊಡ್ಡುತ್ತಿರುವ ಚೀನಾಕ್ಕೆ ಸಡ್ಡು ಹೊಡೆಯಲು ಕೇಂದ್ರ ಸರ್ಕಾರ ಮುಂದಾಗಿದೆ . ಗಡಿಯುದ್ದಕ್ಕೂ ಚೀನಾ ಎಲ್ಲೆಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಯೋಧರನ್ನು ಜಮಾವಣೆ ಮಾಡಿದೆಯೋ ಅಲ್ಲೆಲ್ಲಾ ಸಮಬಲ ರೀತಿಯಲ್ಲಿ ಸೈನಿಕರ ನಿಯೋಜನೆ ಮಾಡಲು ಹಾಗೂ ಚೀನಾ ಆಕ್ಷೇಪಿಸುತ್ತಿರುವ ರಸ್ತೆ ಕಾಮಗಾರಿ ಮುಂದುವರಿಸಲು ನಿರ್ಧರಿಸಿದೆ . ಚೀನಾ ಕ್ಯಾತೆ : ಮೋದಿ ಉನ್ನತ ಮಟ್ಟದ ತುರ್ತು ಸಭೆ ! ಇದರ ಬೆನ್ನಲ್ಲೇ ಗಡಿಯಲ್ಲಿನ ಹಲವು ಭಾಗಗಳಿಗೆ ಭಾರಿ ಸಂಖ್ಯೆಯಲ್ಲಿ ಯೋಧರನ್ನು ರವಾನಿಸಲಾಗಿದೆ . ಗಡಿಯಲ್ಲಿ ಚೀನಿ ಪಡೆಗಳ ಚಲನವಲನದ ಮೇಲೆ ಮೇಲೆ ಕಣ್ಣಿಡಲು ಡೋನ್ ಪಹರೆ ಕೂಡ ಆರಂಭಿಸಲಾಗಿದೆ . ಚೀನಾ ಅತಿ ಎತ್ತರದಿಂದ ನಿಗಾ ಇಡುವ , ದಾಳಿ ಮಾಡುವ ಸಾಮರ್ಥ್ಯ ಹೊಂದಿರುವ ಡೋನ್ ಅನ್ನು ನಿಯೋಜನೆ ಮಾಡಿತ್ತು . ಅದರ ಬೆನ್ನಲ್ಲೇ ಭಾರತ ಕೂಡ ತಾನು ಏನು ಕಡಿಮೆ ಇಲ್ಲ ಎಂದು ತೋರಿಸಿ ಕೊಟ್ಟಿದೆ.ಜತೆಗೆ ಚೀನಾ ದ ಸೇಡು ತೀರಿಸಲು ಕಾಯುತ್ತಿರುವ ಅಮೇರಿಕಾ ಭಾರತಕ್ಕೆ ಬೆಂಬಲ ವ್ಯಕ್ತಪಡಿಸಿ ಯುದ್ದಕ್ಕೆ ತಾನು ರೆಡಿ ಎಂದಿದೆ.
- Sunday
- November 24th, 2024