- Friday
- April 4th, 2025

ಕೊರೋನಾ ಮಹಾಮಾರಿ ವೈರಸ್ ಹಿನ್ನೆಲೆಯಲ್ಲಿ ಕಳೆದ ಮೂರು ತಿಂಗಳುಗಳಿಂದ ಮುಚ್ಚಲ್ಪಟ್ಟ ಎಲ್ಲಾ ಧಾರ್ಮಿಕ ಕೇಂದ್ರಗಳ ದ್ವಾರಗಳು ತೆರೆಯಲು ಮುಖ್ಯಮಂತ್ರಿ ಯಡಿಯೂರಪ್ಪ ಮನಸ್ಸು ಮಾಡಿದ್ದಾರೆ.ಜೂನ್ 1ರಿಂದ ಪೂಜಾ ಕಾರ್ಯಕ್ರಮಗಳಿಗೆ ದೇವಸ್ಥಾನಗಳಿಗೆ ಅನುಮತಿ ನೀಡಲು ತೀರ್ಮಾನಿಸಲಾಗಿದೆ ಮಸೀದಿ ಚರ್ಚುಗಳನ್ನು ತೆರೆಯುವ ಬಗ್ಗೆ ಇನ್ನೂ ತೀರ್ಮಾನವಾಗಿಲ್ಲ ಎಂದು ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಂಗಳವಾರದಂದು ಹೇಳಿಕೆಯನ್ನು ನೀಡಿದ್ದರು.ಇದೇ ವಿಷಯಕ್ಕೆ...

ಕರ್ನಾಟಕಕ್ಕೆ ಐದು ರಾಜ್ಯಗಳಿಂದ ಬರುವ ವಿಮಾನ ಹಾಗೂ ಮೂರು ರಾಜ್ಯಗಳ ರಸ್ತೆ ಮತ್ತು ರೈಲು ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದ್ದು, ಮುಂದಿನ 15 ದಿನಗಳ ಕಾಲ ಜಾರಿಯಲ್ಲಿರುತ್ತದೆ ಎಂದು ಕಾನೂನು ಸಚಿವ ಮಾಧುಸ್ವಾಮಿ ಹೇಳಿದ್ದಾರೆ.ಮುಂದಿನ 15 ದಿನಗಳ ಕಾಲ ಮಹಾರಾಷ್ಟ್ರ, ಮಧ್ಯ ಪ್ರದೇಶ, ರಾಜಸ್ಥಾನ, ತಮಿಳುನಾಡು ಮತ್ತು ಗುಜರಾತ್ ನಿಂದ ಬರುವವರಿಗೆ ನಿರ್ಬಂಧ ವಿಧಿಸಲಾಗಿದೆ ಎಂದು ಮುಖ್ಯಮಂತ್ರಿ...

ಬೂಡು ಕೇರ್ಪಳ ಸಂಪರ್ಕಿಸುವ ರಸ್ತೆಯಲ್ಲಿ ದುರ್ಗಾಪರಮೇಶ್ವರಿ ಕಲಾಮಂದಿರ ಎದುರು ಭಾರಿ ಹದಗೆಟ್ಟಿದ್ದು ಮಳೆಗಾಲದಲ್ಲಿ ನಡೆದಾಡಲು ಕಷ್ಟವಾಗಲಿದೆ. ಆದ್ದರಿಂದ ಈ ಕೂಡಲೇ ದುರಸ್ತಿಪಡಿಸಬೇಕೆಂದು ನ.ಪಂ.ಸದಸ್ಯ ರಿಯಾಜ್ ಕಟ್ಟೆಕಾರ್ ಮನವಿಯಲ್ಲಿ ಒತ್ತಾಯಿಸಿದ್ದಾರೆ.

ಮುಕ್ಕೂರು : ಮಳೆ ಹಾನಿ ಪರಿಹಾರ ಯೋಜನೆಯಡಿ ಪೆರುವಾಜೆ ಗ್ರಾಮದ ಪೆರುವೋಡಿ ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಸಂಪರ್ಕ ರಸ್ತೆಯ ಕಾಪುಕಾಡು- ಜಾಲ್ಪಣೆ ತನಕ 17 ಲಕ್ಷ ರೂ.ವೆಚ್ಚದಲ್ಲಿ ಮರು ಡಾಮರೀಕರಣಕ್ಕೆ ಮೇ 28 ರಂದು ಚಾಲನೆ ನೀಡಲಾಯಿತು.ಜಿ.ಪಂ.ಸದಸ್ಯ ಎಸ್.ಎನ್. ಮನ್ಮಥ ಕಾಮಗಾರಿಗೆ ಚಾಲನೆ ನೀಡಿ ಶುಭ ಹಾರೈಸಿದರು.ಈ ಸಂದರ್ಭದಲ್ಲಿ ಗ್ರಾ.ಪಂ.ಸದಸ್ಯ ಉಮೇಶ್ ಕೆಎಂಬಿ,ನ್ಯಾಯವಾದಿ ಗಣಪತಿ ಭಟ್...

ಸುಳ್ಯ: ಕಳೆದ ಕೆಲವು ದಿನಗಳ ಹಿಂದೆ ಜಿಲ್ಲೆಯಲ್ಲಿ ಹಾಗೂ ಸ್ಥಳೀಯ ಪರಿಸರದಲ್ಲಿ ಕೆಲವು ಪೊಲೀಸ್ ಸಿಬ್ಬಂದಿಗಳಿಗೆ ಕೊರೋನಾ ವೈರಸ್ ದೃಢಪಟ್ಟ ಹಿನ್ನೆಲೆಯಲ್ಲಿ ಸುಳ್ಯದ ಪೊಲೀಸ್ ಠಾಣೆಗೆ ಮುನ್ನೆಚ್ಚರಿಕಾ ದೃಷ್ಟಿಯಿಂದ ಸಾರ್ವಜನಿಕರ ಒಳ ಪ್ರವೇಶವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಠಾಣೆಯ ಹೊರಭಾಗದಲ್ಲಿ ದೂರು ದಾಖಲೆಗೆ ಅಗತ್ಯವಿರುವ ಒಂದು ಮೇಜನ್ನು ಇರಿಸಿ ಸಾರ್ವಜನಿಕರಿಗೆ ಅನುಕೂಲಕ್ಕೆ ಅನುವು ಮಾಡಿಕೊಡಲಾಗಿದೆ.

ವಿದ್ಯುತ್ ಬಿಲ್ಲಿನಲ್ಲಿ ಉಂಟಾದ ಗೊಂದಲದ ಬಗ್ಗೆ ಮೆಸ್ಕಾಂ ಅಧಿಕಾರಿಗಳು ನೀಡಿದ ಸ್ಪಷ್ಟನೆ ಮತ್ತು ಈ ಹಿಂದೆ ಸರ್ಕಾರದ ವತಿಯಿಂದ ಮೂರು ತಿಂಗಳ ಬಿಲ್ ರಿಯಾಯಿತಿ ನೀಡದಿರುವುದರ ಬಗ್ಗೆ ಆಮ್ ಆದ್ಮಿ ಪಕ್ಷದಿಂದ ಹೋರಾಟಕ್ಕೆ ಚಿಂತನೆಕರೋನಾ ವೈರಸ್ಸಿನ ಹಿನ್ನೆಲೆಯಲ್ಲಿ ಆತಂಕಕ್ಕೊಳಗಾಗಿರುವ ಜನತೆಗೆ ರಾಜ್ಯ ಸರ್ಕಾರವು ಕಳೆದ ತಿಂಗಳ ಹಿಂದೆ ವಿದ್ಯುತ್ ಬಿಲ್ಲಿನಲ್ಲಿ ರಿಯಾಯಿತಿ ನೀಡುವುದಾಗಿ ಘೋಷಿಸಿದರು. ಆದರೆ...

ಬೆಳ್ಳಾರೆಯಲ್ಲಿ ಕೆಲ ದಿನಗಳಿಂದ ಕ್ವಾರಂಟೈನ್‌ನಲ್ಲಿದ್ದ ವ್ಯಕ್ತಿಯೋರ್ವರಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ. ಕೆಲದಿನಗಳ ಹಿಂದೆ ಇವರ ಗಂಟಲ ದ್ರವ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿತ್ತು. ಇಂದು ವರದಿ ಬಂದಿದ್ದು,ಕೋವಿಡ್ 19 ಇರುವುದು ದೃಢಪಟ್ಟಿದೆ. ಇವರನ್ನು ಜಿಲ್ಲಾ ಕೋವಿಡ್ ಆಸ್ಪತ್ರೆಗೆ ರವಾನಿಸಲಾಗಿದೆ.

ನಾಲ್ಕನೇ ಹಂತದ ಲಾಕ್ಡೌನ್ ಇದೇ ಮೇ 31ಕ್ಕೆ ಮುಗಿಯಲಿದ್ದು , ಈ ನಡುವೆಯೂ ದೇಶದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ವ್ಯಾಪಕವಾಗಿ ಹೆಚ್ಚುತ್ತಿದೆ. ಹೀಗಾಗಿ ಐದನೇ ಹಂತದಲ್ಲಿ ಜೂನ್ 15ರವರೆಗೂ ಲಾಕ್ಡೌನ್ ವಿಸ್ತರಣೆ ಮಾಡುವ ಸಾಧ್ಯತೆಗಳು ಹೆಚ್ಚಾಗಿ ಕಂಡುಬರುತ್ತಿದೆ. ಮೊದಲ ಬಾರಿ ಲಾಕ್ಡೌನ್ ಘೋಷಣೆ ಮಾಡುವಾಗ ಪ್ರಧಾನಿ ಮೋದಿ ಯಾರನ್ನು ಕೇಳಿರಲಿಲ್ಲ. ಏಕಾಏಕಿ ನಾಲ್ಕೇ ನಾಲ್ಕು ಗಂಟೆ...

ರೈತ ಸಂಘ ಮತ್ತು ಹಸಿರು ಸೇನೆಯ ವತಿಯಿಂದ ಮೇ 27 ರಂದು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಮಿನಿ ವಿಧಾನ ಸೌಧದ ಮುಂಭಾಗದಲ್ಲಿ ರೈತರು, ಕೃಷಿಕೂಲಿಗಾರರು ಹಾಗೂ ಗ್ರಾಮೀಣ ಕಸುಬುದಾರರ ಸಂಕಷ್ಟದ ತಕ್ಷಣದ ಪರಿಹಾರಕ್ಕೆ ಆಗ್ರಹಿಸಿ ಸಾಮಾಜಿಕ ಅಂತರ ಕಾಯ್ದುಕೊಂಡು ಕರೋನಾ ವೈರಸ್ ಹರಡದಂತೆ ಮುನ್ನೆಚ್ಚರಿಕೆ ಯೊಂದಿಗೆ ಪ್ರತಿಭಟನಾ ಸಭೆ ನಡೆಸಿ ಸಹಾಯಕ ಕಮೀಷನರ್ ಮೂಲಕ...

ಮಾರಕ ಕೊರೊನಾ ಜಗತ್ತಿನಾದ್ಯಂತ ಜೀವ ಹಿಂಡುತಿದ್ದು ಅದರ ನಡುವೆ ಭಾರತದಲ್ಲಿ ಮರುಭೂಮಿ ಮಿಡತೆಯ ಕಾಟ ಶುರುವಾಗಿದೆ. ಕೊರನಾ ದಿಂದ ರೈತಾಪಿ ವರ್ಗದವರು ಹೆಚ್ಚು ಕಂಗೆಟ್ಟಿಲ್ಲವಾದರೂ ಆಕಸ್ಮಿಕವಾಗಿ ಬಂದ ಮಿಡತೆ ಹಾವಳಿಯಿಂದ ಅನ್ನದಾತರು ಹೆಚ್ಚು ಚಿಂತೆಪಡುವಂತಾಗಿದೆ. ಮರುಭೂಮಿ ಪ್ರದೇಶದಲ್ಲಿ ಹೆಚ್ಚಾಗಿ ಕಂಡುಬರುವ ಕೃಷಿ ಬೆಳೆಗಳಿಗೆ ಮಾರಕವಾಗಿರುವ ಈ ಮಿಡತೆಗಳ ಹಾವಳಿಗೆ ಉತ್ತರಭಾರತದ ಹಲವು ರಾಜ್ಯಗಳು ಈಗಾಗಲೇ ತತ್ತರಿಸಿದ್ದು...

All posts loaded
No more posts