
ಸುಳ್ಯವೆಂಕಟರಮಣ ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿ ಯಲ್ಲಿ ನಿತ್ಯನಿಧಿ ಸಂಗ್ರಹಿಸುತ್ತಿರುವ ಎಲ್ಲಾ ನಿತ್ಯನಿಧಿ ಸಂಗ್ರಹಕರಿಗೆ ಆಡಳಿತ ಮಂಡಳಿ ವತಿಯಿಂದ ಇಂದು ಧನ ಸಹಾಯ ನೀಡಿ ಸಹಕರಿಸಿದ್ದರು.
ಲಾಕ್ ಡೌನ್ ಸಂದರ್ಭದಲ್ಲಿ ನಿತ್ಯನಿಧಿ BBC ಸಂಗ್ರಹಿಸಲು ಸಾಧ್ಯವಾಗದ ಕಾರಣ ಆರ್ಥಿಕ ಸಂಕಷ್ಟಕ್ಕೆ ತುತ್ತಾದನ್ನು ಮನಗಂಡು ಸಂಸ್ಥೆಯ ಆಡಳಿತ ಮಂಡಳಿಯವರು ಎಲ್ಲಾ ನಿತ್ಯನಿಧಿ ಸಂಗ್ರಹಕರಿಗೆ ಸಂಸ್ಥೆಯ ವತಿಯಿಂದ ಈ ಆರ್ಥಿಕ ಸಹಕಾರವನ್ನು ನೀಡಿರುತ್ತಾರೆ. ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಪಿ.ಸಿ ಜಯರಾಮ,ನಿರ್ದೇಶಕರಾದ ಪಿ.ಎಸ್ ಗಂಗಾಧರ, ಮುಖ್ಯ ಕಾರ್ಯನಿರ್ವಣಾಧಿಕಾರಿ ಕೆ.ಟಿ ವಿಶ್ವನಾಥ,ಸಿಬ್ಬಂದಿಗಳಾದ ಚಂದ್ರಶೇಖರ್, ಮನೋಜ್ ಕುಮಾರ್, ಕುಸುಮದರ್ ಹಾಗೂ ಲೋಹಿತ್ ಉಪಸ್ಥಿತರಿದ್ದರು.