

ವರದಕ್ಷಿಣೆ ತರುವಂತೆ ನನ್ನ ಮೇಲೆ ಅತ್ತೆ ಮಾವ ಹಾಗೂ ಗಂಡ ಮಾನಸಿಕ ಕಿರುಕುಳ ನೀಡಿ ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಮಹಿಳೆ ಪೋಲೀಸರಿಗೆ ದೂರು ನೀಡಿದ ಘಟನೆ ಕನಕಮಜಲಿನಲ್ಲಿ ನಡೆದಿದೆ. ಅದಲ್ಲದೆ ತಮ್ಮ ಫೇಸ್ಬುಕ್ ಖಾತೆಯಲ್ಲಿ ಈ ಕೆಳಗಿನ ರೀತಿಯ ಲೇಖನವನ್ನು ಹರಿ ಬಿಟ್ಟಿರುತ್ತಾರೆ.
ಕಳೆದ ರಾತ್ರಿ 3 ಗಂಟೆಗೆ ಅತ್ತೆ ಮಾವ ಗಂಡ ಸೇರಿ ಕಣ್ಣಿಗೆ ಚಿಲ್ಲಿ ಪೌಡರ್,ಪೆಪ್ಪರ್ ಪೌಡರ್ ಹಾಕಿ ವೊಲಿನಿ ಕ್ರೀಮ್ ಕೂಡ ಹಾಕಿ ಕಟ್ಟಿ ಹಾಕಿ ದೊಣ್ಣೆಯಲ್ಲಿ ಹೊಡೆದಿದ್ದಾರೆ. ತಾಯಿ ಮನೆಯಿಂದ ಹಣ ತಾ, ಬೈಕ್ ,ದೊಡ್ಡ ವಾಹನ ಬೇಕು, ತೆಗೆಯಲು ಹಣದ ಅವಶ್ಯಕತೆ ಇರುವುದರಿಂದ ತವರುಮನೆಯಿಂದ ತರುವಂತೆ ಹೊಡೆದಿದ್ದಾರೆ. ಕೊಲೆ ಮಾಡಲು ಪ್ರಯತ್ನಿಸಿದ್ದಾರೆ. ಮಕ್ಕಳನ್ನು ಬೇರೆ ರೂಂ ನಲ್ಲಿ ಕೂಡಿ ಹಾಕಿದ್ದಾರೆ. ಬೆಳಿಗ್ಗೆ ನನಗೆ ಮದ್ದು ಮಾಡುವ ನೆಪದಲ್ಲಿ ಮಾನಸಿಕ ಆಸ್ಪತ್ರೆ ಗೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿನ ವೈಧ್ಯರು ನಿಮಗೆ ತಲೆ ಸರಿ ಇಲ್ಲ ಎಡ್ಮಿಟ್ ಮಾಡಬೇಕು ಎಂದು ಹೇಳಿದ್ದಾರೆ. ಆದರೇ ನನ್ನ ಹಿತೈಷಿಗಳು ಅವಳು ಸರಿ ಇದ್ದಾಳೆ ,ಅಡ್ಮಿಟ್ ಮಾಡುವುದು ಬೇಡ ಎಂದು ಹೇಳಿ ತಾಯಿ ಮನೆಗೆ ತಲುಪಿಸುವ ವ್ಯವಸ್ಥೆ ಮಾಡಿದರು. ಈಗಿನ ಕಾಲದಲ್ಲಿ ಇಂತವರು ಇದ್ದಾರೆಯೇ ,ಗಂಡನ ಮೇಲೆ ಈಗಾಗಲೆ ಪೊಸ್ಕೋ ಕೇಸು ಇದೆ.ಆದರೂ ಅನ್ಯಾಯ ಮಾಡಿದ್ದಾರೆ ಸಹಾಯ ಮಾಡಿ ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.
ನಂತರ ಪತಿ ಹಾಗೂ ಮಾವ ತನಗೆ ಕಿರುಕುಳ ನೀಡುತ್ತಿದ್ದಾರೆ ಎಂದು
ಕನಕಮಜಲು ಗ್ರಾಮದ ಮುಗೇರು ಸುಮಂತ್ ಗೋಪಾಲ್ ಎಂಬವರ ಪತ್ನಿ ಸುಪ್ರಿತ ಸುಳ್ಯ ಸರಕಾರಿಯ ಆಸ್ಪತ್ರೆಯಲ್ಲಿ ದಾಖಲಾಗಿ ಸುಳ್ಯ ಪೋಲಿಸರಿಗೆ ದೂರು ನೀಡಿರುವುದಾಗಿ ತಿಳಿದು ಬಂದಿದೆ.