Ad Widget

ಅಪಾಯದ ಸ್ಥಿತಿಯಲ್ಲಿ ವಳಲಂಬೆಯಲ್ಲೊಂದು ಟ್ರಾನ್ಸ್ ಫಾರ್ಮರ್

. . . . . . .

ಗುತ್ತಿಗಾರು. ಮೇ.೨೮: ತುಕ್ಕು ಹಿಡಿದ ವಿದ್ಯುತ್ ತಂತಿಗಳು, ಯಾವುದೇ ಸೂಕ್ತ ಭದ್ರತೆ ಇಲ್ಲದ ಟ್ರಾನ್ಸ್ಫಾರ್ಮರ್ ಒಂದು ಅಪಾಯವನ್ನು ಆಹ್ವಾನಿಸುತ್ತಿದೆ. ಅಂದಹಾಗೆ ಈ ದೃಶ್ಯ ಕಂಡುಬರುತ್ತಿರುವುದು ವಳಲಂಬೆಯ ಕೂವೆಕ್ಕೋಡಿಯ ಆರ್ನೋಜಿ ಬಳಿಯ ಟಿ.ಸಿಯಲ್ಲಿ.
ಸುಮಾರು ೨೦ ಮನೆಗಳಿಗೆ ಸಂಪರ್ಕ ಕಲ್ಪಿಸುವ ಆರ್ನೋಜಿಯ ಈ ಟ್ರಾನ್ಸ್ ಫಾರ್ಮರ್ ಕಳೆದ ಹಲವು ಸಮಯದಿಂದ ಅಪಾಯವನ್ನು ಆಹ್ವಾನಿಸುತ್ತಿದೆ. ಕಂಬದಲ್ಲಿ ಅಳವಡಿಸಲಾದ ಟಿ.ಸಿ ಸಂಪೂರ್ಣ ತೆರೆದ ಸ್ಥಿತಿಯಲ್ಲಿದ್ದು, ಯಾವುದೇ ಕ್ಷಣದಲ್ಲೂ ಅಪಾಯ ಸಂಭವಿಸುವ ಸಾಧ್ಯತೆ ಇದೆ. ಅಲ್ಲದೇ ಈ ಭಾಗದಲ್ಲಿ ಅಳವಡಿಸಲಾದ ವಿದ್ಯುತ್ ತಂತಿಗಳು ತುಂಬಾ ಹಳೆಯದಾಗಿದ್ದು ಬದಲಿಸುವ ಅವಶ್ಯಕತೆ ಹೆಚ್ಚಾಗಿದೆ. ಇಲ್ಲವಾದಲ್ಲಿ ಮಳೆಗಾಲದಲ್ಲಿ ವಿದ್ಯುತ್ ತಂತಿಗಳು ತುಂಡಾಗಿ ಬೀಳುವ ಸಾಧ್ಯತೆ ಇರುವುದಾಗಿ ಫಲಾನುಭವಿಗಳು‌ ಆತಂಕ ವ್ಯಕ್ತಪಡಿಸಿದ್ದಾರೆ. ಮೆಸ್ಕಾಂ ಈ ಕುರಿತು ಕ್ರಮವಹಿಸಿ ಮುಂಬರುವ ಅಪಾಯ ತಪ್ಪಿಸಬೇಕಿದೆ.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!