
ಯುವ ರೈತಾಪಿ ಮಕ್ಕಳು ಆಧುನಿಕತೆಯ ತೆಕ್ಕೆಗೆ ಜಾರುವ ಪ್ರಕೃತ ವಿದ್ಯಮಾನ ಒಳಗೊಂಡ ಹೃದಯಂಗಮ ಕನ್ನಡ ಕಿರುಚಿತ್ರ ಇದಾಗಿದ್ದು ತಾರಾಗಣದಲ್ಲಿ ಉದಯೋನ್ಮುಖ ಕಲಾವಿದ ಸೃಜನ್ ಮುಂಡೋಡಿ ಮತ್ತು ಹೊನ್ನಪ್ಪ ಗೌಡ ಕುತ್ಯಾಳ ನಟಿಸಿದ್ದಾರೆ. ಹುಟ್ಟೂರ ಬಿಟ್ಟು ಆಧುನಿಕತೆಯ ತೆಕ್ಕೆಗೆ ಎಂಬ ಕಿರು ಚಿತ್ರಕ್ಕೆ ಸಂಗೀತ ನೀಡಿದ್ದಾರೆ ವೀಕ್ಷಿತ್ ಕುತ್ಯಾಳ. ಕಂಠದಾನ ಮಾಡಿದ್ದಾರೆ ಪ್ರಸನ್ನ ನಿತ್ಯಾನಂದ ಮುಂಡೋಡಿ ಮತ್ತು ಜಯರಾಮ ದೇರಪ್ಪಜ್ಜನ ಮನೆ. ಸಂಕಲನ ಮಾಡಿದ್ದಾರೆ ಧ್ರುವ ಮುಂಡೋಡಿ. ಚಿತ್ರಕಥೆ, ನಿರ್ದೇಶನ ಹಾಗೂ ಛಾಯಾಗ್ರಹಣ ಮಾಡಿದ್ದಾರೆ ನಿಶಿತ್ ಮುಂಡೋಡಿ. ಅಧಿಕೃತವಾಗಿ ಬಿಡುಗಡೆಗೊಳ್ಳಲಿದೆ 2020 ಮೇ 29ರ ಶುಕ್ರವಾರ. ಬಿಡುಗಡೆ ಬಳಿಕ ನೀವು ಯೂ ಟ್ಯೂಬ್ ಚಾನಲ್ “MUNDODI VLOGS “ ದಲ್ಲಿ ವೀಕ್ಷಿಸಬಹುದಾಗಿದೆ.