
ಪೆರುವಾಜೆ ಗ್ರಾಮದ ಪೂವಾಜೆ ಕಿಟ್ಟಣ್ಣ ರೈ ಯವರ ಪತ್ನಿ ಶಾರದಾ ರೈ ಅವರ ತಂದೆ ಕುಂಞಣ್ಣ ಆಳ್ವ (೮೫) ಅಲ್ಪಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿ ನಿಧನರಾದರು. ಪುತ್ರ ಪುತ್ತೂರಿನ ಸಾಯಿ ಸ್ಟುಡಿಯೋ ಮಾಲಕ ಶಿವ ಪ್ರಸಾದ್ ಆಳ್ವ ಹಾಗೂ ಶಾರದಾ ರೈ ಸೇರಿ ಆರು ಪುತ್ರಿಯರನ್ನು ಅಗಲಿದ್ದಾರೆ. ಇವರು ಕಲ್ಲಡ್ಕದ ಪ್ರಗತಿ ಪರ ಕೃಷಿಕರಾಗಿ, ಕಲ್ಲಡ್ಕ ತರವಾಡು ಮನೆಯ ಯಜಮಾನರಾಗಿ,ಪುತ್ತೂರಿನ ಸಾಯಿಭಕ್ತ ಸಮಿತಿ ಸದಸ್ಯರಾಗಿ ಪರಿಚಿತರು.