ರೈತರು ತಮ್ಮ ಜಮೀನಿನಲ್ಲಿ ವಾಣಿಜ್ಯ ಬೆಳೆಗಳಾದ ಕೊಕ್ಕೋ ಅಡಿಕೆ ತೆಂಗು ಗೇರು ಕಾಳುಮೆಣಸು ಗಿಡಗಳನ್ನು ನಾಟಿ ಮಾಡಿದಲ್ಲಿ ಪ್ರತಿ ಗಿಡಕ್ಕೆ ಸಾಮಾಜಿಕ ಅರಣ್ಯ ಇಲಾಖೆಯಿಂದ ರೂ 14 ರಂತೆ ಸಹಾಯಧನವನ್ನು ನೀಡುತ್ತಿದ್ದು, ಆಸಕ್ತ ರೈತರು ಅರ್ಜಿ ಸಲ್ಲಿಸುವಂತೆ ಮನವಿ ಮಾಡಿದ್ದಾರೆ. ಅರ್ಜಿ ಜೊತೆ ಆಧಾರ್ ಕಾರ್ಡ್, ಆರ್ ಟಿಸಿ, ಬ್ಯಾಂಕ್ ಪಾಸ್ ಬುಕ್ , ನಾಟಿ ಮಾಡಿದ ಗಿಡಗಳ ಫೋಟೋ ಸಹಿತ ಭರ್ತಿ ಮಾಡಿದ ಅರ್ಜಿಯನ್ನು ಸಾಮಾಜಿಕ ಅರಣ್ಯ ಇಲಾಖೆ ಕಚೇರಿ ಸುಳ್ಯ ಇವರಿಗೆ ಸಲ್ಲಿಸತಕ್ಕದ್ದು. ಹೆಚ್ಚಿನ ಮಾಹಿತಿಗೆ ಸಾಮಾಜಿಕ ಅರಣ್ಯ ಸುಳ್ಯ ಇದರ ವಲಯ ಅರಣ್ಯಾಧಿಕಾರಿ ಮೊಬೈಲ್ ಸಂಖ್ಯೆ 9008221515 ಗೆ ಕರೆ ಮಾಡಬಹುದು. ಅಂಬಟೆಡ್ಕ ವೆಂಕಟರಮಣ ದೇವಸ್ಥಾನದ ಎದುರಿನ ಕೆಎಫ್ ಡಿಸಿ ಕಟ್ಟಡದಲ್ಲಿ ಕಛೇರಿ ಇದೆ.
- Tuesday
- December 3rd, 2024