Ad Widget

ಪುತ್ತೂರು ೮ ಮಂದಿ ಪೋಲೀಸ್ ಸಿಬ್ಬಂದಿಗಳಿಗೆ ಹೋಮ್ ಕಾರಂಟೈನ್

ಕೊರೋನಾ ವೈರಸ್ ಇದೀಗ ಪೋಲೀಸರನ್ನು ಬಿಟ್ಟಿಲ್ಲ. ಪುತ್ತೂರು ನಗರ, ಟ್ರಾಫಿಕ್ , ಮಹಿಳಾ ಠಾಣೆಯ ಸಿಬ್ಬಂದಿಗಳ ಪೈಕಿ ಗಡಿ ಪ್ರದೇಶದ ಚೆಕ್‌ಪೋಸ್ಟ್ ಕರ್ತವ್ಯ ನಿರತರಾಗಿದ್ದ ನಾಲ್ವರು ಸಿಬಂದಿಗಳಿಗೆ ಲಕ್ಷಣಗಳು ಗೋಚರಿಸಿದ ಹಿನ್ನೆಲೆ ಹೋಮ್ ಕ್ವಾರಂಟೈನ್‌ಗೆ ತೆರಳಲು ಸೂಚಿಸಲಾಗಿದೆ ಎಂದು ತಿಳಿದು ಬಂದಿದೆ.
ಠಾಣಾ ವ್ಯಾಪ್ತಿಗೆ ಸಂಬಂಧಿಸಿ ಹೊರರಾಜ್ಯದಿಂದ ಬಂದು ವಸತಿ ನಿಲಯಗಳಲ್ಲಿ ಹೋಮ್ ಕ್ವಾರಂಟೈನ್ ಆಗಿರುವ ಮತ್ತು ಮನೆಯಲ್ಲಿ ಹೋಮ್ ಕ್ವಾರಂಟೈನ್‌ನಲ್ಲಿರುವವರ ಮಾಹಿತಿ ಪಡೆಯುವ ಕಾರ್ಯ ನಡೆಸಿದ ಕೆಲವರಿಗೆ ಈ ನಡುವೆ ಗಂಟಲು ನೋವು, ಶೀತ, ಜ್ವರ ಬಾಧೆಯಿಂದಾಗಿ ಅವರು ಹೋಮ್ ಕ್ವಾರಂಟೈನ್‌ನಲ್ಲಿ ಇರಬೇಕಾಗಿದೆ. ಹಾಗಾಗಿ ಪುತ್ತೂರು ನಗರ ಪೊಲೀಸ್ ಠಾಣೆಯ ಮೂವರು ಸಿಬಂದಿಗಳು ಸೇರಿದಂತೆ ವಿಟ್ಲ ಪೊಲೀಸ್ ವಸತಿ ನಿಲಯದಿಂದ ಪುತ್ತೂರು ಠಾಣೆಗೆ ಕರ್ತವ್ಯಕ್ಕೆ ಹಾಜರಾಗುತ್ತಿದ್ದ ಪೊಲೀಸ್ ಸಿಬಂದಿಗೂ ೧೪ ದಿನಗಳ
ಹೋಮ್ ಕ್ವಾರಂಟೈನ್ ಮಾಡಲಾಗಿದೆ. ಮಹಿಳಾ ಪೊಲೀಸ್ ಠಾಣೆಯಲ್ಲಿ ಜ್ವರ, ಶೀತ ಸಂಬಂಧಿಸಿ ಇಬ್ಬರು ಮಹಿಳಾ ಪೊಲೀಸರು ಹಾಗೂ ಸಂಚಾರ ಪೊಲೀಸ್ ಠಾಣೆಯಲ್ಲಿ ಚೆಕ್‌ಪೋಸ್ಟ್‌ನಲ್ಲಿ ಕರ್ತವ್ಯ ನಿರ್ವಹಿಸಿದ್ದ ಓರ್ವ ಮತ್ತು ಮಡೀಕೇರಿಯ ಸೋಂಕಿತನ ಸಂಪರ್ಕ ಹೊಂದಿದ್ದ ವಿಚಾರಕ್ಕೆ ಓರ್ವ ಸೇರಿದಂತೆ ಪುತ್ತೂರು ಪೊಲೀಸ್ ಠಾಣೆಯಲ್ಲಿ ಒಟ್ಟು ೮ ಮಂದಿ ಪೊಲೀಸರು ಹೋಮ್ ಕ್ವಾರಂಟೈನ್‌ಗೆ ವೈದ್ಯರು ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!