Ad Widget

ಬೂಡು ಅಪಾಯಕಾರಿ ವಿದ್ಯುತ್ ತಂತಿ- ಅಧಿಕಾರಿಗಳಿಂದ ಪರಿಶೀಲನೆ

ಬೂಡು ವಾರ್ಡಿನಲ್ಲಿ ಅಪಾಯದ ಸ್ಥಿತಿಯಲ್ಲಿರುವ ವಿದ್ಯುತ್ ತಂತಿಗಳನ್ನು ಸರಿಪಡಿಸಿಕೊಡುವಂತೆ ಮೆಸ್ಕಾಂಗೆ ನ ಪಂ ಸದಸ್ಯ ರಿಯಾಜ್ ಕಟ್ಟೆ ಕಾರ್ಸ್ ಹಾಗೂ ಸ್ಥಳೀಯರು ನೀಡಿದ ಮನವಿಯ ಹಿನ್ನಲೆ ಸುಳ್ಯ ನಗರ ಮೆಸ್ಕಾಂ ಅಧಿಕಾರಿ ಹರೀಶ್ ನಾಯಕ್ ಇಂದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ವಿದ್ಯುತ್ ಕಂಬಗಳು ಹಾಗೂ ಕೆಲವು ವಿದ್ಯುತ್ ಸಂಚರಿಸುವ ತಂತಿಗಳು ಮಾರ್ಗಕ್ಕೆ ಜೊತು ಬಿದ್ದಿದ್ದು ಇವುಗಳಿಂದ ಮುಂದಿನ ದಿನಗಳಲ್ಲಿ ಅಪಾಯದ ಸೂಚನೆಯನ್ನು ನೀಡುತ್ತಿದೆ. ಹಾಗೂ ಘನ ವಾಹನಗಳ ಸಂಚಾರಕ್ಕೆ ಇದರಿಂದ ತೊಂದರೆ ಉಂಟಾಗಿರುತ್ತದೆ .ಕೂಡಲೇ ವಿದ್ಯುತ್ ತಂತಿಗಳನ್ನು ಸರಿಪಡಿಸಿಕೊಡುವಂತೆ ಹಾಗೂ ಹೊಸ ತಂತಿಗಳನ್ನು ಅಳವಡಿಸಿ ಸರ್ವಜನಿಕರಿಗೆ ಅನುಕೂಲ ಮಾಡಿಕೊಡುವಂತೆ ಸ್ಥಳೀಯರು ಈ ಸಂದರ್ಭದಲ್ಲಿ ವಿನಂತಿಸಿಕೊಂಡರು. ನಗರ ಪಂಚಾಯತ್ ಸದಸ್ಯ ರಿಯಾಜ್ ಕಟ್ಟೇಕ್ಕಾರ್ ಸುಳ್ಯ ಮೆಸ್ಕಾಂ ಅಧಿಕಾರಿಗಳಿಗೆ ಈ ಸಂದರ್ಭದಲ್ಲಿ ಮಾಹಿತಿಯನ್ನು ನೀಡಿದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading