ಸರ್ಕಾರ ರಾಜ್ಯಾದ್ಯಂತ ಪ್ರತಿ ಆದಿತ್ಯವಾರ ಲಾಕ್ ಡೌನ್ ಮಾಡುವ ಉದ್ದೇಶವಿಟ್ಟು ಇಂದು ಪ್ರಥಮ ಲಾಕ್ ಡೌನ್ ಘೋಷಿಸಿದೆ. ಆದೇಶದ ಹಿನ್ನೆಲೆ ಶನಿವಾರ ಸಂಜೆ 7ರಿಂದ ಸೋಮವಾರ ಬೆಳಗಿನ ಜಾವ 7ರವರೆಗೆ ಸಂಪೂರ್ಣ ಲಾಕ್ ಡೌನ್ ಇರಲಿದೆ. ಅಲ್ಲಲ್ಲಿ ತರಕಾರಿ ಅಂಗಡಿ ಮತ್ತು ಮೆಡಿಕಲ್, ಹಾಲಿನ ಅಂಗಡಿ ಇವುಗಳನ್ನು ಹೊರತುಪಡಿಸಿದರೆ ಬೇರೆ ಯಾವುದೇ ರೀತಿಯ ಕಾರ್ಯಚಟುವಟಿಕೆಗಳು ಸುಳ್ಯದಾದ್ಯಂತ ಅಷ್ಟಾಗಿ ಕಂಡು ಬರುತ್ತಿಲ್ಲ. ಸರಕಾರದ ಆದೇಶದ ಹಿನ್ನೆಲೆಯಲ್ಲಿ ಸುಳ್ಯ ನಗರ ಸಂಪೂರ್ಣವಾಗಿ ಸ್ತಬ್ಧಗೊಂಡಿತ್ತು. ಮುಸಲ್ಮಾನ ಬಾಂಧವರು ಈದ್ ಆಚರಣೆಯನ್ನು ಸರಳವಾಗಿ ಆಚರಿಸಲು ನಿರ್ಧರಿಸಿದ್ದರು. ತಮ್ಮ ಮನೆಗಳಲ್ಲಿ ಈದ್ ನಮಾಜ್ ನೆರವೇರಿಸಿ ಸರಳತೆಯಿಂದ ಆಚರಿಸಿಕೊಂಡರು. ಸುಳ್ಯದ ಎಲ್ಲಾ ಮಸೀದಿ ಮುಂಭಾಗದಲ್ಲಿ ಪೊಲೀಸ್ ಸಿಬ್ಬಂದಿ ನಿಯೋಜಿಸಿದ್ದಾರೆ. ಈ ಬಗ್ಗೆ ಅಮರ ಸುದ್ದಿ ಪ್ರತಿನಿಧಿಗಳು ಸುಳ್ಯದ ಎಲ್ಲಾ ಪ್ರಮುಖ ಕೇಂದ್ರಗಳಿಂದ ಲೈವ್ ವರದಿ ನೀಡಿದ್ದಾರೆ.
- Saturday
- November 23rd, 2024