ಸುಳ್ಯ ತಾಲೂಕಿನ ಗ್ರಾಮದ ಕುಂಡಡ್ಕ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಮತ್ತು ನೇಸರ ಯುವಕ ಮಂಡಲ ಇದರ ಆಶ್ರಯದಲ್ಲಿ ಸುಳ್ಯ, ಪುತ್ತೂರು ಮತ್ತು ಕಡಬ ತಾಲೂಕಿನ ವಿದ್ಯಾರ್ಥಿಗಳಿಗೆ ವಾಟ್ಸಪ್ ಮೂಲಕ ಏರ್ಪಡಿಸಿದ ವಿವಿಧ ಸ್ಪರ್ದೆಗಳಿಗೆ ಮುನ್ನೂರಕ್ಕೂ ಅಧಿಕ ಮಂದಿ ಪ್ರವೇಶ ಪತ್ರ ಕಳುಹಿಸಿದ್ದು, ಇದರ ವಿವಿಧ ವಿಭಾಗವಾರು ಫಲಿತಾಂಶ ಹೀಗಿದೆ
ವಿಭಾಗವಾರು ಸ್ಪರ್ಧೆಗಳ ಫಲಿತಾಂಶ
ಕಿರಿಯ ಪ್ರಾಥಮಿಕ ಶಾಲಾ 1 ರಿಂದ 4 ನೇ ತರಗತಿ ವಿಭಾಗದಲ್ಲಿ ಅದ್ವಿತ್ ಜಿ ನೆಕ್ಕಿಲ ( ಪ್ರ), ಸ್ತುತಿ, ಬನ್ನೂರು ( ದ್ವಿ), ಕೃತಾರ್ಥ್ ಪಿ.ವಿ. ಪೆರುವಾಜೆ (ತೃ) ಹಾಗೂ ಶ್ರಾವ್ಯ ಚಾಕೋಟೆಡ್ಕ, ಎಂ.ಎಸ್.ಅವನಿ ಗೌಡ, ಸಾತ್ವಿಕ್ ಅಟ್ಲೂರು ತೀರ್ಪುಗಾರರ ಮೆಚ್ಚುಗೆ ಪಡೆದಿದ್ದಾರೆ.
ಹಿರಿಯ ಪ್ರಾಥಮಿಕ ಶಾಲಾ 5 ರಿಂದ 7 ನೇ ತರಗತಿ ವಿಭಾಗದಲ್ಲಿ ಅಗಮ್ಯ ಬನ್ನೂರು (ಪ್ರ) ನಿಲಿಶ್ಕಾ ಮಂಜಲ್ಪಡ್ಪು (ದ್ವಿ) ನೇಹಾ ಬಾಲಾಡಿ (ತೃ) ಹಾಗೂ ಎ.ಕೆ.ಪೃಥ್ವಿನ್ ಪೆರುವಾಜೆ, ನಿಶಾಂತ್ ಎಚ್.ಕೆ ಸಂಪಾಜೆ, ಪ್ರೀತಾ ಅಲೆನ್ ಪಿಂಟೋ
ದರ್ಬೆ ತೀರ್ಪುಗಾರರ ಮೆಚ್ಚುಗೆ ಗಳಿಸಿದ್ದಾರೆ.
ಹೈಸ್ಕೂಲ್ ವಿಭಾಗದ ಪ್ರಬಂಧ ಸ್ಪರ್ಧೆಯಲ್ಲಿ ದುರ್ಗಾಲಕ್ಷ್ಮೀ ಜಿ.ಸಿ. ನಾಲ್ಕೂರು(ಪ್ರ), ದ್ವಿತಿ ರೈ ಪೆರಾಬೆ(ದ್ವಿ), ಅಮೂಲ್ಯ ಎನ್.ಎ.
ಕಾನತ್ತಿಲ ಮನೆ (ತೃ) ಹಾಗೂ ದಿವಿನ್ ಕೆ ಎಡಮಂಗಲ, ಅವನಿ.ಕೆ ಕೋಡಿಬೈಲು, ಸಾಕ್ಷಿ ಎನ್ ಅರಂಬೂರು ತೀರ್ಪುಗಾರರ ಮೆಚ್ಚುಗೆ ಗಳಿಸಿದ್ದಾರೆ.
ಕಾಲೇಜು ವಿಭಾಗದ ಪ್ರಬಂಧ ಸ್ಪರ್ಧೆಯಲ್ಲಿ ಶ್ವೇತಾ ಎನ್.ಪಿ. ನೆಡ್ಚಿಲು( ಪ್ರ), ಸಂಧ್ಯಾ ಕೆ ಕೂಟಾಜೆ ( ದ್ವಿ), ಜಿ.ಸಿ.ಶಿವಪ್ರಸಾದ್ ಗುಂಡಡ್ಕ (ತೃ) ಹಾಗೂ ಸುಸ್ಮಿತಾ ಕೆ ಕೊಂಡೆಪ್ಪಾಡಿ, ವಾಣಿಶ್ರೀ ಎಲ್, ಅಂಗಡಿಮೂಲೆ, ರಂಜಿತಾ ರೈ ಕಳಾರ ತೀರ್ಪುಗಾರರ ಮೆಚ್ಚುಗೆ ಗಳಿಸಿದ್ದಾರೆ.
ತೀರ್ಪುಗಾರರಾಗಿ ಸವಣೂರು ವಿದ್ಯಾರಶ್ಮಿ ವಿದ್ಯಾಲಯದ ಚಿತ್ರಕಲಾ ಶಿಕ್ಷಕ ಧನಂಜಯ ಮರ್ಕಂಜ ಹಾಗೂ ಕೆಯ್ಯೂರು ಕರ್ನಾಟಕ ಪಬ್ಲಿಕ್ ಸ್ಕೂಲ್ ನ ಶಿಕ್ಷಕಿ ಹಾಗೂ ಲೇಖಕಿ ಜೆಸ್ಸಿ ಪಿ.ವಿ. ಅವರು ಸಹಕರಿಸಿದರು.
ಯುವಕ ಮಂಡಲದ ವತಿಯಿಂದ ಮುಂದೆ ನಡೆಸಲ್ಪಡುವ ಕಾರ್ಯಕ್ರಮದಲ್ಲಿ ವಿಜೇತರಿಗೆ ಬಹುಮಾನ ಮತ್ತು ಪಾಲ್ಗೊಂಡ ಎಲ್ಲ ಸ್ಪರ್ಧಿಗಳಿಗೆ ಪ್ರಶಂಸಾ ಪತ್ರ ನೀಡಲಾಗುವುದು ಎಂದು ಸಂಘಟನೆಯ ಪ್ರಕಟನೆ ತಿಳಿಸಿದೆ.