ಮೆಸ್ಕಾಂ ಇಲಾಖೆಯಿಂದ ಮೇ 23 ಶನಿವಾರದಂದು ಸುಳ್ಯ ಹಾಗೂ ಪುತ್ತೂರು ಭಾಗಗಳಲ್ಲಿ ವಿದ್ಯುತ್ ಲೈನ್ ಗಳಲ್ಲಿ ಕೆಲಸಕಾರ್ಯಗಳು ನಡೆಯುವ ಹಿನ್ನೆಲೆಯಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ ಉಂಟಾಗುವ ಸಂಭವವಿತ್ತು. ಈ ಮಾಹಿತಿಯನ್ನು ಆಧರಿಸಿ ಮುಸಲ್ಮಾನ ಬಾಂಧವರ ಪವಿತ್ರ ರಂಜಾನ್ ಹಬ್ಬದ ಒಂದು ದಿನ ಮೊದಲು ಈ ರೀತಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾದಲ್ಲಿ ಹಲವಾರು ಸಮಸ್ಯೆಗಳು ಮುಸಲ್ಮಾನ ಬಾಂಧವರಿಗೆ, ಹಾಗೂ ಮನೆಯ ಗೃಹಿಣಿಯರಿಗೆ ಉಂಟಾಗಲಿದೆ. ಮುಖ್ಯವಾಗಿ ಆಹಾರ ಪದಾರ್ಥಗಳ ತಯಾರಿಕೆ, ಬಿಸಿಲಿನ ತಾಪಮಾನ ಹೆಚ್ಚಾಗಿದ್ದು ಶಕೆ ಹೆಚ್ಚಿರುವ ಕಾರಣ ಸಣ್ಣ ಪುಟ್ಟ ಮಕ್ಕಳಿಗೆ ಆಯಾಸಗಳು, ಇನ್ನಿತರ ಸೌಲಭ್ಯಗಳ ಕೊರತೆ ಉಂಟಾಗುವ ನಿಟ್ಟಿನಲ್ಲಿ ಕರ್ನಾಟಕ ಮುಸ್ಲಿಂ ಜಮಾಅತ್ ಸುಳ್ಯ ತಾಲೂಕು ಇದರ ಉಪಾಧ್ಯಕ್ಷ ಪಿಎ ಮೊಹಮ್ಮದ್ ರವರು ಪುತ್ತೂರು ಮೆಸ್ಕಾಂ ಕಾರ್ಯನಿರ್ವಾಹಕ ಇಂಜಿನಿಯರ್ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಮನವಿ ಮಾಡಿಕೊಂಡಿದ್ದರು. ಇದಕ್ಕೆ ಸ್ಪಂದಿಸಿದ ಕಾರ್ಯನಿರ್ವಾಹಕ ಇಂಜಿನಿಯರ್ ನರಸಿಂಹ ರವರು ಮಾರ್ಚ್23 ರಂದು ಕಡಿತ ಗೊಳಿಸಲು ನಿರ್ಧರಿಸಿದ ವಿದ್ಯುತ್ ಸರಬರಾಜನ್ನು ಮೇ 26 ರ ಮಂಗಳವಾರಕ್ಕೆ ಮುಂದೂಡಿರುವುದಾಗಿದೆ ಎಂದು ತಿಳಿದುಬಂದಿದೆ.
- Saturday
- November 23rd, 2024