
ಅರಂಬೂರು ಬಳಿ ಟಿವಿಎಸ್ ಅಪಾಚಿ ಬೈಕ್ ಸ್ಕಿಡ್ ಆಗಿ ಸವಾರರಿಬ್ಬರು ಜಖಂಗೊಂಡ ಘಟನೆ ಇಂದು ಸಂಜೆ ನಡೆದಿದೆ. ಗಾಯಗೊಂಡ ಅರುಣ, ಕಿರಣ ಇಬ್ಬರು ಸಹೋದರರಾಗಿದ್ದು ಪೆರಾಜೆ ಪದ್ಮಯ್ಯ ಅವರ ಪುತ್ರರು. ಸುಳ್ಯ ಸರಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಲಾಗುತ್ತಿದೆ. ಪೈಂಟಿಂಗ್ ಕೆಲಸ ಮಾಡುತ್ತಿದ್ದ ಇವರು ಸುಳ್ಯಕ್ಕೆ ಸಾಮಾಗ್ರಿ ಖರೀದಿಗೆ ಬರುತ್ತಿದ್ದರು ಎಂದು ತಿಳಿದುಬಂದಿದೆ.