ಅರಣ್ಯ ಮತ್ತು ಮರಗಳ ವ್ಯಾಪ್ತಿಯನ್ನು ಹೆಚ್ಚಿಸುವ ಕಾರ್ಯದಲ್ಲಿ ರೈತರು ಮತ್ತು ಸಾರ್ವಜನಿಕರ ಸಹಕಾರವನ್ನು ಉತ್ತೇಜಿಸುವ ಸಲುವಾಗಿ ಕರ್ನಾಟಕ ಅರಣ್ಯ ಇಲಾಖೆ 2011-12ರಲ್ಲಿ ‘ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆ (KAPY)’ ಅನ್ನು ಪ್ರಾರಂಭಿಸಿತು. ಕಾರ್ಯಕ್ರಮದ ಪ್ರಕಾರ, ರೈತರು ತಮ್ಮ ಜಮೀನುಗಳಲ್ಲಿ ಗಿಡಗಳನ್ನು ನೆಡಲು ಅರಣ್ಯ ಇಲಾಖೆಯ ಹತ್ತಿರದ ನರ್ಸರಿಗಳಿಂದ ಸಬ್ಸಿಡಿ ದರದಲ್ಲಿ ಸಸಿಗಳನ್ನು ನೀಡಲಾಗುತ್ತದೆ. ಮೊದಲ ವರ್ಷದ ಕೊನೆಯಲ್ಲಿ ಉಳಿದಿರುವ ಪ್ರತಿ ಗಿಡಗಳಿಗೆ ರೈತರಿಗೆ 30 ರೂ. ಎರಡನೇ ಮತ್ತು ಮೂರನೇ ವರ್ಷ ಪೂರ್ಣಗೊಂಡ ನಂತರ ಉಳಿದಿರುವ ಪ್ರತಿ ಗಿಡಕ್ಕೆ ಕ್ರಮವಾಗಿ 30 ಮತ್ತು 40 ರೂನಂತೆ (ಒಟ್ಟು 3 ವರ್ಷಗಳಿಗೆ 100 rs) ರೈತರಿಗೆ ಸಸಿ ನೆಡಲು ಮಾತ್ರವಲ್ಲದೆ ಕನಿಷ್ಠ ಮೂರು ವರ್ಷಗಳಾದರೂ ಅವುಗಳನ್ನು ಪೋಷಿಸಲು ಪ್ರೋತ್ಸಾಹ ಧನ ನೀಡಲಾಗುತ್ತದೆ. ರೈತ ಹೆಚ್ಚಿನ ಸಂಖ್ಯೆಯ ಸಸಿಗಳನ್ನು ನೆಟ್ಟಾಗ ಪ್ರೋತ್ಸಾಹ ಧನವು ಸಾಕಷ್ಟು ಗಣನೀಯವಾಗಿರುತ್ತದೆ. ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಸುಳ್ಯ ವಲಯದ ನರ್ಸರಿಯಲ್ಲಿ ರೈತರಿಗೆ ವಿತರಿಸಲು ಸಸಿಗಳನ್ನು ಬೆಳೆಸಲಾಗಿದ್ದು ಇದರ ಉಪಯೋಗ ಪಡೆದುಕೊಳ್ಳಬೇಕಾಗಿ ಈ ಮೂಲಕ ಕೊರಲಾಗಿದೆ.ರೈತರಿಗೆ ಹಲಸು, ಮಹಾಗನಿ, ಸಾಗವಾನಿ, ಬೊಳ್ಪಾಲೆ , ಕಹಿಬೇವು, ರಾಂಪತ್ರೆ, ನೇರಳೆ ಪುನರ್ಪುಳಿ ಗಿಡ ದೊರೆಯುತ್ತದೆ. ಕಚೇರಿಯಿಂದ ಅರ್ಜಿ ಪಡೆದು ಭರ್ತಿ ಮಾಡಿದ ಅರ್ಜಿ ಜತೆಗೆ ಜಮೀನಿನ ಪಹಣಿ ಪತ್ರಿಕೆ, ಜಮೀನಿನ ನಕಾಶೆ (ನಕಲು), ಆಧಾರ್ ನಕಲು ಪ್ರತಿ, ಬ್ಯಾಂಕ್ ಪಾಸ್ ಪುಸ್ತಕ(ನಕಲು), ಅರ್ಜಿದಾರರ ಭಾವಚಿತ್ರ ಸಲ್ಲಿಸತಕ್ಕದ್ದು ಎಂದು ಸುಳ್ಯ ವಲಯ ಅರಣ್ಯ ಇಲಾಖೆ ಪ್ರಕಟಣೆ ತಿಳಿಸಿದೆ.
- Tuesday
- December 3rd, 2024