Ad Widget

ದ್ವಿತೀಯ ಪಿ.ಯು ವಿದ್ಯಾರ್ಥಿಗಳಿಗೆ ಉಚಿತ ಆನ್ಲೈನ್ ಕೋಚಿಂಗ್

ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಸಹಯೋಗದೊಂದಿಗೆ ವಿವೇಕಾನಂದ ಪದವಿಪೂರ್ವ ಕಾಲೇಜಿನ ವತಿಯಿಂದ ಪ್ರಥಮ ಪಿಯು ಉತ್ತೀರ್ಣರಾಗಿ ದ್ವಿತೀಯ ಪಿಯು ಪ್ರವೇಶ ಪಡೆಯಲಿರುವ ವಿಜ್ಞಾನ ,ವಾಣಿಜ್ಯ ಹಾಗೂ ಕಲಾ ವಿಭಾಗದ ವಿದ್ಯಾರ್ಥಿಗಳಿಗೆ ಉಚಿತ ಆನ್ಲೈನ್ ಕೋಚಿಂಗ್ ಪ್ರಾರಂಭಗೊಂಡಿದೆ. ಇದು ಕೇವಲ ವಿವೇಕಾನಂದ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳಿಗೆ ಮಾತ್ರವಲ್ಲದೆ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುವ ಎಲ್ಲಾ ಕಾಲೇಜಿನ ವಿದ್ಯಾರ್ಥಿಗಳಿಗೆ ಉಪಯೋಗವಾಗಲಿದೆ.ತರಗತಿ ಸಮಯದ ವಿವರ: ಬೆಳಿಗ್ಗೆ 9.30 – 11.00 ವಾಣಿಜ್ಯ ವಿದ್ಯಾರ್ಥಿಗಳಿಗೆ ತರಗತಿ, ಬೆಳಿಗ್ಗೆ  11.00 -1.00  ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ತರಗತಿಗಳು ನಡೆಯಲಿವೆ. ಅಪರಾಹ್ನ 3 ರಿಂದ 4 ಗಂಟೆಯವರೆಗೆ ವಾಣಿಜ್ಯ  ವಿಭಾಗದ ವಿದ್ಯಾರ್ಥಿಗಳಿಗಗೆ ಬೆಳಗ್ಗಿನ ತರಗತಿಗಳ ಮರುಪ್ರಸಾರವೂ ನಡೆಯಲಿದೆ. ಸಂಜೆ 7ರಿಂದ -9ರವರೆಗೆ ವಿಜ್ಞಾನ ವಿದ್ಯಾರ್ಥಿಗಳಿಗೆ ಬೆಳಗಿನ ತರಗತಿಗಳ ಮರುಪ್ರಸಾರವೂ ನಡೆಯಲಿದೆ.
ಕಾರಣಾಂತರಗಳಿಂದ ತರಗತಿಗಳು ವಿಳಂಬವಾಗುತ್ತಿರುವ ಈ ಸಂದರ್ಭದಲ್ಲಿ  ವಿದ್ಯಾರ್ಥಿಗಳು ಈ ಉಚಿತ ತರಗತಿಗಳ ಸದುಪಯೋಗ ಪಡಿಸಿಕೊಳ್ಳಬೇಕಾಗಿ ವಿವೇಕಾನಂದ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಹೆಚ್ಚಿನ ಮಾಹಿತಿಗೆ 
9902194905,9731640407 ಈ ದೂರವಾಣಿ  ಸಂಖ್ಯೆಗಳನ್ನು ಸಂಪರ್ಕಿಸಬಹುದು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading