
ಸಂಪಾಜೆ ಗ್ರಾಮ ಪಂಚಾಯತ್ ಟಾಸ್ಕ್ ಫೋರ್ಸ್ ಸಭೆಯು ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಂದರಿ ಮುಂಡಡ್ಕ ಅಧ್ಯಕ್ಷತೆಯಲ್ಲಿ ನಡೆಯಿತು ಈ ಸಭೆಯಲ್ಲಿ ಈ ಕೆಳಗಿನ ನಿರ್ಣಯವನ್ನು ಕೈಗೊಳ್ಳಲಾಯಿತು. ಪೇಟೆಯಲ್ಲಿ ವರ್ತಕರು ಹಾಗೂ ಗ್ರಾಹಕರು ಕಡ್ಡಾಯವಾಗಿ ಮಾಸ್ಕ್ ಧರಿಸುವುದು, ಕಲ್ಲುಗುಂಡಿ ಸರಕಾರಿ ಶಾಲೆಯಲ್ಲಿ ಕೋರಂಟೈನ್ ಗೆ ವ್ಯವಸ್ಥೆ ಹೊರ ರಾಜ್ಯ ಜಿಲ್ಲೆಯಿಂದ ಬಂದವರ ಬಗ್ಗೆ ಗಮನ ಹರಿಸುವುದು, ಗ್ರಾಮ ಪಂಚಾಯತ್ ಮಟ್ಟದ ಎಲ್ಲಾ ಕಸದ ತೊಟ್ಟಿಗಳನ್ನು ಶುಚಿ ಗೊಳಿಸುದು, ಗ್ರಾಮೀಣ ಭಾಗದ ಬಾರ್ ಹಾಗೂ ವೈನ್ ಶಾಪ್ 2 ಗಂಟೆಗೆ ಬಂದ್ ಮಾಡುವ ಬಗ್ಗೆ ಚರ್ಚೆ ನಡೆಯಿತು, ಪಂಚಾಯತ್ ವ್ಯಾಪ್ತಿಯಲ್ಲಿ ಅರಣ್ಯ ನಿಗಮದ ರಬ್ಬರ್ ತೋಟದಲ್ಲಿ ಪ್ಲಾಸ್ಟಿಕ್ ಹಾಗೂ ಚಿಪ್ಪಿ ಇದ್ದು ಸೊಳ್ಳೆ ಉತ್ಪತ್ತಿ ಆಗುತ್ತಿದ್ದು ಈ ಬಗ್ಗೆ ನೋಟಿಸ್ ನೀಡುವುದು, ಸಾರ್ವಜನಿಕ ಸ್ಥಳದಲ್ಲಿ ಕೋಳಿ ತ್ಯಾಜ್ಯ ಎಸೆದಲ್ಲಿ ಕ್ರಮ ಕೈಗೊಳ್ಳಲು ತೀರ್ಮಾಸಿಲಾಯಿತು. ಸಾಂಕ್ರಾಮಿಕ ರೋಗ ಹರದಂತೆ ಎಚ್ಚರಿಕೆ ಸಭೆಯಲ್ಲಿ ತಾಲೂಕು ಪಂಚಾಯತ್ ಸದಸ್ಯೆ ಪುಷ್ಪಾ ಮೇದಪ್ಪ, ಪಂಚಾಯತ್ ಉಪಾಧ್ಯಕ್ಷೆ ಮೋಹಿನಿ ಸದಸ್ಯರುಗಳಾದ ಸೋಮಶೇಖರ್ ಕೆ.ಆರ್, ಹಮೀದ್ ಜಿ. ಕೆ., ನಾಗೇಶ್, ಸುಂದರ, ಲೂಕಸ್,ಷಣ್ಮುಗಂ,ಲತೀಶ್ ಡಿಸೋಜಾ,ಕುಸುಮ,ಯಶೋಧ, ಅಭಿವೃದ್ದಿ ಅಧಿಕಾರಿ ನಾಗರಾಜ್ ಗ್ರಾಮಕರಣಿಕರದ ಮಿಯಾ ಸಾಬ್ ಮುಲ್ಲಾ ಕಾರ್ಯದರ್ಶಿ ವಿದ್ಯಾಧರ್ ಆರೋಗ್ಯ ಸಹಾಯಕಿ ಹಿಮಲೇಶ್ವರಿ ಆಶಾ ಕಾರ್ಯಕರ್ತೆ ಸವಿತಾ ರೈ ಮೋಹನಾಗಿ ಸೌಮ್ಯ ಉಪಸ್ಥಿತರಿದ್ದರು.