ರಾಜ್ಯ ಸರಕಾರದ ನಿರ್ಧಾರದಂತೆ ಸುಳ್ಯ ಕೆಎಸ್‌ಆರ್‌ಟಿಸಿ ಬಸ್ ಡಿಪೋದಿಂದಲೂ ನಾಳೆ ಬಸ್ ಸಂಚಾರ ಆರಂಭವಾಗಲಿದೆ.
ಸದ್ಯಕ್ಕೆ ಸುಳ್ಯ- ಪುತ್ತೂರು, ಸುಳ್ಯ-ಮಡಿಕೇರಿ ಹಾಗೂ ಸುಳ್ಯ-ಬೆಂಗಳೂರು ನಡುವೆ ಮಾತ್ರ ಬಸ್ ಸಂಚಾರ ಇರುತ್ತದೆ. ಪ್ರತಿ ಬಸ್‌ನಲ್ಲೂ 3೦ ಪ್ರಯಾಣಿಕರಿಗೆ ಮಾತ್ರ ಅವಕಾಶವಿದೆ. ಮಾಸ್ಕ್ ಧರಿಸಿದ ಪ್ರಯಾಣಿಕರಿಗಷ್ಟೇ ಅವಕಾಶವಿದೆ. ಬೆಂಗಳೂರಿಗೆ ೩೦ ಪ್ರಯಾಣಿಕರು ಇದ್ದರಷ್ಟೇ ಬಸ್ ಸಂಚಾರವಿರುತ್ತದೆ. ರಾತ್ರಿ ಪ್ರಯಾಣ ಇರುವುದಿಲ್ಲ. ಸಂಜೆ ೭ ಗಂಟೆಗೆ ಬೆಂಗಳೂರು ತಲುಪುವ ರೀತಿಯಲ್ಲಿ ಸಂಚಾರ ಸಮಯ ನಿಗದಿಪಡಿಲಾಗುತ್ತದೆ ಎಂದು ಡಿಪೋ ಮೆನೇಜರ್ ಸುಂದರ್‌ರಾಜ್ ತಿಳಿಸಿದ್ದಾರೆ.
ಬಸ್ ನಿಲ್ದಾಣದಲ್ಲಿ ಸ್ಯಾನಿಟೈಸರ್ ವ್ಯವಸ್ಥೆ ಮಾಡಲಾಗುತ್ತದೆ. ಬೆಂಗಳೂರಿಗೆ ಹೋಗುವ ಪ್ರಯಾಣಿಕರಿಗೆ ಸ್ಕ್ರೀನಿಂಗ್ ವ್ಯವಸ್ಥೆ ಇರುತ್ತದೆ. ಪ್ರಯಾಣಿಕರ ಪ್ರತಿಕ್ರಿಯೆಯ ಆಧಾರದಲ್ಲಿ ಮುಂದಿನ ದಿನಗಳಲ್ಲಿ ಬಸ್ ಸಂಖ್ಯೆಯನ್ನು ಹೆಚ್ಚಿಸುವ ಹಾಗೂ ಗ್ರಾಮೀಣ ಪ್ರದೇಶಗಳಿಗೆ ಬಸ್ ಸಂಚಾರದ ವ್ಯವಸ್ಥೆ ಮಾಡಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
ಅದೇ ಸುಳ್ಯದಿಂದ ತೊಡಿಕಾನಕ್ಕೆ ಹೋಗುವ ಖಾಸಗಿ ಬಸ್ ಕೂಡ ಸರಕಾರದ ನಿಯಮಾನುಸಾರ ಬೆಳಿಗ್ಗೆ ೭ ರಿಂದ ಸಂಜೆ ೭ ವರೆಗೆ ಸೇವೆ ಒದಗಿಸಲಿದೆ ಎಂದು ತಿಳಿದುಬಂದಿದೆ.