Ad Widget

ಅಟೋ-ಟ್ಯಾಕ್ಸಿ ಚಾಲಕರ ಗಮನಕ್ಕೆ : 5 ಸಾವಿರ ರೂ. ಸಹಾಯಧನ ಪಡೆಯಲು ಈ ಷರತ್ತುಗಳು ಅನ್ವಯ

ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಲಾಕ್ ಡೌನ್ ನಿಂದಾಗಿ ಸಂಕಷ್ಟಕ್ಕೆ ಸಿಲುಕಿದ ಆಟೋ ರಿಕ್ಷಾ, ಟ್ಯಾಕ್ಸಿ ಚಾಲಕರಿಗೆ ಕೋವಿಡ್-19 ಪರಿಹಾರ ಪ್ಯಾಕೇಜ್ ಆಗಿ ರೂ.5000 ಘೋಷಣೆ ಮಾಡಿದ್ದರು. ಇಂತಹ ಪರಿಹಾರದ ಹಣವನ್ನು ಹೇಗೆ ಪಡೆಯಬೇಕು ಎಂಬುದೇ ರಾಜ್ಯದ ಅನೇಕ ಆಟೋ ರಿಕ್ಷಾ, ಟ್ಯಾಕ್ಸಿ ಚಾಲಕರ ಪ್ರಶ್ನೆಯಾಗಿತ್ತು. ಇದೀಗ ಆ ಪ್ರಶ್ನೆ, ಗೊಂದಲಕ್ಕೆ ರಾಜ್ಯ ಸರ್ಕಾರ ತೆರೆ ಎಳೆದಿದೆ. ಕೋವಿಡ್-19 ಪರಿಹಾರ ಹಣವನ್ನು ಹೇಗೆ ಆಟೋ ರಿಕ್ಷಾ, ಟ್ಯಾಕ್ತಿ ಚಾಲಕರು ಪಡೆಯಬೇಕು ಎಂಬುದಾಗಿ ನಡಾವಳಿಗಳನ್ನು ಸರ್ಕಾರ ಪ್ರಕಟಿಸಿದೆ.

. . . . .

ಈ ಕುರಿತಂತೆ ಆದೇಶ ಹೊರಡಿಸಿರುವ ರಾಜ್ಯದ ಸಾರಿಗೆ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಎಂ ಸತ್ಯವತಿ, ಕೋವಿಡ್-19 ಹಿನ್ನಲೆಯಲ್ಲಿ ಲಾಕ್ ಡೌನ್ ಆದೇಶಿರುವುದರಿಂದ ದೈನಂದಿನ ಉದ್ಯೋಗವನ್ನು ನಡೆಸಲಾಗದೇ ಆಟೋ ರಿಕ್ಷಾ, ಟ್ಯಾಕ್ಸಿ ಚಾಲಕರು ಸಂಕಷ್ಟಕ್ಕೆ ಸಿಲುಕಿದ್ದಾರೆ.ಇಂತಹ ಆಟೋ ರೀಕ್ಷ ಮತ್ತು ಟ್ಯಾಕ್ಸಿ ಚಾಲಕರಿಗೆ ಮಾತ್ರ ಒಂದು ಬಾರಿ ಪರಿಹಾರವಾಗಿ ರೂ.5000 ಗಳ ಪರಿಹಾರ ಧನವನ್ನು ಈ ಕೆಳಕಂಡ ಷರತ್ತುಗಳಿಗೊಳಪಟ್ಟು ನೀಡಲು ಮಂಜೂರಾತಿ ಆದೇಶ ನೀಡಿದೆ ಎಂದು ತಿಳಿಸಿದ್ದಾರೆ.ಅಟೋ ರಿಕ್ಷಾ, ಟ್ಯಾಕ್ಸಿ ಚಾಲಕರು 5 ಸಾವಿರ ಪರಿಹಾರ ಹಣ ಪಡೆಯಲು ಎಲ್ಲಾ ಅರ್ಜಿಗಳನ್ನು ಸೇವಾ ಸಿಂಧು ಪೋರ್ಟಲ್ ಮೂಲಕವೇ ಸ್ವೀಕೃತವಾಗತಕ್ಕದ್ದು.

ದಿನಾಂಕ 24-03-2020ರಂದು ಚಾಲನೆ ಪರವಾನಗಿ ಪ್ರಮಾಣ ಪತ್ರ(ಡ್ರೈವಿಂಗ್ ಲೈಸೆನ್ಸ್) ಮತ್ತು ಸುಸ್ಥಿತಿ ಪ್ರಮಾಣ ಪತ್ರ(ಫಿಟ್ ನೆಸ್ ಸೆರ್ಟಿಫಿಕೇಟ್) ಹೊಂದಿದ್ದ ವಾಹನಗಳಿಗೆ ಮಾತ್ರ ಅನ್ವಯಿಸತಕ್ಕದ್ದು. ದಿನಾಂಕ 24-03-2020ರಂದು ಚಾಲ್ತಿಯಲ್ಲಿದ್ದ ಚಾಲಕರ ಪರವಾನಗಿ(ಡ್ರೈವಿಂಗ್ ಲೈಸೆನ್ಸ್) ಸಂಖ್ಯೆಗಿಂತ ಹೆಚ್ಚು ಫಲಾನುಭವಿಗಳಿಲ್ಲದಂತೆ ಖಚಿತಪಡಿಸಿಕೊಳ್ಳತಕ್ಕದ್ದು.

ಆಧಾರ್ ಕಾರ್ಡ್, ಚಾಲನಾ ಪರವಾನಗಿ, ವಾಹನ ನೊಂದಣಿ ಸಂಖ್ಯೆ ಮೂರು ಅಂಶಗಳು ಎಲ್ಲಾ ಫಲಾನುಭವಿಗಳಿಗೆ ಕಡ್ಡಾಯವಾಗಿರತಕ್ಕದ್ದು.

ಆಟೋ ಮತ್ತು ಟ್ಯಾಕ್ಸಿ ಚಾಲಕರಿಗೆ ಮಾತ್ರ ಅನ್ವಯವಾಗತಕ್ಕದ್ದು. ಮ್ಯಾಕ್ಸಿ ಕ್ಯಾಬ್ ಗಳಿಗೆ ಅನ್ವಯಿಸುವುದಿಲ್ಲ.
ಪರಿಹಾರ ಧನವು ಕೇವಲ ಅನಜ್ಞಾ ಪತ್ರವನ್ನು ಹೊಂದಿರುವ ಹಾಗೂ ಅಗತ್ಯವಿರುವ ಚಾಲಕರ ಬ್ಯಾಂಕ್ ಖಾತೆಗೆ ಡಿಬಿಟಿ ಮುಖಾಂತರವೇ ಸಂದಾಯವಾಗಬೇಕು
ಒಂದು ವೇಳೆ ಆಟೋ, ಟ್ಯಾಕ್ಸಿ ಮಾಲಿಕರಿಗೆ ಸಂದಾಯವಾದಲ್ಲಿ ಕೆಲವೊಂದು ಮಾಲಿಕರು ಹೆಚ್ಚಿನ ಸಂಖ್ಯೆಯ ಆಟೋ, ಟ್ಯಾಕ್ಸಿಗಳನ್ನು ಹೊಂದಿದ್ದು ಅವರಿಗೆ ಪರಿಹಾರ ಧನ ಸಂದಾಯವಾದಲ್ಲಿ ಜೀವನ ನಿರ್ವಹಣೆಯನ್ನು ಎದುರಿಸುತ್ತಿರುವ ಚಾಲಕರಿಗೆ ಸಿಗದಂತೆಯಾಗುತ್ತದೆ. ಆದುದರಿಂದ ಡ್ಯೂಪ್ಲಿಕೇಷನ್ ಅಥವಾ ಡಬಲ್ ಪೇಮೆಂಟ್ ಆಗದಂತೆ ಅವರುಗಳ ಆಧಾರ್, ಪ್ಯಾನ್ ಕಾರ್ಡ್, ಬ್ಯಾಂಕ್ ಖಾತೆಗೆ  ಲಿಂಕ್ ಆಗಿರುವ ಬಗ್ಗೆ ಗಮನಹರಿಸಿ ವರ್ಗಾಯಿಸತಕ್ಕದ್ದು ಎಂದು ಆದೇಶದಲ್ಲಿ ತಿಳಿಸಿದ್ದಾರೆ.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!