
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ( ರಿ) ಬಿಸಿ ಟ್ರಸ್ಟ್ ಸುಳ್ಯ ತಾಲೂಕು ಬೆಳ್ಳಾರೆ ವಲಯದ ವತಿಯಿಂದ ಧರ್ಮಸ್ಥಳ ಧರ್ಮಾಧಿಕಾರಿ ಡಾ ಡಿ ವೀರೇಂದ್ರ ಹೆಗ್ಗಡೆಯವರ ಆಶಯದಂತೆ ಜನ ಮಂಗಳ ಕಾರ್ಯಕ್ರಮದಡಿಯಲ್ಲಿ ವಾಟರ್ ಬೆಡ್ ಹಾಗೂ ವೀಲ್ಚೇರ್ ವಿತರಣೆ ಕಾರ್ಯಕ್ರಮವನ್ನು ಬೆಳ್ಳಾರೆ ಮಹಾಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ವಿತರಿಸಲಾಯಿತು .ಈ ಸಂದರ್ಭ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಸುನಿಲ್ ರೈ ಯೋಜನಾಧಿಕಾರಿ ಸಂತೋಷ್ ಕುಮಾರ್ ರೈ ,ತಾಲ್ಲೂಕು ಜನಜಾಗೃತಿ ವೇದಿಕೆಯ ಅಧ್ಯಕ್ಷರಾದ ಕಳಂಜ ವಿಶ್ವನಾಥ ರೈ ,ಬೆಳ್ಳಾರೆ ವಲಯ ಅಧ್ಯಕ್ಷರಾಗಿರುವ ಕೂಸಪ್ಪ ಗೌಡ ಮುಗುಪ್ಪು ,ವಲಯ ಮೇಲ್ವಿಚಾರಕರಾದ ಮುರಳಿಧರ ಎ ,ಒಕ್ಕೂಟ ಅಧ್ಯಕ್ಷರುಗಳಾದ ವಸಂತ ಗೌಡ ನೆಟ್ಟಾರು, ಪ್ರಸಾದ್ ಚೊಕ್ಕಾಡಿ,ಸೇವಾ ಪ್ರತಿನಿಧಿಗಳಾದ ಶ್ರೀಮತಿ ಹರ್ಷಿತಾ ,ಕುಮಾರಿ ಗಾಯತ್ರಿ ಸೇರಿದಂತೆ ಸದಸ್ಯರು ಉಪಸ್ಥಿತರಿದ್ದರು.