- Tuesday
- December 3rd, 2024
ಬೆಳ್ಳಾರೆಯ ಮಾಸ್ತಿಕಟ್ಟೆ ಸಮೀಪ ಉಮಿಕ್ಕಳದಲ್ಲಿ ದನದ ಮಾಂಸ ಮಾಡುತ್ತಿದ್ದಲ್ಲಿಗೆ ಬೆಳ್ಳಾರೆ ಪೊಲೀಸರು ದಾಳಿ ಮಾಡಿ ದನದ ಮಾಂಸ ವಶಪಡಿಸಿಕೊಂಡು ಹಾಗೂ ಮೂವರನ್ನು ಬಂಧಿಸಿದ ಘಟನೆ ಮೇ ೧೫ ರಂದು ನಡೆದಿದೆ. ಬೆಳ್ಳಾರೆಯ ಮಾಸ್ತಿಕಟ್ಟೆಯಲ್ಲಿ ಮರದ ಅಡಿಯಲ್ಲಿ ದನದ ಮಾಂಸ ಮಾಡುವ ಖಚಿತ ಮಾಹಿತಿ ದೊರೆತ ಬೆಳ್ಳಾರೆ ಪೊಲೀಸರು ದಾಳಿ ಮಾಡಿ ಸುಮಾರು 40 ಕೆ.ಜಿ.ದನದ ಮಾಂಸ...
ಸುಬ್ರಹ್ಮಣ್ಯ ಠಾಣೆಯ ನೂತನ ಎ ಎಸ್ ಐ ಆಗಿ ಜಯರಾಮ ಪಿ. ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಬಂಟ್ವಾಳ ನಗರ ಠಾಣೆಯಿಂದ ಭಡ್ತಿ ಹೊಂದಿ ಇಲ್ಲಿಗೆ ಬಂದಿರುತ್ತಾರೆ. ಮೂಲತಃ ವಿಟ್ಲದ ಪೂರ್ಲಪ್ಪಾಡಿ ನಿವಾಸಿಯಾಗಿದ್ದಾರೆ.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ( ರಿ) ಬಿಸಿ ಟ್ರಸ್ಟ್ ಸುಳ್ಯ ತಾಲೂಕು ಬೆಳ್ಳಾರೆ ವಲಯದ ವತಿಯಿಂದ ಧರ್ಮಸ್ಥಳ ಧರ್ಮಾಧಿಕಾರಿ ಡಾ ಡಿ ವೀರೇಂದ್ರ ಹೆಗ್ಗಡೆಯವರ ಆಶಯದಂತೆ ಜನ ಮಂಗಳ ಕಾರ್ಯಕ್ರಮದಡಿಯಲ್ಲಿ ವಾಟರ್ ಬೆಡ್ ಹಾಗೂ ವೀಲ್ಚೇರ್ ವಿತರಣೆ ಕಾರ್ಯಕ್ರಮವನ್ನು ಬೆಳ್ಳಾರೆ ಮಹಾಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ವಿತರಿಸಲಾಯಿತು .ಈ ಸಂದರ್ಭ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ...
ಸುಳ್ಯದಲ್ಲಿ ಹಲವಾರು ವರ್ಷಗಳಿಂದ ಜನಪ್ರಿಯ ವೈದ್ಯರಾಗಿದ್ದ ಡಾ. ಸುಗುಣ ಗೌಡ ಮಿತ್ತಮಜಲು (೭೫)ಮೇ. ೧೫ ರಂದು ನಿಧನರಾದರು. ಮೃತರು ಇಬ್ಬರು ಪುತ್ರರು, ಒರ್ವ ಪುತ್ರಿ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ. ಸುಳ್ಯದಲ್ಲಿ ಕ್ಲಿನಿಕ್ ನಡೆಸಿ ಖ್ಯಾತ ವೈದ್ಯರಾಗಿದ್ದ ಅವರು ಇತ್ತೀಚೆಗೆ ಕೆ.ವಿ.ಜಿ ಆಸ್ಪತ್ರೆಯಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದರು.
ಬದ್ರಿಯಾ ಜುಮಾ ಮಸೀದಿ ಗೂನಡ್ಕ ಹಾಗೂ ರಾಜ್ಯ ಹೆದ್ದಾರಿಯ ಮಧ್ಯೆ ಮಸೀದಿಗೆ ಆಗಮಿಸುವವರ ವಾಹನಕ್ಕೆ ಸೂಕ್ತ ಪಾರ್ಕಿಂಗ್ ವೆವಸ್ಥೆ ಯಿದ್ದು, ಮಳೆಗಾಲದಲ್ಲಿ ಅದು ಕೆಸರುಮಯವಾಗಿ ತೊಂದರೆ ಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಆ ಸ್ಥಳದಲ್ಲಿ ಇಂಟರ್ ಲೋಕ್ ಅಳವಡಿಸಲು ಅಲ್ ಅಮೀನ್ ಸಂಸ್ಥೆಯು ಕಳೆದ ಮೀಲಾದ್ ಸ್ನೇಹ ಸಂಗಮ ಕಾರ್ಯಕ್ರಮದಲ್ಲಿ ಯೋಜನೆ ರೂಪಿಸಿ ಮಸೀದಿ ಆಡಳಿತ ಮಂಡಳಿಗೆ...
ದಶಕಗಳ ಹಿಂದೆ ಭೂಗತ ಜಗತ್ತಿನ ದೊರೆಯಾಗಿದ್ದ ಮುತ್ತಪ್ಪ ರೈ ಇಂದ ಬೆಳಗ್ಗಿನ ಜಾವ ೨ ಗಂಟೆಗೆ ನಿಧನರಾದರು. ಅವರಿಗೆ 68 ವರ್ಷ ವಯಸ್ಸಾಗಿತ್ತು. ಅವರು ಕ್ಯಾನ್ಸರ್ ನಿಂದ ಬಳಲುತ್ತಿದ್ದರು. ಬೆಂಗಳೂರಿನ ಬಿಡದಿಯಲ್ಲಿರುವ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ. ದಶಕಗಳಿಂದ ಭೂಗತ ಜಗತ್ತಿನಿಂದ ಹೊರಬಂದು, ಎಲ್ಲಾ ಕೇಸುಗಳಿಂದ ಪಾರಾಗಿ, ಬಳಿಕ ಸಾಮಾಜದಲ್ಲಿ ಉದ್ಯಮಿಯಾಗಿ ಗುರುತಿಸಿ ಕೊಂಡಿದ್ದರು....