
ಕರಾವಳಿ ಜಿಲ್ಲೆಯ ಅನೇಕ ಅನಿವಾಸಿ ಭಾರತೀಯ ಕನ್ನಡಿಗರು ವಿದೇಶದಲ್ಲಿ ವೈಧ್ಯರಾಗಿ, ಇಂಜಿನಿಯರ್ ಆಗಿ ಕಾರ್ಮಿಕರಾಗಿ ಹಾಗು ವ್ಯಾಪಾರ ವಿವಿಧ ಕ್ಷೇತ್ರದಲ್ಲಿ ದುಡಿಯಿತ್ತಿದ್ದಾರೆ ಮತ್ತು ಅವರಿಂದಾಗಿ ಭಾರತದ ಗೌರವ ಹೆಚ್ಚಿದೆ.
ಕೇಂದ್ರ ಸರಕಾರದ ಬಜೆಟ್ ನ ಶೇಕಡಾ 10% ಹಣವನ್ನು ಅನಿವಾಸಿ ಭಾರತೀಯರಿಂದ ಸಂಗ್ರಹಣೆ ಆಗುತ್ತದೆ.
ಇದೀಗ ಕೋವಿಡ್ 19 ಲಾಕ್ ಡೌನ್ ನಿಂದ ಪ್ರಪಂಚಾದ್ಯಂತ ಸಂಕಷ್ಟ ಕ್ಕೆ ಹಾಗು ಭಯಕ್ಕೆ ಸಿಲುಕಿರುವ ಕನ್ನಡಿಗರು ತಾಯ್ನಾಡಿಗೆ ವಾಪಾಸ್ ಬರಲು ಪರದಾಡುತಿದ್ದಾರೆ .
ಕೇಂದ್ರ ಹಾಗು ರಾಜ್ಯ ಸರ್ಕಾರದ ವೈಫಲ್ಯದಿಂದ ವಿಮಾನ, ಹಡಗು ಮತ್ತು ರೈಲ್ವೆ ಸಾರಿಗೆ ವ್ಯವಸ್ಥೆ ಗಳನ್ನ ಸೂಕ್ತ ರೀತಿಯಲ್ಲಿ ಒದಗಿಸದ ಕಾರಣ ವಾಪಾಸ್ ಬರಲಾಗದೆ ಕಂಗೆಟ್ಟಿದ್ದಾರೆ. ಇದೀಗ ದುಬೈಯಿಂದ ಮಂಗಳೂರಿಗೆ ಆಗಮಿಸಿದ ಕರಾವಳಿ ಭಾಗದವರಿಗೆ ಕೊರಂಟೈನ್ ವ್ಯವಸ್ಥೆ ಆಗಲಿ, ವಾಹನದ ವ್ಯವಸ್ಥೆ ಆಗಲಿ, ಚಿಕಿತ್ಸೆ ಯನ್ನು ಮಾಡದೇ ಪ್ರಯಾಣಿಕರು ಪರದಾಡುವಂತಾಗಿದೆ.ಹಾಗು ಫ್ಲೈಟ್ ಟಿಕೆಟ್ ದರ ಅತೀ ದುಬಾರಿ ಪಡೆದುಕೊಂಡಿರುತ್ತಾರೆ. ವಿಮಾನ ನಿಲ್ದಾಣದಲ್ಲಿ ಮತ್ತು ರೈಲ್ವೆ ನಿಲ್ದಾಣದಲ್ಲಿ ಆಹಾರ ಮತ್ತು ವಸತಿ ವ್ಯವಸ್ಥೆ ಮಾಡಿರುವುದಿಲ್ಲ.
ಅದೇ ರೀತಿ ಇತರ ರಾಜ್ಯದ ಕಾರ್ಮಿಕ ರಿಗೂ ಅವರ ಊರಿಗೆ ಕಳುಹಿಸಲು ಮತ್ತು ಹೊರ ರಾಜ್ಯದಲ್ಲಿ ಕೆಲಸಮಾಡುವ ಕಾರ್ಮಿಕ ವರ್ಗ ಮತ್ತು ಇತರನ್ನು ನಮ್ಮ ರಾಜ್ಯಕ್ಕೆ ಕರೆಸಿಕೊಳ್ಳುವಲ್ಲಿ ಸರಕಾರ ವಿಫಲಗೊಂಡಿದೆ.
ನೆರೆಯ ಕೇರಳ ರಾಜ್ಯದಲ್ಲಿ ವಿದೇಶದಿಂದ ಹಾಗು ವಿವಿಧ ರಾಜ್ಯ ಗಳಿಂದ ಆಗಮಿಸಿದ ಎಲ್ಲಾ ನಾಗರಿಕರಿಗೆ ಕೇರಳ ಸರಕಾರವೇ ಕೊರಂಟೈನ್ ವ್ಯವಸ್ಥೆ, ಅವರ ಮನೆ ಮನೆಗೆ ತಲುಪಿಸಲು ವಾಹನದ ವ್ಯವಸ್ಥೆ ಉಚಿತ ಚಿಕಿತ್ಸೆ ಯನ್ನು ನೀಡಿ ಶ್ಲ್ಯಾಘನೀಯ ಕೆಲಸ ಮಾಡಿರುತ್ತಾರೆ. ಕೇರಳ ರಾಜ್ಯ ದಲ್ಲಿ ಕೊರೊನ ಉತ್ತುoಗ ಸ್ಥಿತಿ ಯಲ್ಲಿದ್ದರು ಹತೋಟಿಗೆ ತಂದು ಪ್ರಪಂಚಕ್ಕೆ ಮಾದರಿ ರಾಜ್ಯವಾಗಿದೆ.
ಆದರೆ ನಮ್ಮ ಜಿಲ್ಲೆಯ ಜಿಲ್ಲಾಡಳಿತವು ವಿದೇಶ ದಿಂದ ಬಂದ ಕರಾವಳಿಯ ಜನರಿಗೆ ಯಾವುದೇ ವ್ಯವಸ್ಥೆ ಮಾಡದೇ ಸಂಪೂರ್ಣ ವಿಫಲ ಗೊಂಡಿದೆ . ಆದುದರಿಂದ ಈ ಬಗ್ಗೆ ಕೂಡಲೇ ಸರಿಯಾದ ವ್ಯವಸ್ಥೆಯನ್ನು ಕಲ್ಪಿಸಿ,
ಇನ್ನೂ ಮುಂದೆ ಸರಕಾರವು ಇಂತಹ ಧೋರಣೆಯನ್ನು ಮಾಡಬಾರದೆಂದು ಕೆ. ಪಿ. ಸಿ . ಸಿ ಯ ಮಾಜಿ ಕಾರ್ಯದರ್ಶಿ ಕೊಡಗು ವಿರಾಜಪೇಟೆ ಉಸ್ತುವಾರಿ ಟಿ. ಎಂ. ಶಾಹಿದ್ ತೆಕ್ಕಿಲ್ ಆಗ್ರಹಿಸಿದ್ದಾರೆ.