
ಅರಂತೋಡು ಮತ್ತು ತೊಡಿಕಾನ ಗ್ರಾಮದ ಕೋರನ ವೈರಸ್ ತಡೆ ಟಾಸ್ಕ್ಫೋರ್ಸ್ ಸಮಿತಿಯ ಜಂಟಿ ಸಭೆಯನ್ನು ಮೇ. ೧೧ ರಂದು ನಡೆಸಲಾಯಿತು. ಸಭೆಯಲ್ಲಿ ಈ ಕೆಳಗಿನ ನಿರ್ಣಯಗಳನ್ನು ಕೈಗೊಳ್ಳಲಾಯಿತು. ಅರಂತೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಎಲ್ಲಾ ವಾಣಿಜ್ಯ ಮಳಿಗೆಗಳನ್ನು ಮತ್ತು ಅಂಗಡಿಗಳನ್ನು ಬೆಳಗ್ಗೆ 7 ಯಿಂದ ಮಧ್ಯಾಹ್ನ 02 ಗಂಟೆಯವರೆಗೆ ಮಾತ್ರ ತೆರೆಯುವುದು. ಅನುಮತಿ ಇಲ್ಲದ ಅಂತರ್ ಜಿಲ್ಲಾ ಸಂಚಾರವನ್ನು ನಿಷೇಧಿಸಿರುವುದರಿಂದ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಅಂತರ್ ಜಿಲ್ಲಾ ರಸ್ತೆಗಳನ್ನು ಮುಚ್ಚಿದ್ದು ಅದನ್ನು ಹಾಗೇ ಮುಂದುವರಿಸುವುದು . ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಂಚರಿಸುವ ಎಲ್ಲ ಸಾರ್ವಜನಿಕರು ಕಡ್ಡಾಯವಾಗಿ ಮಾಸ್ಕ್ಗಳನ್ನು ಧರಿಸಿ ತಮ್ಮ ವ್ಯವಹಾರಗಳನ್ನು ನಡೆಸುವುದು ಮಾಸ್ಕ್ ಧರಿಸದೇ ಇರುವ ಸಾರ್ವಜನಿಕರಿಗೆ ಯಾವುದೇ ರೀತಿಯ ಸೇವೆಯನ್ನು ನೀಡದಂತೆ ವಾಣಿಜ್ಯ ಮಳಿಗೆಗಳ ಮಾಲೀಕರಿಗೆ ಸೂಚಿಸುವುದು. ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಅಂತರ್ ಜಿಲ್ಲೆಯಿಂದ ಬರುವ ಪ್ರಯಾಣಿಕರನ್ನು ಕಡ್ಡಾಯವಾಗಿ ಹದಿನಾಲ್ಕು ದಿನಗಳ ಕ್ವಾರಂಟೈನ್ ಗೆ ಒಳಪಡಿಸುವುದು . ತಮ್ಮ ಮನೆಯಲ್ಲಿ ಅಂತರ್ ಜಿಲ್ಲೆಯಿಂದ ಬಂದವರಿಗೆ ಪ್ರತ್ಯೇಕವಾಗಿ ಇರುವುದಕ್ಕೆ ಮನೆಯವರು ವ್ಯವಸ್ಥೆ ಮಾಡುವುದು. ಇಲ್ಲದಿದ್ದಲ್ಲಿ ಸಂಪೂರ್ಣ ಮನೆಯನ್ನು ಹದಿನಾಲ್ಕು ದಿನಗಳ ಕಾಲ ಕ್ವಾರಂಟೈನ್ ನಲ್ಲಿ ಇಡುವುದು.ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮಲೇರಿಯಾ ಮತ್ತು ಡೆಂಗಿ ಪ್ರಕರಣಗಳು ಹೆಚ್ಚಾಗುತ್ತಿದ್ದು ಸರ್ವ ಎಲ್ಲ ಮನೆಯವರು ಕೂಡ ತಮ್ಮ ಮನೆಯ ಸುತ್ತ ನೀರು ನಿಲ್ಲದಂತೆ ಎಚ್ಚರ ವಹಿಸುವಂತೆ ಸೂಚಿಸಲಾಯಿತು.ಈ ಸಂದರ್ಭದಲ್ಲಿ ಕೋರೋಣ ಕಾರ್ಯಪಡೆಯ ಸದಸ್ಯರಿಗೆ ರಾಜ್ಯ ಸರಕಾರದಿಂದ ಯೂಟ್ಯೂಬ್ ಮುಖಾಂತರ ತರಬೇತಿಯನ್ನು ಕೂಡ ನೀಡಲಾಗಿತು.