
ಪ್ರೀತಿಯ ಓದುಗರೇ,
ಕಳೆದೊಂದು ದಶಕದಿಂದ ಅಮರ ಸುಳ್ಯ ಸುದ್ದಿ ಕನ್ನಡ ವಾರಪತ್ರಿಕೆಯು ಸುಳ್ಯದ ಸಮಗ್ರ ಸುದ್ದಿಯನ್ನು ತಮ್ಮ ಮುಂದಿಟ್ಟು, ಗ್ರಾಮೀಣ ಪತ್ರಿಕಾರಂಗದಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿದೆ. ಯಾವುದೇ ರಾಗದ್ವೇಷಗಳಿಗೆ ಒಳಗಾಗದೇ, ವಸ್ತುನಿಷ್ಠ, ನಿಖರ ವಿಶ್ವಾಸಾರ್ಹ ವರದಿಯನ್ನು ಮುಂದಿಟ್ಟು ಓದುಗರ ಪ್ರೀತಿಗೆ ಪಾತ್ರವಾಗಿದೆ. ಜನಪರ ಕಾಳಜಿ ಹಾಗೂ ಪತ್ರಿಕಾಧರ್ಮವನ್ನು ಇನ್ನಷ್ಟು ಪ್ರಬಲವಾಗಿಸಿ ಅಹಂಕಾರಿಗಳಿಗೆ ಗುದ್ದುಕೊಡುವ ಹಂಬಲದೊಂದಿಗೆ ನಿಷ್ಪಕ್ಷಪಾತ ತೀಕ್ಷ್ಣ ವರದಿ ನೀಡಲು ಅಮರ ಸುಳ್ಯ ಸುದ್ದಿ ಹೊಸತೊಂದು ಪ್ರಯೋಗಕ್ಕೆ ಕೈಹಾಕಿದೆ. ತಾಲೂಕು ಮಾತ್ರವಲ್ಲದೆ ರಾಜ್ಯ, ರಾಷ್ಟ್ರೀಯ ಹಾಗೂ ಪ್ರಮುಖ ಸುದ್ದಿಗಳನ್ನು ನಿಮ್ಮ ಬೆರಳ ತುದಿಯಲ್ಲಿಡಲು ಪತ್ರಿಕೆಯ ಮೂಲಕ ವೆಬ್ ಸೈಟ್ ತೆರೆಯಲಾಗಿದೆ. ನೇರ ಮತ್ತು ನಂಬಿಕೆಯ ಪ್ರತಿಬಿಂಬವಾಗಿ ನಿಮ್ಮ ಅಭಿಮಾನಕ್ಕೆ ಪಾತ್ರವಾಗಲಿದೆ.