- Tuesday
- June 23rd, 2026
ಕುಲ್ಕುಂದ ಬಸವನಮೂಲ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ಏ.19 ಹಾಗೂ ಏ.20ರಂದು ವಾರ್ಷಿಕ ಜಾತ್ರಾ ಮಹೋತ್ಸವವು ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನೆರವೇರಿತು.ಏ.19ರಂದು ಬೆಳಿಗ್ಗೆ ಭಕ್ತರಿಂದ ಹಸಿರುವಾಣಿ ಸಮರ್ಪಣೆ ನಡೆದು ಮದ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಿತು. ಸಂಜೆ ತಂತ್ರಿಗಳ ಆಗಮನ, ಪ್ರಾಸಾದ ಶುದ್ಧಿ, ವಾಸ್ತು ಹೋಮ, ವಾಸ್ತು ಬಲಿ, ಪುಣ್ಯಾಹವಾಚನ ನಡೆದು...
ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ನಾಳೆ ಏ. 23 ರಂದು ಮಧ್ಯಾಹ್ನ 12.00 ಗಂಟೆಗೆ 2026ರ ಎಸ್.ಎಸ್.ಎಲ್.ಸಿ ಪರೀಕ್ಷೆ-1ರ ಫಲಿತಾಂಶವನ್ನು ಪ್ರಕಟಿಸಲಿದೆ. ಫಲಿತಾಂಶವನ್ನು https://karresults.nic.in KarnatakaOne Mobile App ಮೂಲಕವೂ ಪಡೆಯಬಹುದಾಗಿದೆ. ಅಲ್ಲದೆ ವಿದ್ಯಾರ್ಥಿಗಳ ನೊಂದಾಯಿತ ಮೊಬೈಲ್ ಸಂಖ್ಯೆಗೆ ವಾಟ್ಸಾಪ್/ಎಸ್‌ಎಂಎಸ್ (SMS) ಮೂಲಕವೂ ಫಲಿತಾಂಶದ ಮಾಹಿತಿಯನ್ನು ಮಂಡಲಿಯಿಂದ ರವಾನಿಸಲಾಗುವುದು. ಈ ವರ್ಷ...
ಅರಂತೋಡು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಕುಲ್ಚಾರು ಸೇತುವೆಯಿಂದ ನದಿಗೆ ಪ್ರಯಾಣಿಕರು ತ್ಯಾಜ ಎಸೆಯುತ್ತಿರುವುದನ್ನು ಸ್ಥಳೀಯ ಅಟೋರಿಕ್ಷಾ ಚಾಲಕರು ಹಾಗೂ ಸ್ಥಳೀಯ ನಿವಾಸಿಗಳು ಗಮನಿಸಿ, ಅವರನ್ನು ಪ್ರಶ್ನಿಸಿದರಲ್ಲದೆ, ಅರಂತೋಡು ಗ್ರಾ.ಪಂ.ಗೆ ವಿಷಯ ತಿಳಿಸಿದ್ದು, ತ್ಯಾಜ್ಯ ಎಸೆದ ವಾಹನ ಪ್ರಯಾಣಿಕರಿಗೆ ಗ್ರಾಮ ಪಂಚಾಯತ್ ವತಿಯಿಂದ ಪೊಲೀಸರ ಸಹಕಾರದಿಂದ ರೂ. ಐದು ಸಾವಿರ ದಂಡ ವಿಧಿಸಿದ ಘಟನೆ ಎ.21ರಂದು...
ಅರಂತೋಡು ಗ್ರಾಮ ಪಂಚಾಯತ್ ವ್ಯಾಪ್ತಿಯ ಕುಲ್ಚಾರು ಎಂಬಲ್ಲಿ ಬಲ್ನಾಡು ಹೊಳೆಗೆ ಸೇತುವೆಯಿಂದ ಕೆಳಗೆ ತ್ಯಾಜ್ಯ ಎಸೆಯುತ್ತಿದ್ದವರನ್ನು ಗಮನಿಸಿದ ಸ್ಥಳೀಯ ರಿಕ್ಷಾ ಚಾಲಕರು ತ್ಯಾಜ್ಯ ಎಸೆದವರನ್ನು ಹಿಡಿದು ನಿಲ್ಲಿಸಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಗೆ ಕರೆ ಮಾಡಿರುತ್ತಾರೆ. ಸ್ಥಳಕ್ಕೆ ಬಂದು ಪಂಚಾಯತ್ ಅಭಿವೃದ್ಧಿ ಅಧಿಕಾರಿಯವರು ವಿಚಾರಿಸಿದಾಗ ಕಸ ಎಸೆದ ವ್ಯಕ್ತಿ ಉಡಾಫೆಯಿಂದ ಮಾತಾಡಿದ್ದು, ತಕ್ಷಣ ತುರ್ತು ಕರೆ 112ಕ್ಕೆ...
ದಿನಾಂಕ : 22 ಏಪ್ರಿಲ್ 2026ವಾರ : ಬುಧವಾರಮಾಹಿತಿ ಕೃಪೆ : ಕ್ಯಾಂಪ್ಕೋ ನಿ. ಮಂಗಳೂರು(ಸುಳ್ಯ ಶಾಖೆ)ಸುಳ್ಯ ತಾಲೂಕಿನ ಕೃಷಿಕರಿಗೆ ಸಹಾಯಕವಾಗಲಿ ಎನ್ನುವ ಸದುದ್ದೇಶದಿಂದ ಪ್ರಮುಖ ಕೃಷಿ ಉತ್ಪನ್ನಗಳ ಇಂದಿನ(ಏಪ್ರಿಲ್ 22) ಮಾರುಕಟ್ಟೆ ಧಾರಣೆಯನ್ನು ಇಲ್ಲಿ ನೀಡಲಾಗಿದ್ದು, ಈ ಮಾಹಿತಿಯನ್ನು “ಕ್ಯಾಂಪ್ಕೋ ನಿ. ಮಂಗಳೂರು(ಸುಳ್ಯ ಶಾಖೆ)” ಇವರಿಂದ ಪಡೆದುಕೊಳ್ಳಲಾಗಿದೆ.ಅಡಿಕೆ ಧಾರಣೆಹೊಸ ಅಡಿಕೆ : 290-445-473/475ಹಳೆ ಅಡಿಕೆ...
ಜೇಸಿಐ ಸುಳ್ಯ ಪಯಸ್ವಿನಿ ವತಿಯಿಂದ ವಿಶ್ವ ಕಲಾ ದಿನಾಚರಣೆ ಪ್ರಯುಕ್ತ ಸೆಲ್ಯೂಟ್ ದಿ ಸೈಲೆಂಟ್ ಸ್ಟಾರ್ ಅವಾರ್ಡ್ ಪ್ರದಾನ ಕಾರ್ಯಕ್ರಮ ಎ. 21 ರಂದು ಜಾಲ್ಸೂರು ಗ್ರಾಮ ಪಂಚಾಯತ್ ಸಭಾಭವನದಲ್ಲಿ ನಡೆಯಿತು. ವಿಶ್ವ ಕಲಾ ದಿನದ ಪ್ರಯುಕ್ತ ತನ್ನ ಸೃಜನಾತ್ಮಕ ಕಲಾ ಪ್ರತಿಭೆಯಿಂದ ಜಗತ್ತನ್ನು ಸುಂದರಗೊಳಿಸುತ್ತಿರುವ ಅಡ್ಕಾರಿನ ಕ್ರಿಯೇಟಿವ್ ಕಲಾವಿದ ಶಶಿ ಅಡ್ಕಾರ್‌ರಿಗೆ ಸೆಲ್ಯೂಟ್ ದಿ...
ಜನತಾ ನ್ಯೂಸ್ ಕನ್ನಡ ವತಿಯಿಂದ ಆಯೋಜಿಸಲಾಗಿರುವ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಕುಮಾರ್ ಪೆರ್ನಾಜೆ ಅವರನ್ನು ಇತ್ತೀಚೆಗೆ ಬೆಂಗಳೂರಿನ ನಾಗರಬಾವಿ ಕೆ.ಎಲ್.ಇ ಕಾನೂನು ಕಾಲೇಜ್ ಹತ್ತಿರ ಅರಮನೆ ವೆನ್ಯು ನಲ್ಲಿ ಮನರಂಜನೆ ಫ್ಯಾಶನ್ ಶೋ ಮ್ಯೂಸಿಕಲ್ ನೈಟ್ ನೃತ್ಯ ಸಂಜೆ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ ಜೇನು ಕೃಷಿ ಕ್ಷೇತ್ರದಲ್ಲಿನ ಸಾಧನೆಗಳ ಸರದಾರನಿಗೆ ಗಣನೀಯ ಸೇವೆ...
ಸುಳ್ಯದ ಕಾಯರ್ತೋಡಿ ಕಲ್ಕಳ ಮನೆ ಕೆ.ವಿ ವೆಂಕಟ್ರಮಣ ಗೌಡರ ಧರ್ಮಪತ್ನಿ ಶ್ರೀಮತಿ ಹರಿಣಿ.ಕೆ.ವಿ ರವರು ಅಲ್ಪಕಾಲದ ಅಸೌಖ್ಯದಿಂದ ಏ.16ರಂದು ನಿಧನರಾದರು. ಮೃತರಿಗೆ 75 ವರ್ಷ ವಯಸ್ಸಾಗಿತ್ತು. ಮೃತರು ಪತಿ, ಪುತ್ರ ಕೆ.ವಿ ಮೋಹನ್, ಪುತ್ರಿ ಶ್ರೀಮತಿ ಬೀನಾ, ಅಳಿಯ ಕೆ. ನಾಗಪ್ಪ ಗೌಡ ಮಂಗಳೂರು, ಸೊಸೆ ಶ್ರೀಮತಿ ಪ್ರತಿಮಾ ಮೋಹನ್ ಹಾಗೂ ಮೊಮ್ಮಕ್ಕಳು, ಕುಟುಂಬಸ್ಥರು ಹಾಗೂ...
ಐನೆಕಿದು ಗ್ರಾಮದ ಖಾಸಗಿ ಜಾಗದ ಹತ್ತಿರದ ಕಾಡಿನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಮೃತದೇಹದ ಅಸ್ಥಿಪಂಜರವೊಂದು ಪತ್ತೆಯಾಗಿದೆ ಎಂದು ತಿಳಿದುಬಂದಿದ್ದು, ಇದು ಸುಮಾರು ನಾಲ್ಕು ತಿಂಗಳುಗಳ ಹಿಂದೆ ನಾಪತ್ತೆಯಾಗಿದ್ದ ಯಶವಂತ ಕಾಜಿಮಡ್ಕ ಎಂಬುವವರ ಮೃತದೇಹ ಆಗಿರಬಹುದೇ ಎನ್ನುವ ಶಂಕೆ ಇದೀಗ ವ್ಯಕ್ತವಾಗಿದೆ. ಯಶವಂತ ರವರು ಕಳೆದ ನಾಲ್ಕು ತಿಂಗಳುಗಳ ಹಿಂದೆ ನಾಪತ್ತೆಯಾಗಿದ್ದು, ಪತ್ತೆಯಾಗಿರಲಿಲ್ಲ. ಈ ಕುರಿತು ಸುಬ್ರಹ್ಮಣ್ಯ...
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಹಾಗೂ ರಾಣಿ ಪುಷ್ಪಲತಾ ದೇವಿ ಸಾರಥ್ಯದ ಕರ್ನಾಟಕ ಸಾಮಾಜಿಕ, ಸಾಂಸ್ಕೃತಿಕ ಅಭಿವೃಧ್ಧಿ ಪ್ರತಿಷ್ಠಾನ ಮಂಗಳೂರು ಇವುಗಳ ಸಂಯುಕ್ತ ಸಮಾರಂಭದಲ್ಲಿ ಕನ್ನಡ ಝೇಂಕಾರ ಕಾರ್ಯಕ್ರಮ ಮಂಗಳೂರು ಪುರಭವನದ ಎದುರುಗಡೆಯ ರಾಜಾಜಿ ಪಾರ್ಕಿನಲ್ಲಿ ಏ.25ರಂದು ಸಂಜೆ ನಡೆಯಲಿದ್ದು, ಕವಿಗೋಷ್ಠಿ, ಪ್ರಶಸ್ತಿ ಪ್ರದಾನ, ಗೀತಗಾಯನ, ಸಾಂಸ್ಕೃತಿಕ ಕಾರ್ಯಕ್ರಮಗಳು ಮೆರುಗು ತುಂಬಲಿದ್ದು, ಸಮಧುರ ಸಂಜೆಯ ಅನಾವರಣವಾಗಲಿದೆ....
Loading posts...
All posts loaded
No more posts
